ಅಸುಂಡಿಯಲ್ಲಿ ಎಂಎಸ್‌ಐಎಲ್ ಮಳಿಗೆ ಸ್ಥಳಾಂತರಕ್ಕೆ ಆಗ್ರಹಿಸಿ ಸಾರ್ವಜನಿಕರು ಪ್ರತಿಭಟನೆ ನಡೆಸಿದರು. ದಾವಲ್ ಶಿಂದೋಗಿ, ಐ.ಎಂ.ಮಠಪತಿ, ಕಲ್ಮೇಶ ಬನ್ನೂರ, ಸುನಂದಾ ಹುಡೇದ, ಲಕ್ಷ್ಮಿ ಮಡಿವಾಳರ ಇತರರಿದ್ದರು. 
ಬೆಳಗಾವಿ

ಎಂಎಸ್‌ಐಎಲ್ ಮಳಿಗೆಗೆ ಬೀಗ

ವಿದ್ಯಾ ಶೆಟ್ಟನಗೌಡ್ರ
ಸವದತ್ತಿ: ಅಸುಂಡಿ ಹಾಗೂ ಕರೀಕಟ್ಟಿ ಗ್ರಾಮದ ಮಧ್ಯಭಾಗದಲ್ಲಿರುವ ಎಂಎಸ್‌ಐಎಲ್ ಮದ್ಯ ಮಾರಾಟ ಅಂಗಡಿ ಸ್ಥಳಾಂತರಿಸುವಂತೆ ಒತ್ತಾಯಿಸಿ ಅಸುಂಡಿ ಗ್ರಾಮದ ಮಹಿಳೆಯರು, ಗ್ರಾಮಸ್ಥರು ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಬುಧವಾರ ಅಂಗಡಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಿದರು.
೨೦೨೩ರಿಂದಲೂ ಅಂಗಡಿ ಸ್ಥಳಾಂತರಕ್ಕೆ ಸಂಬಂಧಿಸಿದಂತೆ ವಿವಿಧ ಇಲಾಖೆಗಳಿಗೆ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು. ಪ್ರತಿಭಟನೆ ಸ್ಥಳಕ್ಕೆ ಸವದತ್ತಿ ಅಬಕಾರಿ ನಿರೀಕ್ಷಕ ದಾವಲ್ ಶಿಂದೋಗಿ, ಮುರಗೋಡ, ರಾಮದುರ್ಗ ಪೊಲೀಸ್ ಠಾಣೆಯ ಪಿಐ ಹಾಗೂ ಸವದತ್ತಿ ತಾಲೂಕು ಎಂಎಸ್‌ಐಎಲ್ ರಿಟೇಲ್ ಡೈರೆಕ್ಟರ್ ಕೆಂಚಪ್ಪ ಬನಪ್ಪನವರ ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತುಕತೆ ನಡೆಸಿದರು.
ಅಬಕಾರಿ ನಿರೀಕ್ಷಕ ದಾವಲ ಶಿಂದೋಗಿ ಮಾತನಾಡಿ, ಅಂಗಡಿ ಸ್ಥಳಾಂತರಕ್ಕೆ ೧೫ ದಿನಗಳ ಕಾಲಾವಕಾಶ ನೀಡುವಂತೆ ಮನವಿ ಮಾಡಿದರು. ಗ್ರಾಮಸ್ಥರು ಒಪ್ಪದಿದ್ದಾಗ ಎಂಎಸ್‌ಐಎಲ್ ಅಂಗಡಿಗೆ ಬೀಗ ಹಾಕಿಸಿದರು. ಅಂಗಡಿ ಸ್ಥಳಾಂತರವಾಗುವವರೆಗೆ ಬೀಗ ತೆರೆಯಬಾರದು ಎಂದು ಸೂಚಿಸಿದರು.
ವೈ.ಎಸ್.ಇಂಗಳಗಿ, ಕರವೇ ತಾಲೂಕು ಕಾರ್ಯದರ್ಶಿ ಗಂಗಪ್ಪ ಇನಾಮತಿ, ಶಂಕರ ಸಾಂವಕ್ಕನವರ, ಪ್ರಕಾಶ ಚಿಕ್ಕಣ್ಣವರ, ಸಂತೋಷ ಹಾಳಮನಿ, ಈಶ್ವರ ಅಬ್ಬಾರ, ಮಡಿವಾಳಪ್ಪ ನರಗುಂದ, ಶಿವಪ್ಪ ಕರೀಕಟ್ಟಿ, ಮಹಾಂತೇಶ ಶೆಟ್ಟರ, ಈರಪ್ಪ ತೋಟಗಿ, ಸುನಂದಾ ಹುಡೇದ, ಲಕ್ಷ್ಮಿ ಮಡಿವಾಳರ, ತಾಯವ್ವ ಜೋಡಗೇರ, ಪಾರ್ವತೆವ್ವ ಮುನವಳ್ಳಿ ಇತರರಿದ್ದರು.