ಬೆಳಗಾವಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಗೀತಾ ಕಿತ್ತೂರ ಮಾತನಾಡಿದರು. ಪ್ರತಿಭಾ ಮುತಾಲಿಕ, ಭಾರತಿ ಒಡವಿ, ಲಕ್ಷ್ಮೀ ಕೊಳಕಿ ಇದ್ದಾರೆ. 
ಬೆಳಗಾವಿ

ವಿವಾಹಿತ ಮಹಿಳೆಯರಿಗಾಗಿ ಮಿಸೆಸ್ ಬೆಳಗಾವಿ ಡಿವಾ ಸ್ಪರ್ಧೆ

ಬೆಳಗಾವಿ : ಶಾಲಾ-ಕಾಲೇಜ್‌ಗಳಲ್ಲಿ ಮಹಿಳಾ ಶೌಚಾಲಯ ನಿರ್ಮಾಣಕ್ಕೆ ಅನುದಾನ ಕ್ರೋಢೀಕರಿಸಲು ಲಯನ್ಸ್ ಕ್ಲಬ್ ಆಫ್ ಬೆಳಗಾವಿ ವತಿಯಿಂದ ವಿವಾಹಿತ ಮಹಿಳೆಯರಿಗಾಗಿ ‘ಮಿಸೆಸ್ ಬೆಳಗಾವಿ ಡಿವಾ’ ಶೀರ್ಷಿಕೆಯಡಿ ಪ್ಯಾಷನ್ ಶೋ ಆಯೋಜಿಸಲಾಗುತ್ತಿದೆ ಎಂದು ಕ್ಲಬ್ ಅಧ್ಯಕ್ಷೆ ಗೀತಾ ಕಿತ್ತೂರ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ರಕ್ತದಾನ ಶಿಬಿರ, ಶುದ್ಧ ಕುಡಿಯುವ ನೀರಿನ ಘಟಕ ಅಳವಡಿಕೆ, ಪ್ರತಿ ಗುರುವಾರ ಸರ್ಕಾರಿ ಆಸ್ಪತ್ರೆಗಳ ಹತ್ತಿರ 200 ಜನ ಅಗತ್ಯ ಇರುವವರಿಗೆ ಪೌಷ್ಟಿಕ ಆಹಾರ ವಿತರಣೆ, ಕೃತಕ ಜೈಪುರ ಕಾಲು ಜೋಡಣೆಯಂತಹ ಕಾರ್ಯ ಮಾಡಿದ್ದೇವೆ. ಈಗ ಹೊಸದಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿನಿಯರಿಗೆ ಕ್ಲಬ್‌ನಿಂದ ಶೌಚಾಲಯ ನಿರ್ಮಿಸಿಕೊಡಲು ನಿಧಿ ಸಂಗ್ರಹಿಸಲು ಈ ಸ್ಪರ್ಧೆ ಆಯೋಜಿಸಿದ್ದೇವೆ ಎಂದರು.
ನಗರ ವ್ಯಾಪ್ತಿಯ ವಿವಾಹಿತ ಮಹಿಳೆಯರು ಮಾತ್ರ ಈ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಅರ್ಹರು. 25ರಿಂದ 35, 36ರಿಂದ 45 ಹಾಗೂ 46ರಿಂದ 55 ವರ್ಷ ವಯೋಮಾನದೊಳಗಿನ ಒಟ್ಟು ಮೂರು ವಿಭಾಗಗಳಲ್ಲಿ ಈ ಸ್ಪರ್ಧೆ ನಡೆಯಲಿದೆ. ನಗರದ ವಿವಿಧೆಡೆ ನೋಂದಣಿ ಆರಂಭಗೊಂಡಿದ್ದು, ನೋಂದಣಿ ಪೂರ್ಣಗೊಂಡ ಬಳಿಕ ಮಾ.10ರೊಳಗೆ ಪ್ರಾಥಮಿಕ ಹಂತದ ಸುತ್ತಿನಲ್ಲಿ ಶಾರೀರಿಕ ಸದೃಢತೆ, ಪ್ರತಿಭೆ ಹಾಗೂ ಆಹಾರ ತಯಾರಿಕೆ ಸ್ಪರ್ಧೆ 10 ಸ್ಪರ್ಧಿಗಳನ್ನು ಅಂತಿಮ ಸುತ್ತಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ತಿಳಿಸಿದರು.
ಮಾ. 21ರಂದು ನಗರದ ಮಿಲೇನಿಯಂ ಗಾರ್ಡನ್‌ದಲ್ಲಿ ಫೈನಲ್ ಇರಲಿದೆ. ಬಾಲಿವುಡ್‌ನ ಸೆಲೆಬ್ರಿಟಿಯೊಬ್ಬರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗುತ್ತಿದೆ. ಫೈನಲ್‌ನ ಮೊದಲ ಸುತ್ತಿನಲ್ಲಿ ಭಾರತೀಯ ಸೀರೆ ಹಾಗೂ ವೆಸ್ಟನ್ ಗೌನ್ ವೇಷದಲ್ಲಿ ಪ್ರತ್ಯೇಕ ಕ್ಯಾಟ್‌ವ್ಯಾಕ್ ಹಾಗೂ ಸ್ವ ಪರಿಚಯದ ಇರುತ್ತದೆ. ಇದರಲ್ಲಿ ಪ್ರತಿ ವಿಭಾಗದಿಂದ ಪ್ರಥಮ ಮತ್ತು ದ್ವಿತೀಯ ಸ್ಥಾನ ನೀಡಲಾಗುವುದು. ಕೊನೆಗೆ ಎಲ್ಲವನ್ನೂ ಸೇರಿಸಿ ಅಂತಿಮವಾಗಿ ಒಬ್ಬರಿಗೆ ‘ವಿಸೆಸ್ ಬೆಳಗಾವಿ ಡಿವಾ-2026’ ಕಿರೀಟ್ ನೀಡಲಾಗುವುದು ಎಂದು ಮಾಹಿತಿ ನೀಡಿದರು.
ಪ್ರತಿಭಾ ಮುತಾಲಿಕ, ಭಾರತಿ ಒಡವಿ, ಲಕ್ಷ್ಮೀ ಕೊಳಕಿ ಸುದ್ದಿಗೋಷ್ಠಿಯಲ್ಲಿದ್ದರು.