ಕೆಎಲ್‌ಎಸ್ ಐಎಂಇಆರ್‌ನಲ್ಲಿ ಈಚೆಗೆ ಪ್ಲೇಸ್‌ಮೆಂಟ್ ಸಾಧಕ ವಿದ್ಯಾರ್ಥಿಯ ಪಾಲಕರನ್ನು ಸನ್ಮಾನಿಸಲಾಯಿತು. ಸಮೀರ್ ಶೇಖ್, ಡಾ.ಆರ್ೀ ಶೇಖ್, ಸಂತೋಷ ತೌಕಾರಿ ಇತರರಿದ್ದರು.
ಬೆಳಗಾವಿ: ವಿದ್ಯಾರ್ಥಿಗಳು ಸಾಧನೆ ಮಾಡುವಲ್ಲಿ ಒಂದು ವೇಳೆ ವಿಲರಾದರೆ, ಪಾಲಕರು ಅವರಿಗೆ ಮತ್ತೊಂದು ಅವಕಾಶ ಕೊಟ್ಟು ಹುರುದುಂಬಿಸಬೇಕು. ಅಂದಾಗ ಅವರಿಗೆ ಮುನ್ನುಗ್ಗಲು ಸಹಾಯವಾಗುತ್ತದೆ ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ಎಚ್‌ಆರ್ ಬಿಸಿನೆಸ್ ಪಾರ್ಟ್ನರ್ ಸಮೀರ್ ಶೇಖ್ ಹೇಳಿದರು. ಕೆಎಲ್‌ಎಸ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ ಎಜುಕೇಷನ್ ಆ್ಯಂಡ್ ರಿಸರ್ಚ್ (ಕೆಎಲ್‌ಎಸ್ ಐಎಂಇಆರ್) ನಲ್ಲಿ ಈಚೆಗೆ ಏರ್ಪಡಿಸಿದ್ದ ವಾರ್ಷಿಕ ಪ್ಲೇಸ್‌ಮೆಂಟ್ ಡೇಯಲ್ಲಿ ಅತಿಥಿಯಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕೆಎಲ್‌ಎಸ್ ಐಎಂಇಆರ್ ನಿರ್ದೇಶಕ ಡಾ.ಆರೀಫ್ ಶೇಖ್ ಮಾತನಾಡಿ, 2025ರ ಎಂಬಿಎ ಬ್ಯಾಚ್‌ನ ಆರು ವಿದ್ಯಾರ್ಥಿಗಳು ಫೆಡರಲ್ ಬ್ಯಾಂಕ್‌ನಲ್ಲಿ ವಾರ್ಷಿಕ 16.42 ಲಕ್ಷ ರೂ. ಗರಿಷ್ಠ ವೇತನ ಪ್ಯಾಕೇಜ್ ಪಡೆದಿರುವುದು ಸಂಸ್ಥೆಯ ಇತಿಹಾಸದಲ್ಲೇ ಮಹತ್ವದ ಪ್ಲೇಸ್‌ಮೆಂಟ್ ಆಗಿದೆ ಎಂದರು. ಎಚ್‌ಡಿಎಫ್‌ಸಿ ಬ್ಯಾಂಕ್ ಶಾಖಾ ವ್ಯವಸ್ಥಾಪಕ ಸಂತೋಷ ತೌಕಾರಿ ಮಾತನಾಡಿದರು. ಪ್ರಾಧ್ಯಾಪಕ ಡಾ.ಸುಶೀಲಕುಮಾರ ಪಾರ ಸ್ವಾಗತಿಸಿದರು. ಅತುಲ ಕದಮ ವರದಿ ಓದಿದರು. ರಶ್ಮಿ ಹಾರ್ತಿ ವಂದಿಸಿದರು.