ಕೊಳವಿ ಹೊರವಲಯದಲ್ಲಿ ಗ್ರಾಮದೇವತೆ ಸೇರಿದಂತೆ ಐದು ದೇವಸ್ಥಾನಗಳ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಯಿತು. ಬಸಯ್ಯ ಹುಲಕಂತಿ ಸ್ವಾಮೀಜಿ, ಸಂಗಯ್ಯ ಸ್ವಾಮೀಜಿ, ಮಲ್ಲಪ್ಪ ಪಾಟೀಲ ಇತರರಿದ್ದರು.
ಗ್ರಾಮದ ಭಕ್ತರೆಲ್ಲ ಒಗ್ಗೂಡಿ ತನು, ಮನ, ಧನದಿಂದ ಸೇವೆ ಸಲ್ಲಿಸುವ ಮೂಲಕ ಕೊಳವಿಯಲ್ಲಿ ಸುಮಾರು 80 ಲಕ್ಷ ರೂ. ವೆಚ್ಚದಲ್ಲಿ ಐದು ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಮುಂದಾಗಿರುವ ಕಾರ್ಯ ಮಾದರಿಯಾಗಿದೆ ಎಂದು ಸ್ಥಳೀಯ ಬಸಯ್ಯ ಹುಲಕಂತಿ ಸ್ವಾಮೀಜಿ ಹೇಳಿದರು.
ಗೋಕಾಕ ತಾಲೂಕಿನ ಕೊಳವಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಗ್ರಾಮ ದೇವತೆ, ದುರ್ಗಾದೇವಿ, ಕರೆಮ್ಮದೇವಿ, ರಾಮಲಿಂಗೇಶ್ವರ ಹಾಗೂ ಬಸವೇಶ್ವರ ದೇವಸ್ಥಾನಗಳ ನಿರ್ಮಾಣದ ಭೂಮಿಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗ್ರಾಮದೇವತೆ ದುಷ್ಟಶಕ್ತಿಗಳಿಂದ ಗ್ರಾಮ ಹಾಗೂ ಭಕ್ತರು ರಕ್ಷಿಸುತ್ತಾಳೆ. ಶ್ರದ್ಧಾ, ಭಕ್ತಿಯಿಂದ ಗ್ರಾಮದೇವತೆ ಆರಾಧಿಸಿದರೆ ಸಂಕಷ್ಟಗಳು ದೂರವಾಗಿ ಸಮೃದ್ಧ ಬದುಕು ಪ್ರಾಪ್ತವಾಗುತ್ತದೆ ಎಂದರು. ಮುಖಂಡ ಮಲ್ಲಪ್ಪ ಪಾಟೀಲ ಮಾತನಾಡಿ, ಕೊಳವಿ ಗ್ರಾಮದಲ್ಲಿ ಎಲ್ಲರ ಸಹಕಾರದಿಂದ ಐತಿಹಾಸಿಕ ದೇವಸ್ಥಾನಗಳ ಜೀರ್ಣೋದ್ಧಾರ ಕೈಗೊಳ್ಳಲಾಗಿದ್ದು, ಶಾಸಕರು ಸ್ಪಂದಿಸಿದ್ದಾರೆ. ಮುಂಬರುವ ಎರಡು ವರ್ಷದಲ್ಲಿ ದೇವಸ್ಥಾನಗಳ ಕಟ್ಟಡ ಕಾಮಗಾರಿ ಪೂರ್ಣಗೊಳಿಸಿ ಗ್ರಾಮದಲ್ಲಿ 21 ವರ್ಷದ ಬಳಿಕ ಅದ್ದೂರಿ ಗ್ರಾಮದೇವತೆ ಜಾತ್ರೆ ಹಾಗೂ ರಥೋತ್ಸವ ನೆರವೇರಿಸಲಾಗುವುದು ಎಂದರು.
ಸಂಗಯ್ಯ ಸ್ವಾಮೀಜಿ, ಶಂಕರಯ್ಯ ಮಠಪತಿ, ಈರಯ್ಯ ಹಿರೇಮಠ, ಚನ್ನಯ್ಯ ಮಠಪತಿ, ಬಸವರಾಜ ಬಡಿಗೇರ, ಗುರುಪಾದ ಬಡಿಗೇರ, ಕರೆಪ್ಪ ಹರಿಜನ, ಬಾಳಯ್ಯ ಪೂಜೇರಿ, ಮಲ್ಲಿಕಾರ್ಜುನ ಸ್ವಾಮಿಗೋಳ, ಕೆಂಚನಗೌಡ ಪಾಟೀಲ, ಲಕ್ಷಪ್ಪ ಕಾಮಲಿ, ಜಿರ್ಲೆಪ್ಪ ಸಿಂಗಾಡಿ, ಸಿದ್ದಪ್ಪ ತಳಕಟ್ನಾಳ, ಭೀಮಶಿ ಪಾತ್ರೋಟ, ಶಂಕರ ವನಕಿ, ಮಹಾದೇವ ಹಟ್ಟಿಗೌಡರ, ಶಿವು ಅಂಗಡಿ ಇತರರಿದ್ದರು.