ಬೆಳಗಾವಿ ತಾಲೂಕಿನ ರಣಕುಂಡೆ ಗ್ರಾಮದಲ್ಲಿ ರಸ್ತೆಗಳ ನಿರ್ಮಾಣ ಕಾಮಗಾರಿ ಯುವ ಮುಖಂಡ ಮೃಣಾಲ ಹೆಬ್ಬಾಳ್ಕರ್, ಯುವರಾಜ ಕದಂ, ಭರಮಣ್ಣ ಪಾಟೀಲ, ವಸಂತ ತಹಸೀಲ್ದಾರ, ಬಾಬಾಜಾನ್ ಸಯ್ಯದ್ ಇತರರು ಚಾಲನೆ ನೀಡಿದರು
ಬೆಳಗಾವಿ: ತಮ್ಮ ಕ್ಷೇತ್ರದಲ್ಲಿ ಹೆಚ್ಚಿನ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತ, ಮೂಲಭೂತ ಸೌಕರ್ಯಗಳ ಸುಧಾರಣೆಯಲ್ಲಿ ಕ್ರಾಂತಿ ಮಾಡುತ್ತಿರುವ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು, ತಮ್ಮ ಜನರಿಗೆ ನೆಮ್ಮದಿಯ ಜೀವನ ಒದಗಿಸಿಕೊಡುವ ಗುರಿಯಿಟ್ಟುಕೊಂಡು ಕಾರ್ಯ ಮಾಡುತ್ತಿದ್ದಾರೆ ಎಂದು ಯುವ ಕಾಂಗ್ರೆಸ್ ಮುಖಂಡ ಮೃಣಾಲ ಹೆಬ್ಬಾಳ್ಕರ್ ಹೇಳಿದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ರಣಕುಂಡೆ ಗ್ರಾಮದಲ್ಲಿ ರಸ್ತೆಗಳ ನಿರ್ಮಾಣದ ಕಾಮಗಾರಿಗೆ ಸ್ಥಳೀಯ ಜನಪ್ರತಿನಿಧಿಗಳು, ಮುಖಂಡರೊಂದಿಗೆ ಸೇರಿ ಬುಧವಾರ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಅವರು, ಗ್ರಾಮದಲ್ಲಿ ಸುಮಾರು 71 ಲಕ್ಷ ರೂ. ಅನುದಾನದಲ್ಲಿ ರಸ್ತೆಗಳ ನಿರ್ಮಾಣವಾಗಲಿದೆ. ನಿಗದಿತ ಸಮಯದಲ್ಲಿ ಗುಣಮಟ್ಟದ ರಸ್ತೆ ನಿರ್ಮಿಸಿ, ಸಾರ್ವಜನಿಕರ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಗುತ್ತಿಗೆದಾರರಿಗೆ ಹೇಳಿದರು.
ಕಾಡಾ ಅಧ್ಯಕ್ಷ ಯುವರಾಜ ಕದಂ, ಭರಮಣ್ಣ ಪಾಟೀಲ, ವಸಂತ ತಹಶೀಲ್ದಾರ್, ನೂರ್ ದಶಕೆಲ್ದಾರ್, ನಿಂಗಪ್ಪ ಪಾಟೀಲ, ಬಾಬಾಜಾನ್ ಸಯ್ಯದ್, ಸಿದ್ದರಾಮ ಪಾಟೀಲ, ಬಾಳೇಶ ಜಾಂಬೋಟಿ, ನಿಯಾಜ್ ಬುಖಾರಿ, ಗುಂಡು ಜಾಂಬೋಟಿ, ರಾಮಲಿಂಗ ಮೊರೆ, ರವಳು ಪಾಟೀಲ, ಯಲ್ಲಪ್ಪ ಕಾಂಬಳೆ, ಮಾರುತಿ ಕೊಳೆಕರ ಇತರರಿದ್ದರು.