ಬೆಳಗಾವಿಯ ಗಣೇಶಪುರ ದುರ್ಗಾದೇವಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶುಕ್ರವಾರ ಪೂಜೆ ಸಲ್ಲಿಸಿದರು.  
ಬೆಳಗಾವಿ

ಗಣೇಶಪುರದಲ್ಲಿ ಜಾತ್ರೆಯಲ್ಲಿ ಸಚಿವೆ ಹೆಬ್ಬಾಳ್ಕರ್ ಭಾಗಿ

ಬೆಳಗಾವಿ: ಗಣೇಶಪುರದ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ದೇವಿಗೆ ವಿಶೇಷ ಪೂಜೆ ಸಲ್ಲಿಸಿ, ದರ್ಶನ ಪಡೆದು ನಾಡಿನ ಸುಭೀಕ್ಷೆಗಾಗಿ ಪ್ರಾರ್ಥನೆ ಸಲ್ಲಿಸಿದರು.
ಬಳಿಕ ದೇವರಿಗೆ ನೈವೇದ್ಯ ಸಮರ್ಪಿಸಿ, ಮಹಾಪ್ರಸಾದ ಸೇವೆಗೆ ಚಾಲನೆ ನೀಡಿದರು. ಮಲ್ಲೇಶ ಚೌಗುಲೆ, ರಾಜು ದಂಡಗಲ್ಕರ, ತಿಪ್ಪಣ್ಣ ದಂಡಗಲ್ಕರ, ರಾಜೇಶ ನಾಯಿಕ, ವಿಠ್ಠಲ ವಡ್ಡರ, ಬಾಳಕೃಷ್ಣ ದಂಡಗಲ್ಕರ, ಮಹೇಶ ಕೋಲಕಾರ, ನಿಖಿತಾ ದಂಡಗಲ್ಕರ, ಬೋಸಲೆ, ಚೌಡಪ್ಪ ದಂಡಗಲ್ಕರ, ಭೀಮಾ ಮಂಜಲಕರ, ಪ್ರಕಾಶ ದಂಡಗಲ್ಕರ ಇತರರಿದ್‌ದರು.
ಚೆಕ್ ಹಸ್ತಾಂತರ: ಮಾವಿನಕಟ್ಟಿ ಗ್ರಾಮದ ವಿಠ್ಠಲ ರುಕ್ಮಾಯಿ ಹಾಗೂ ಲಕ್ಷ್ಮಿ ದೇವಿ ಮಂದಿರಗಳ ಜೀರ್ಣೋದ್ಧಾರದ ಕಾಮಗಾರಿಗಳ ಹಿನ್ನೆಲೆಯಲ್ಲಿ ಶುಕ್ರವಾರ ಲಕ್ಷ್ಮೀ ದೇವಿ ಟ್ರಸ್ಟ್ ಸಮಿತಿ ಅಧ್ಯಕ್ಷ ಉಳವಪ್ಪ ಮಲಣ್ಣವರ ನೇತೃತ್ವದ ಗ್ರಾಮಸ್ಥರಿಗೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ 15 ಲಕ್ಷ ರೂ.ಗಳ ಚೆಕ್ ಹಸ್ತಾಂತರಿಸಿದರು.
ದೇವಸ್ಥಾನ ಲೋಕಾರ್ಪಣೆ: ಬೆಳಗಾವಿ ಗ್ರಾಮೀಣ ಕ್ಷೇತ್ರದ ಮೊದಗಾ ಗ್ರಾಮದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಭಾವಕೇಶ್ವರಿ ದೇವಿ ದೇವಸ್ಥಾನದ ವಾಸ್ತುಶಾಂತಿ, ಕಳಸಾರೋಹಣ, ಲೋಕಾರ್ಪಣೆ ಹಾಗೂ ದೇವಿಯ ಮೂರ್ತಿ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮಗಳು ಗುರುವಾರ ಜರುಗಿದವರು. ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಭಾಗವಹಿಸಿ ವಿಶೇಷ ಪೂಜೆ ಸಲ್ಲಿಸಿದರು.