ನಾಗರಮುನ್ನೋಳಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಲಕ್ಷ÷್ಮಣರಾವ ಚಿಂಗಳೆ ಉದ್ಘಾಟಿಸಿದರು ಸಿದ್ಧಪ್ಪ ರ‍್ಯಾಯಿ, ರಾಜಮಾ ಮುಲ್ತಾನಿ, ಎಂ.ಕೆ.ಪೂಜೇರಿ, ಶಾಂತಾ ಬಾನೆ ಇತರರಿದ್ದರು. 
ಬೆಳಗಾವಿ

ಮಹಾತ್ಮರ ದಾರಿಯಲ್ಲಿ ಸಾಗಿ ಜೀವನ ನಡೆಸಲಿ

ಪ್ರಮುಖ ಮುಖ್ಯಾಂಶಗಳು

  • ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಅನಿಸಿಕೆ
  • ವಿವಿಧೆಡೆ ಕನಕದಾಸ ಜಯಂತಿ
ನಾಗರಮುನ್ನೋಳಿ: ಕನಕದಾಸರು ತೋರಿದ ಮಾರ್ಗದಲ್ಲಿ ನಡೆದರೆ ಜೀವನ ಪಾವನವಾಗುತ್ತದೆ ಎಂದು ಬೆಳಗಾವಿ ನಗರಾಭಿವೃದ್ಧಿ ಪ್ರಾಽಕಾರ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ ಹೇಳಿದರು.
ಗ್ರಾಮದ ಸಮುದಾಯ ಭವನದಲ್ಲಿ ಹಾಲುಮತ ಸಮುದಾಯದವರಿಂದ ಶನಿವಾರ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕನಕದಾಸರು ಸಾಮಾಜಿಕ ಅಸಮಾನತೆ ಹೋಗಲಾಡಿಸಲು ಶ್ರಮಿಸಿದ್ದಾರೆ. ಎಲ್ಲ ಸಮುದಾಯಗಳ ಸಹಭಾಗಿತ್ವದಲ್ಲಿ ಜಯಂತಿ ಆಚರಿಸಿದರೆ ಮೆರಗು ಬರುತ್ತದೆ ಎಂದರು.
ಸಂಪನ್ಮೂಲ ವ್ಯಕ್ತಿ ಸಿದ್ದಣ್ಣ ತೇಜಿ, ಉಪನ್ಯಾಸಕ ಸಿ.ಎಸ್.ಪೂಜೇರಿ ಮಾತನಾಡಿ, ಕನಕದಾಸರನ್ನು ಒಂದು ಜಾತಿಗೆ ಸೀಮಿತಗೊಳಿಸಬಾರದು ಎಂದು ಹೇಳಿದರು.
ಇದಕ್ಕೂ ಮೊದಲು ಬಸ್ ನಿಲ್ದಾಣದ ಹತ್ತಿರ ಕನಕದಾಸರ ಭಾವಚಿತ್ರಕ್ಕೆ ಮುಖಂಡ ರಾಜು ಕುಂಬಾರ ಪೂಜೆ ಸಲ್ಲಿಸಿ ಮೆರವಣಿಗೆ ಚಾಲನೆ ನೀಡಿದರು. ಡೊಳ್ಳುಕುಣಿತ, ವಾದ್ಯಮೇಳಗಳು ಮೆರವಣಿಗೆಯ ಮೆರಗು ಹೆಚ್ಚಿಸಿದವು.
ಗ್ರಾಪಂ ಅಧ್ಯಕ್ಷೆ ರಾಜಮಾ ಮುಲ್ತಾನಿ, ಉಪಾಧ್ಯಕ್ಷೆ ಶಾಂತಾ ಬಾನೆ, ಶಂಕರರಾವ ಹೆಗಡೆ, ರಾಜು ಕುಂಬಾರ, ಎಂ.ಕೆ.ಪೂಜೇರಿ, ಶಿವಾನಂದ ರ‍್ಯಾಯಿ, ಲಕ್ಷ್ಮಿಸಾಗರ ಈಟಿ, ಮಾರುತಿ ರ‍್ಯಾಯಿ, ಜ್ಯೋತೆಪ್ಪ ಖಗನ್ನವರ, ರಾಮು ಘಾವಡೆ, ಬಾಳಪ್ಪ ರ‍್ಯಾಯಿ, ವಿನಾಯಕ ಕುಂಬಾರ, ಡಾ.ರವಿ ಇಂಚಲಕಾರಂಜಿ, ಅನಿಲ ಈಟಿ, ರಾಹುಲ ಪೂಜೇರಿ, ಸಿದ್ರಾಮ್ ಹಿರೇಕುರಬರ, ಸದಾಶಿವ ಮಠದ, ಶಾಹೀದ್ ಗೌಂಡಿ, ಸಂಜು ಬಂಬಲವಾಡಿ, ಕಾಮು ರ‍್ಯಾಯಿ, ರಾಘವೇಂದ್ರ ಬಡಿಗೇರ, ರಾಜು ಚೌಹ್ವಾಣ, ವಾಶಪ್ಪ ಬಂಬಲವಾಡಿ, ಶಿವಾನಂದ ರ‍್ಯಾಯಿ, ಎಸ್.ಆರ್.ಕುದರಗಿ, ಬಿ.ಎಸ್.ಕಮತೆ ಇತರರಿದ್ದರು.