ಬಾಡಗಿಯಲ್ಲಿ ಶ್ರೀ ಅಮ್ಮಾಜೇಶ್ವರಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ ಕಾರ್ಯಕ್ರಮದಲ್ಲಿ ಸಿದ್ಧಲಿಂಗ ಸಾಧುಮಹಾರಾಜರು, ಜ್ಞಾನೇಶ್ವರ ಸ್ವಾಮೀಜಿ, ಮಹಾಂತೇಶ, ಚಂದ್ರಶೇಖರಯ್ಯ ಹಿರೇಮಠ, ಭೀಮಪ್ಪ ಕಾಂಬಳೆ ಇತರರಿದ್ದರು. 
ಬೆಳಗಾವಿ

ಗುರುವಿನ ಆಶೀರ್ವಾದ ಪಡೆದುಕೊಳ್ಳಲಿ

ಆದಿಶಕ್ತಿಯ ಅವತಾರ ಅಮ್ಮಾಜೇಶ್ವರಿ ತಾಯಿಯನ್ನು ಭಕ್ತಿಯಿಂದ ಪೂಜಿಸಿದರೆ ಕಷ್ಟಗಳು ದೂರವಾಗುತ್ತವೆ ಎಂದು ಬಾಡಗಿ ಸಿದ್ಧಲಿಂಗ ಸಾಧುಮಹಾರಾಜರು ಹೇಳಿದರು.

ಸಮೀಪದ ಬಾಡಗಿ ಗ್ರಾಮದಲ್ಲಿ ಮಂಗಳವಾರ ಶ್ರೀ ಅಮ್ಮಾಜೇಶ್ವರಿ ದೇವಸ್ಥಾನದಲ್ಲಿ ಮೂರ್ತಿ ಪ್ರತಿಷ್ಠಾಪನೆ ಮತ್ತು ಕಲಶಾರೋಹಣ ನೆರವೇರಿಸಿ ಮಾತನಾಡಿ, ತಂದೆ-ತಾಯಿಯನ್ನು ಗೌರವಿಸುವವರು ಪರಮಾತ್ಮನಿಗೆ ಹತ್ತಿರವಾಗುತ್ತಾರೆ. ಪ್ರತಿಯೊಬ್ಬರೂ ಗುರುವಿನ ಆಶೀರ್ವಾದ ಪಡೆದುಕೊಳ್ಳಬೇಕು ಎಂದರು.
ನಾಗರ‌್ಯಾಳದ ಸಿದ್ಧಾರೂಢ ಆಶ್ರಮದ ಜ್ಞಾನೇಶ್ವರ ಸ್ವಾಮೀಜಿ ಮಾತನಾಡಿದರು. ಮಹಾಂತೇಶ ಪೂಜಾರಿ, ಬಸಪ್ಪ ಪೂಜಾರಿ, ಚಂದ್ರಶೇಖರಯ್ಯ ಹಿರೇಮಠ, ವಿಜಯಾನಂದ ಮಹಾರಾಜರು, ಭೀಮಪ್ಪ ಕಾಂಬಳೆ, ಬಾಳು ಕಾಂಬಳೆ, ರಾವಸಾಬ ಬಿರಾದಾರ, ರಾಜು ಬಿರಾದಾರ, ಕಲ್ಲಪ್ಪ ಪಾಟೀಲ, ಸಿದ್ದು ಜೋಗಾಣಿ, ಸಿದ್ದು ಹಳ್ಳಿ, ಭೀಮಪ್ಪ ಚಮಕೇರಿ, ವಿಠ್ಠಲ ಮುಧೋಳ ಇತರರಿದ್ದರು.