ಹುಕ್ಕೇರಿ ತಾಪಂ ಸಭಾಭವನದಲ್ಲಿ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದು ಕೊರತೆ ಸಭೆಯಲ್ಲಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು. ತಹಸೀಲ್ದಾರ್ ಬಲರಾಮ ಕಟ್ಟಿಮನಿ, ಇಒ ಟಿ.ಆರ್.ಮಲ್ಲಾಡದ ಇತರರಿದ್ದರು. 
ಬೆಳಗಾವಿ

ಕುಡಿವ ನೀರಿನ ಕೊರತೆಯಾಗದಿರಲಿ

ಹುಕ್ಕೇರಿ: ಬೇಸಿಗೆಯಲ್ಲಿ ಕುಡಿಯುವ ನೀರಿನ ಭೀತಿ ತಲೆದೋರದಂತೆ ಕ್ರಮ ಕೈಗೊಳ್ಳುವಂತೆ ತಾಲೂಕಾಡಳಿತಕ್ಕೆ ಸಚಿವ ಸತೀಶ ಜಾರಕಿಹೊಳಿ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಮಾತನಾಡಿದರು. ಜಲಾಶಯದಲ್ಲಿ ನೀರಿನ ಮಟ್ಟ ಕುಸಿಯುತ್ತಿದ್ದು, ಇರುವ ನೀರನ್ನು ಮಳೆಗಾಲದವರೆಗೆ ಹಿತಮಿತವಾಗಿ ಬಳಸಿಕೊಳ್ಳಬೇಕಿದೆ. ಸಾರ್ವಜನಿಕರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಆಗಬಾರದು. ನೀರಿನ ಸಮಸ್ಯೆ ಆದಲ್ಲಿ ಟ್ಯಾಂಕರ್ ಮೂಲಕ ಸರಬರಾಜು ಮಾಡುವಂತೆ ಸೂಚಿಸಿದರು.
ರಸ್ತೆಗಳ ಸುಧಾರಣೆಗಾಗಿ ಮುಖಂಡರು ಮನವಿ ಮಾಡಿಕೊಂಡರು. ವಿವಿಧ ಗ್ರಾಮಗಳ ರಸ್ತೆ ಹಾಳಾಗಿವೆ ಸಾರ್ವಜನಿಕರು ಸಂಚರಿಸುವುದಕ್ಕೆ ತೊಂದರೆಯಾಗುತ್ತ್ತಿದೆ. ಅದಷ್ಟು ಬೇಗ ರಸ್ತೆ ಸುಧಾರಣೆಗೆ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸುವಂತೆ ನಿವೇದಿಸಿಕೊಂಡರು.
ಬಿಇಒ ಪ್ರಭಾವತಿ ಪಾಟೀಲ ಮಾತನಾಡಿ, ಕಳೆದ ವರ್ಷ ಸರ್ಕಾರದಿಂದ ಮಂಜೂರಾಗಿದ್ದ, ಶಾಲಾ ಕೊಠಡಿಗಳ ನಿರ್ಮಾಣ ಕಾರ್ಯ ಮುಗಿದಿವೆ. ಬರುವ ವರ್ಷ 123 ಕೊಠಡಿಗಳ ನಿರ್ಮಾಣ ಅಗತ್ಯ ಇದೆ ಎಂದರು.
ಸಚಿವ ಸತೀಶ ಜಾರಕಿಹೊಳಿ ಮಾತನಾಡಿ, ಶೈಕ್ಷಣಿಕ ಪ್ರಗತಿಗಾಗಿ ಸರ್ಕಾರ ಸಾಕಷ್ಟು ಅನುದಾನ ನೀಡುತ್ತಿದ್ದು, ಮುಂಬರುವ ಶೈಕ್ಷಣಿಕ ವರ್ಷದಲ್ಲಿ ಅವಶ್ಯಕತೆ ಇರುವ ಶಾಲಾ ಕೊಠಡಿಗಳ ವಿವರ ಸಲ್ಲಿಸುವಂತೆ ಬಿಇಒಗೆ ತಿಳಿಸಿದರು. ಪಡಿತರ ವಿತರಣೆ ಸಮಸ್ಯೆ ಕುರಿತು ಪ್ರತ್ಯೇಕ ಸಭೆ ಕರೆದು ವಿಚಾರಿಸುವುದಾಗಿ ತಿಳಿಸಿದರು.
ತಹಸೀಲ್ದಾರ್ ಬಲರಾಮ ಕಟ್ಟಿಮನಿ, ತಾಪಂ ಇಒ ಟಿ.ಆರ್.ಮಲ್ಲಾಡದ, ಲೋಕೋಪಯೋಗಿ ಇಲಾಖೆ ಎಇಇ ಪ್ರವೀಣ ಮಾಡ್ಯಾಳ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಶ್ಯಾನೂರ ತಹಸೀಲ್ದಾರ್, ಮುಖಂಡರಾದ ವಿಜಯ ರವದಿ, ಚಂದು ಗಂಗನ್ನವರ, ಸಲೀಂ ಕಳಾವಂತ, ಮಹಾಂತೇಶ ಮಗದುಮ್ಮ, ಪುರಸಭೆ ಮಾಜಿ ಅಧ್ಯಕ್ಷ ಇಮ್ರಾನ್ ಮೋಮಿಟಿ, ಕೆಂಪಣ್ಣ ಶಿರಹಟ್ಟಿ, ಅಪ್ಪಾಸಾಹೇಬ ಸಾರಾಪುರೆ, ಭೀಮಗೌಡ ಅಮ್ಮಣಗಿ, ಅನಿಲ ಪಾಟೀಲ, ಅರುಣ ಹುದ್ದಾರ, ಭಾವುಸಾಬ ಪಾಂಡ್ರೆ, ಭೀಮಣ್ಣ ರಾಮಗೋನಟ್ಟಿ, ಪಿಐ ಶಿವಶರಣ
ಅವಜಿ, ಮಹೇಶ ಭಜಂತ್ರಿ, ಹೊಳೆಪ್ಪ ಎಚ್., ಡಾ.ಉದಯ ಕುಡಚಿ ಇತರರು ಇದ್ದರು.