ಕಾಗವಾಡ ತಾಲೂಕು ನ್ಯಾಯಾಲಯದಲ್ಲಿ ಹಮ್ಮಿಕೊಂಡಿದ್ದ ಲೋಕ ಅದಾಲತ್ ಪೂರ್ವಭಾವಿ ಸಭೆಯಲ್ಲಿ ನ್ಯಾಯಾಧೀಶೆ ರೂಪಾ ಚಿನಿವಾರ ಮಾತನಾಡಿದರು. ವಿಜಯಕುಮಾರ ಚೌಗುಲೆ, ಎಸ್.ವಿ.ಹಂಜಿ, ಮಹಾಂತೇಶ ಕವಲಾಪುರ ಇತರರಿದ್ದರು.
ಕಾಗವಾಡ: ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಜು.೧೧ರಂದು ಬೃಹತ್ ಲೋಕ ಅದಾಲತ್ ಹಮ್ಮಿಕೊಳ್ಳಲಾಗಿದ್ದು, ಕಕ್ಷಿದಾರರು ಮತ್ತು ಸಾರ್ವಜನಿಕರು ಇದರ ಲಾಭ ಪಡದುಕೊಳ್ಳಬೇಕು ಎಂದು ನ್ಯಾಯಾಧೀಶೆ ರೂಪಾ ಚಿನಿವಾರ ತಿಳಿಸಿದರು.
ತಾಲೂಕು ನ್ಯಾಯಾಲಯದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಲೋಕ್ ಅದಾಲತ್ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ೧,೦೪೦ ಸಿವಿಲ್ ಮತ್ತು ಸುಮಾರು ೧,೬೦೦ ಕ್ರಿಮಿನಲ್ ದಾವೆಗಳಿದ್ದು, ಕಕ್ಷಿದಾರರಿಗೆ ರಾಜಿ ಸಂಧಾನ ಮಾಡಿಕೊಳ್ಳಲು ಅವಕಾಶವಿದೆ. ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಉಪ ತಹಸೀಲ್ದಾರ್ ವಿಜಯಕುಮಾರ ಚೌಗುಲೆ, ಎಎಸ್‌ಐ ಎಸ್.ವಿ.ಹಂಜಿ, ಉಗಾರ ಪುರಸಭೆ ಮತ್ತು ಐನಾಪುರ ಪಪಂ ಮುಖ್ಯಾಧಿಕಾರಿ ಮಹಾಂತೇಶ ಕವಲಾಪುರ, ಸಿಡಿಪಿಒ ರವೀಂದ್ರ ಗುದಿಗೆಣ್ಣವರ, ಆರ್.ಬಿ.ದರೂರ, ಬಿ.ವಿಜಯಕುಮಾರ, ವಕೀಲರ ಸಂಘದ ಉಪಾಧ್ಯಕ್ಷ ಎಸ್.ವಿ.ನಾಂದ್ರೆ, ಕಾರ್ಯದರ್ಶಿ ಎಂ.ಜಿ.ವಡ್ಡರ, ಬಿ.ಜೆ.ಮೋಳೆ, ವೈ.ಎ.ಡಾಂಗೆ, ಎ.ಬಿ.ಪಾಟೀಲ, ಎಸ್.ಜೆ.ಚೌಗುಲೆ, ಪಿ.ಎಂ.ಮಕಾನದಾರ್ ಇತರರಿದ್ದರು.