ಹುಕ್ಕೇರಿ ಸರ್ಕಾರಿ ಪಿಯು ಕಾಲೇಜಿನಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಶಿಲ್ಪಾ ನಿಪನ್ಯಾಳಿ, ಸುಹಾಸಿನಿ ಪಾಟೀಲ, ಪೂಜಾ ಬಾಳಿಕಾಯಿ ಇತರರನ್ನು ಸನ್ಮಾನಿಸಲಾಯಿತು. ಬಿ.ಎಸ್.ಮಗದುಮ್ಮ, ಪಿ.ಜಿ.ಕೊಣ್ಣೂರ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿಗಳು ಉತ್ತಮ ಫಲಿತಾಂಶ ಪಡೆಯಲಿ

ಹುಕ್ಕೇರಿ: ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸರ್ಕಾರ ಕಡಿಮೆ ವೆಚ್ಚದಲ್ಲಿ ಶಿಕ್ಷಣ ನೀಡುತ್ತಿದ್ದು, ಸದುಪಯೋಗ ಪಡೆದು, ಕಾಲೇಜಿನ ಕೀರ್ತಿ ಹೆಚ್ಚಿಸಬೇಕು ಎಂದು ಚಿಕ್ಕೋಡಿ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕ ಪಿ.ಐ.ಭಂಡಾರೆ ಹೇಳಿದರು.
ಸ್ಥಳೀಯ ಸರ್ಕಾರಿ ಪಿಯು ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಬೀಳ್ಕೊಡುಗೆ, ಸ್ನೇಹಸಮ್ಮೇಳನ ಮತ್ತು ನಿವೃತ್ತ ಉಪನ್ಯಾಸಕರಿಗೆ ಸನ್ಮಾನ ಸಮಾರಂಭದಲ್ಲಿ ಮಾತನಾಡಿದರು.
ಸಿಡಿಸಿ ಉಪಾಧ್ಯಕ್ಷ ಬಿ.ಎಸ್.ಮಗದುಮ್ಮ, ನಿವೃತ್ತ ಪ್ರಾಧ್ಯಾಪಕ ಪಿ.ಜಿ.ಕೊಣ್ಣೂರ, ಪ್ರಮೋದ ನಾಯ್ಕ, ಪ್ರಾಚಾರ್ಯ
ಎಂ.ಎನ್.ನಾಯಕ ಮಾತನಾಡಿದರು.
ನಿವೃತ್ತ ಉಪನ್ಯಾಸಕ ಐ.ಡಿ.ಜಕಾತಿ, ಕಾಲೇಜಿಗೆ ಪ್ರಥಮ ಸ್ಥಾನ ಪಡೆದ ಶಿಲ್ಪಾ ನಿಪನ್ಯಾಳಿ, ಸುಹಾಸಿನಿ ಪಾಟೀಲ, ಪೂಜಾ ಬಾಳಿಕಾಯಿ, ಉಪನ್ಯಾಸಕರಾದ ಪ್ರತಿಜ್ಞಾ ಜೈನ, ರಾಜಶ್ರೀ ಖೇಮಾಳೆ, ಶ್ವೇತಾ ಬೆಳಗುಂದಿ, ಪ್ರಶಾಂತ ಮಜಲಟ್ಟಿ ಮತ್ತು ಸವಿತಾ ಕೊಣ್ಣೂರ ಅವರನ್ನು ಸನ್ಮಾನಿಸಲಾಯಿತು.
ವಿದ್ಯಾರ್ಥಿಗಳಾದ ಐಮನ್ ಮಕಾನದಾರ್, ಹಾಲಪ್ಪ ಕಂಕಣವಾಡಿ, ಶಿವಾಣಿ ಮಸರಗುಪ್ಪಿ, ಉಪನ್ಯಾಸಕ ಎ.ಎಂ.ಬಾಗೇವಾಡಿ ಅನಿಸಿಕೆ ವ್ಯಕ್ತಪಡಿಸಿದರು.
ಸವಿತಾ ಏಣಗಿಮಠ, ಸಲೀಂ ನದಾಫ್,ಶೋಕ ಕುಂಬಾರ, ಪ್ರಾಧ್ಯಾಪಕರಾದ ಎ.ಐ.ತಳವಾರ ಇತರರಿದ್ದರು. ನಂದಿನಿ ಬಡಿಗೇರ ಪ್ರಾರ್ಥಿಸಿದರು. ಪ್ರೊ.ಆರ್.ಬಿ.ಪಾಟೀಲ ಸ್ವಾಗತಿಸಿದರು. ಪ್ರೊ.ರಾಘವೇಂದ್ರ ಕುರಣಿ ನಿರೂಪಿಸಿದರು. ಪ್ರೊ.ಪ್ರಸಾದ ವಂದಿಸಿದರು.