ನಗರದ ಕೆಎಲ್‌ಇ ಸಂಸ್ಥೆಯ ಜಿಎ ಪಿಯು ಕಾಲೇಜಿನಲ್ಲಿ ಬುಧವಾರ ಕಾಲೇಜು ಒಕ್ಕೂಟ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಬಸವರಾಜ ಹೆಗ್ಗನಾಯಿಕ ಮಾತನಾಡಿದರು. ಡಿ.ಎಸ್.ಪವಾರ, ಸಿ.ಪಿ.ದೇವರುಷಿ, ಸೋಮು ಮಡಿವಾಳರ, ದಿವ್ಯಾ ಪಾಲಭಾವಿ ಇತರರಿದ್ದರು. 
ಬೆಳಗಾವಿ

ವಿದ್ಯಾರ್ಥಿಗಳ ಓದು ನಿರಂತರವಾಗಿರಲಿ

ಅರ್ಚನಾ ಜಾಧವ
ಬೆಳಗಾವಿ: ವಿದ್ಯಾರ್ಥಿಗಳು ಪರೀಕ್ಷೆ ಸಮಯದಲ್ಲಿ ಮಾತ್ರ ಓದದೇ, ನಿರಂತರವಾಗಿ ಓದಬೇಕು. ಕಠಿಣ ಪರಿಶ್ರಮ ಯಶಸ್ಸಿನ ಗುಟ್ಟಾಗಿದೆ ಎಂದು ಜಿಪಂ ಉಪ ಕಾರ್ಯದರ್ಶಿ ಬಸವರಾಜ ಹೆಗ್ಗನಾಯಕ ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಇಲ್ಲಿನ ಕೆಎಲ್‌ಇ ಸಂಸ್ಥೆಯ ಜಿಎ ಪಿಯು ಕಾಲೇಜಿನಲ್ಲಿ ಬುಧವಾರ ಕಾಲೇಜು ಒಕ್ಕೂಟ ಹಾಗೂ ಎನ್‌ಎಸ್‌ಎಸ್ ಚಟುವಟಿಕೆಗಳ ಸಮಾರೋಪ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕಾಲೇಜಿನ ಹಂತದಲ್ಲಿ ನಿರಂತರ ಅಧ್ಯಯನ ಮಾಡಬೇಕು. ಶಿಸ್ತು, ಕಠಿಣ ಪರಿಶ್ರಮ ಮೈಗೂಡಿಸಿಕೊಂಡರೆ ಜೀವನದಲ್ಲಿ ಎದುರಾಗುವ ಜಟಿಲ ಸಮಸ್ಯೆ ಎದುರಿಸಲು ಸಾಧ್ಯವಾಗುತ್ತದೆ ಎಂದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಿ.ಎಸ್.ಪವಾರ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ಜೀವನದಲ್ಲಿ ಸಾಧನೆ ಮಾಡಿದರೆ ಅದು ಸಂಸ್ಥೆಯ ಕೀರ್ತಿ ಹೆಚ್ಚಿಸಿದಂತಾಗುತ್ತದೆ ಎಂದರು.
ಎನ್‌ಎಸ್‌ಎಸ್ ಅಧಿಕಾರಿ ಟಿ.ಪಿ ಬಾನಕರೆ ಮಾತನಾಡಿದರು. ಉಪಪ್ರಾಚಾರ್ಯ ಸಿ.ಪಿ.ದೇವರುಷಿ, ಸೋಮು ಮಡಿವಾಳರ, ದಿವ್ಯಾ ಪಾಲಭಾವಿ, ಎಚ್.ಎಸ್.ಮಹಿಮಗೋಳ, ಎಸ್.ಎಫ್.ದೇವಲಾಪೂರ, ಎಸ್.ಎಸ್‌ಗಂಗಾಪುರ ಇತರರಿದ್ದರು.