ಬೆಳಗಾವಿಯ ಆರ್ಎಲ್ಎಸ್ ಕಾಲೇಜಿನಲ್ಲಿ ಬುಧವಾರ ತರಬೇತಿ ಕಾರ್ಯಾಗಾರದಲ್ಲಿ ಡಾ.ಡಿ.ಕೆ.ಕಾಂಬಳೆ ಮಾತನಾಡಿದರು. ವಿನೂತಾ ಜೆ.ಬಿ., ಡಾ.ಜೆ.ಎಸ್.ಕವಳೇಕರ, ಡಾ.ವಿನಯಕುಮಾರ ಇತರರಿದ್ದರು.
ಬೆಳಗಾವಿ: ಸಮಗ್ರ ವಿಶ್ವವಿದ್ಯಾಲಯ ಮತ್ತು ಕಾಲೇಜು ನಿರ್ವಹಣಾ ವ್ಯವಸ್ಥೆ (ಯುಯುಸಿಎಂಎಸ್) ತಂತ್ರಾಂಶ ಒಂದು ಸರಳ ಹಾಗೂ ಬಹು ಉಪಯುಕ್ತ ಸಾಧನವಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರವೇಶ ಪ್ರಕ್ರಿಯೆ, ಪಠ್ಯಕ್ರಮ, ಪರೀಾ ಉಪಕ್ರಮಗಳ ಬಗ್ಗೆ ಸವಿಸ್ತಾರವಾದ ತರಬೇತಿ ನೀಡಲಾಗುತ್ತಿದ್ದು, ವಿವಿಧ ಕಾಲೇಜುಗಳ ಸಂಯೋಜಕರು, ಆಡಳಿತ ಸಿಬ್ಬಂದಿ ಸದುಪಯೋಗಪಡಿಸಿಕೊಳ್ಳಬೇಕು ಎಂದು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಉಪಕುಲಸಚಿವ ಡಾ.ಡಿ.ಕೆ.ಕಾಂಬಳೆ ಹೇಳಿದರು.
ನಗರದ ಕೆಎಲ್ಇ ಸಂಸ್ಥೆಯ ರಾಜಾ ಲಖಮಗೌಡ ವಿಜ್ಞಾನ ಮಹಾವಿದ್ಯಾಲಯದಲ್ಲಿ ಗುರುವಾರ ರಾಣಿ ಚನ್ನಮ್ಮ ವಿವಿ ಸಹಯೋಗದಲ್ಲಿ ಆಯೋಜಿಸಿದ್ದ ಯುಯುಸಿಎಂಎಸ್ ತಂತ್ರಾಂಶ ಕುರಿತ ಒಂದು ದಿನದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ರಾಣಿ ಚನ್ನಮ್ಮ ವಿವಿಯ ಸದಾಶಿವ ತೋರಿ, ಲಕ್ಷ$್ಮಣ ಮಾಳಗಿ ಮತ್ತು ವಿಕ್ರಮ ಮಿರ್ಜಿ ತಂತ್ರಾಂಶದ ಕುರಿತು ಮಾಹಿತಿ ತಿಳಿಸಿದರು.
ಪ್ರಾಚಾಯೆರ್ ಡಾ.ಜೆ.ಎಸ್. ಕವಳೇಕರ ಅಧ್ಯಕ್ಷತೆ ವಹಿಸಿದ್ದರು. ಐಕ್ಯುಐಸಿ ಸಂಯೋಜಕ ಡಾ.ವಿನಯ ಕುಮಾರ ಎಂ., ಯುಯುಸಿಎಂಎಸ್ ಸಂಯೋಜಕಿ ವಿನೂತಾ ಜೆ.ಬಿ. ಇತರರಿದ್ದರು. ಕಾರ್ಯಾಗಾರದಲ್ಲಿ ಬೆಳಗಾವಿ ಭಾಗದ 150ಕ್ಕೂ ಹೆಚ್ಚು ಕಾಲೇಜಿನ ಸಿಬ್ಬಂದಿ ಭಾಗವಹಿಸಿದ್ದರು.