ಅರಟಾಳ ಗ್ರಾಪಂ ಕಾರ್ಯಾಲಯದಲ್ಲಿ ಬುದ್ಧ ಪೂರ್ಣಿಮೆ ಆಚರಿಸಲಾಯಿತು. ಮಡಿವಾಳಪ್ಪ ರಾಮಗೊಂಡ, ಮಾಳಪ್ಪ ಕಾಂಬಳೆ, ಅಣ್ಣಪ್ಪ ಕಾಂಬಳೆ, ರಮೇಶ ವಡ್ಡರ, ಶ್ರೀಶೈಲ ಹಟ್ಟಿ, ಗೋಪಾಲ ಹಿರೇಕುರಬರ ಇತರರಿದ್ದರು.
ಅರಟಾಳ: ಗೌತಮ ಬುದ್ಧ ಬೌದ್ಧ ಧರ್ಮದ ಮಹಾನ್ ಚಿಂತಕ. ಆಸೆಯೇ ದುಃಖಕ್ಕೆ ಮೂಲ ಎನ್ನುವ ಸಿದ್ಧ ಮಂತ್ರವನ್ನು ಜಗತ್ತಿಗೆ ಸಾರಿದ ಮಹಾತ್ಮ ಎಂದು ಗ್ರಾಪಂ ಪಿಡಿಒ ಮಡಿವಾಳಪ್ಪ ರಾಮಗೊಂಡ ಹೇಳಿದರು.
ಗ್ರಾಮದ ಗ್ರಾಪಂ ಕಾರ್ಯಾಲಯದಲ್ಲಿ ಶುಕ್ರವಾರ ಬುದ್ಧ ಪೂರ್ಣಿಮೆ ಅಂಗವಾಗಿ ಗೌತಮ ಬುದ್ಧನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ, ಶಾಂತಿ, ಸ್ನೇಹ, ಸಹಬಾಳ್ವೆ ಮತ್ತು ಕಾರುಣ್ಯಗಳನ್ನು ಆದರ್ಶ ಮೌಲ್ಯಗಳೆಂದು ತಿಳಿಸಿದ ಗೌತಮ ಬುದ್ಧನ ಬೋಧನೆ ಹಾಗೂ ಸಂದೇಶಗಳನ್ನು ಎಲ್ಲರೂ ಪಾಲಿಸಬೇಕು ಎಂದರು.
ಮಾಳಪ್ಪ ಕಾಂಬಳೆ, ಅಣ್ಣಪ್ಪ ಕಾಂಬಳೆ, ರಮೇಶ ವಡ್ಡರ, ಯಶೋಧರ ಕಾಂಬಳೆ, ಶ್ರೀಶೈಲ ಹಟ್ಟಿ, ಗೋಪಾಲ ಹಿರೇಕುರಬರ, ಮಹದೇವ ಮಾಂಗ, ಎಸ್.ಎ.ಮಾಳಿ ಇತರರಿದ್ದರು.