ಗುರುಬಸವ ವಿರಕ್ತ ಮಠದಲ್ಲಿ ಹಮ್ಮಿಕೊಂಡಿದ್ದ ಲಿಂ.ಮುರುೇಂದ್ರ ಸ್ವಾಮೀಜಿ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಡಾ.ಚನ್ನಪ್ಪ ಸಂಕ್ರಟ್ಟಿ ಅವರನ್ನು ಸನ್ಮಾನಿಸಲಾಯಿತು. ಶಿವಲಿಂಗ ಸ್ವಾಮೀಜಿ, ಶಿವಲಿಂಗೇಶ್ವರ ಸ್ವಾಮೀಜಿ, ಸಿದ್ಧಲಿಂಗ ಸ್ವಾಮೀಜಿ ಇತರರಿದ್ದರು.
ರಾಜ್ಯದಲ್ಲಿ 40 ಸಾವಿರ ಲಿಂಗಾಯತ ಮಠಗಳಿವೆ, ಆದರೆ, ಕೆಲ ರಾಜಕೀಯ ನಾಯಕರು ತಮ್ಮ ಲಾಭಕ್ಕಾಗಿ ಸಮುದಾಯದ ಒಗ್ಗಟ್ಟು ಹಾಳುಗೆಡವಿ ವಿಭಜಿಸುತ್ತಿದ್ದಾರೆ
ಮಠದ ಶಿವಲಿಂಗ ಸ್ವಾಮೀಜಿ ಕಳವಳ ವ್ಯಕ್ತಪಡಿಸಿದರು.
ಸಮೀಪದ ಮಲಬಾದ- ಬಳಿಗೇರಿ ಸಮೀಪದಲ್ಲಿರುವ ಗುರುಬಸವ ವಿರಕ್ತ ಮಠದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಲಿಂ.ಮುರುೇಂದ್ರ ಸ್ವಾಮೀಜಿ ಪ್ರತಿಮೆ ಲೋಕಾರ್ಪಣೆ ಸಮಾರಂಭದಲ್ಲಿ ಮಾತನಾಡಿದರು.
ಒಳಗಾಗುತ್ತಿರುವುದರಿಂದ ಶಾಸಕರ ಸಂಖ್ಯೆ ಕಡಿಮೆ ಆಗುತ್ತಿದೆ.
ಸಮುದಾಯವನ್ನು ಒಗ್ಗೂಡಿಸಿ ಸಮಗ್ರ ಅಭಿವೃದ್ಧಿಪಡಿಸಲು
ಪ್ರಯತ್ನಿಸಬೇಕು. ಮಠದಲ್ಲಿ ಶಿವಾನುಭವ ಗೋಷ್ಠಿಯನ್ನು ಹಮ್ಮಿಕೊಳ್ಳಬೇಕು ಎಂದರು.
ಗುರುಬಸವ ವಿರಕ್ತ ಮಠದ ಶಿವಲಿಂಗೇಶ್ವರ ಸ್ವಾಮೀಜಿ ಮಾತನಾಡಿ, ಪ್ರತಿಯೊಬ್ಬರ ಹೃದಯದಲ್ಲಿ ಮುರುೇಂದ್ರ ಸ್ವಾಮೀಜಿ ಇದ್ದಾರೆ. ಎಲ್ಲರೂ ಗುರುಗಳ ಸೇವೆ ಮಾಡಬೇಕು ಎಂದು ಹೇಳಿದರು.
ಬಸವನ ಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ, ಗುರುಪಾದ ಶಿವಾಚಾರ್ಯ ಸ್ವಾಮೀಜಿ, ಡಾ.ವಿವೇಕಾನಂದ ದೇವರು ಆಶೀರ್ವಚನ ನೀಡಿದರು.
ಮಠಕ್ಕೆ ಭೂಮಿ ದಾನ ನೀಡಿದ ಡಾ.ಚನ್ನಪ್ಪ ಸಂಕ್ರಟ್ಟಿ ಹಾಗೂ ಕಾರ್ಯಕ್ರಮದಲ್ಲಿ ವಿವಿಧ ಸೇವೆ
ಸಲ್ಲಿಸಿದ ಭಕ್ತರನ್ನು ಸನ್ಮಾನಿಸಲಾಯಿತು. ನಿಂಗಪ್ಪ ಕೋಕಳೆ, ಶಿವಾನಂದ ಗೋಲಭಾವಿ, ಭೀಮಪ್ಪ ಚನರೆಡ್ಡಿ, ಚಂದ್ರಕಾಂತ ಇಮ್ಮಡಿ ಇತರರಿದ್ದರು.