ಬೋರಗಾಂವದಲ್ಲಿ ಈದ್ ಮಿಲಾದ್ ಆಚರಣೆಯಲ್ಲಿ ಸಮಾಜ ಸೇವಕರನ್ನು ಯುವ ಮುಖಂಡ ಉತ್ತಮ ಪಾಟೀಲ ಸನ್ಮಾನಿಸಿದರು. ಪರ್ವೇಜ್ ಅಪರಾಜ್, ಮಾಣಿಕ ಕುಂಬಾರ, ಅಭಯಕುಮಾರ ಮಗದುಮ್ಮ ಇತರರಿದ್ದರು.
ಪ್ರವಾದಿ ಮಹಮ್ಮದ್ ಪೈಗಂಬರ್ ಪ್ರೀತಿ, ಶಾಂತಿ, ಸಹೋದರತ್ವ, ಸಮಾನತೆ ಮತ್ತು ಕರುಣೆ ಸಂದೇಶ ಸಾರಿದ್ದಾರೆ. ಪ್ರತಿಯೊಬ್ಬರೂ ಪೈಗಂಬರರ ಆದರ್ಶ ಅಳವಡಿಸಿಕೊಳ್ಳಬೇಕು ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಪಟ್ಟಣದ ಸುಲ್ತಾನ್ ನಗರದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಈದ್ ಮಿಲಾದ್ ಆಚರಣೆಯಲ್ಲಿ ಪಾಲ್ಗೊಂಡು ಮಾತನಾಡಿ, ಇತರರನ್ನು ಗೌರವಿಸಬೇಕು. ನಿರ್ಗತಿಕರ ಸಹಾಯಕ್ಕೆ ಮುಂದಾಗಬೇಕು ಎಂದರು.
ಯೋಧರು, ಯೋಧರ ಪಾಲಕರು, ಶಿಕ್ಷಕರು, ಸಮಾಜ ಸೇವಕರು ಮತ್ತು ಎಸ್‌ಎಸ್‌ಎಲ್‌ಸಿ, ಪಿಯುಸಿಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಮುಫ್ತಿಸಾಬ್ ಸುಲೇಮಾನ್ ಮಾತನಾಡಿ, ಎಲ್ಲರೂ ಸಾಮರಸ್ಯದಿಂದ ಬದುಕಬೇಕು. ಅಹಿಂಸೆ, ಅಸತ್ಯ, ಕೋಪದ ಹಾದಿಯಲ್ಲಿ ಸಾಗದೇ ತಾಳ್ಮೆಯಿಂದಿರಬೇಕು. ಪ್ರವಾದಿ ಮಹಮ್ಮದ್ ಸಂದೇಶ ಪಾಲಿಸಿದರೆ ಉತ್ತಮ ನಾಗರಿಕರಾಗಬಹುದು ಎಂದರು.
ಪಪಂ ಸ್ಥಾಯಿ ಸಮಿತಿ ಅಧ್ಯಕ್ಷ ಪ್ರದೀಪ ಮಾಳಿ, ಸದಸ್ಯ ಅಭಯಕುಮಾರ ಮಗದುಮ್ಮ, ಮಾಣಿಕ ಕುಂಬಾರ, ಜಾವೇದ್ ಮಕಾನದಾರ್, ಪರವೆಜ್ ಅಪರಾಜ್, ಭಯ್ಯ ಅಪರಾಜ್, ಶಿವಾಜಿ ಕದಂ, ಅಶೋಕ ಮಾಳಿ, ಉತ್ತಮ ವಠಾರೆ, ಮೌಲಾ ಮುಜಾವರ್, ಕುತುಬ್ ಶೇಖ್, ರಂಜಾನ್ ಶೇಖ್, ಸಲೀಂ ಮುಜಾವರ್, ರಿಯಾಜ್ ಮುಜಾವರ್, ಶಬ್ಬೀರ್ ಜಮಾದಾರ್, ಸಾಹಿಲ್ ಚೋಕಾವೆ, ಹಫೀಜ್ ಇಲಾಹಿ, ಶಬ್ಬೀರ್ ದಾಡಿವಾಲೆ, ರಿಯಾಜ್ ಮೋಮಿನ್, ವಾಸೀಂ ಕವ್ವಾಲ್ ಇತರರಿದ್ದರು.