ಕಬ್ಬೂರ ಪಟ್ಟಣದಲ್ಲಿ ಜ್ಯೋತಿಬಾ ಫುಲೆ ಜಯಂತಿ ಅಂಗವಾಗಿ ಗಣ್ಯರು ಮೆರವಣಿಗೆಗೆ ಚಾಲನೆ ನೀಡಿದರು. ದುರ್ಯೋಧನ ಐಹೊಳೆ, ಪವನ ಕತ್ತಿ, ಶಿವಾಚಾರ್ಯ ಸ್ವಾಮೀಜಿ, ಸುರೇಶ ಬೆಲ್ಲದ ಇತರರಿದ್ದರು. 
ಬೆಳಗಾವಿ

ಮಹಾತ್ಮರ ಆದರ್ಶ ಪಾಲನೆಯಾಗಲಿ

ಕಬ್ಬೂರು: ಮಹಾತ್ಮರ ಜಯಂತಿ ಆಚರಿಸಿದರೆ ಸಾಲದು, ಅವರ ಆದರ್ಶ, ಸಿದ್ಧಾಂತಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಕಾರ್ಯವಾಗಬೇಕು ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಪಟ್ಟಣದಲ್ಲಿ ಮಲ್ಲಿಕಾರ್ಜುನ ಮಾಳಿ ಸಮುದಾಯದ ಕ್ಷೇಮಾಭಿವೃದ್ಧಿ ಸಂಘದ ಸಹಯೋಗದಲ್ಲಿ ಶನಿವಾರ ಜ್ಯೋತಿಬಾ ಫುಲೆ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಜಿಪಂ ಮಾಜಿ ಸದಸ್ಯ ಪವನ ಕತ್ತಿ ಮಾತನಾಡಿ, ದೇಶದಲ್ಲಿ ಶೈಕ್ಷಣಿಕ ಕ್ರಾಂತಿಗೆ ನಾಂದಿ ಹಾಡಿದ ಜ್ಯೋತಿಬಾ ಫುಲೆಯವರ ಜೀವನ, ಸಾಧನೆಯನ್ನು ಪ್ರತಿಯೊಬ್ಬರೂ ಅರಿಯಬೇಕು ಎಂದರು.
ಕಬ್ಬೂರಿನ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ, ಸುರೇಶ ಬೆಲ್ಲದ, ಡಾ.ಆರ್.ಕೆ.ಬಾಗಿ, ಡಾ.ರವಿ ಕುರಬೇಟ, ಮಹಾದೇವ ಬಾನಿ, ಮಹಾದೇವ ಜಿವಣಿ, ಶ್ರೀಶೈಲ ತೇರದಾಳೆ, ಮಂಜುನಾಥ ಪಾಟೀಲ, ಮಹಾಲಿಂಗ ಹಂಜಿ, ಜೆ.ಆರ್.ಪಾಟೀಲ, ಜಿ.ಬಿ.ಸಂಗಟೆ, ಎಸ್.ಕೆ.ಕಾಮಗೌಡ, ಮಹಾದೇವ ಪ್ರಧಾನಿ, ರಮೇಶ ಕುರಬೇಟ, ಅಬ್ಬಾಸ್ ನದಾಫ್, ಎಂ.ಕೆ.ಪೂಜೇರಿ, ಜಡೆಪ್ಪ ಬಂಬಲವಾಡೆ, ಸುರೇಶ ಅಳಗುಂಡಿ, ಶ್ರೀಶೈಲ ಕುರಬೇಟ ಇತರರಿದ್ದರು.