ಚನ್ನವೃಷಭೇಂದ್ರ ದೇವರಕೊಂಡಜ್ಜನ ಲೀಲಾಮಠದಲ್ಲಿ ನಿರ್ಮಿಸಿರುವ ಮಹಾದ್ವಾರವನ್ನು ಶ್ರೀಗಳು ಉದ್ಘಾಟಿಸಿದರು. ಡಾ.ಶಿವಾನಂದ ಭಾರತಿ ಸ್ವಾಮೀಜಿ, ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ದಿವ್ಯಾನಂದಪುರಿ ಮಹಾರಾಜ, ಪೂರ್ಣಾನಂದ ಭಾರತಿ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಸತ್ಸಂಗದಿಂದ ಸನ್ಮಾರ್ಗದ ಗುರಿ ಈಡೇರಲಿ

ಹಾರೂಗೇರಿ: ಜಗತ್ತು ಧರ್ಮದ ಆಧಾರದ ಮೇಲೆ ಸಾಗುತ್ತಿದೆ. ಅಧರ್ಮದ ಹಾದಿಯಲ್ಲಿ ನಡೆದು ರಾಕ್ಷಸ ಆಗುವುದಕ್ಕಿಂತ ಧರ್ಮದ ಮಾರ್ಗದಲ್ಲಿ ನಡೆದು ಸತ್ಸಂಗದಿಂದ ಸನ್ಮಾರ್ಗದತ್ತ ಸಾಗಬೇಕು ಎಂದು ಹಾರೂಗೇರಿ ಇಂಚಲ ಮಠಗಳ ಪೀಠಾಧ್ಯಕ್ಷ ಡಾ.ಶಿವಾನಂದ ಭಾರತಿ ಸ್ವಾಮೀಜಿ ಹೇಳಿದರು.
ಪಟ್ಟಣದ ಚನ್ನವೃಷಭೇಂದ್ರ ದೇವರಕೊಂಡಜ್ಜನ ಲೀಲಾಮಠದ ಶಿವಾನಂದ ಭಾರತಿ ಸಭಾಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ 100ನೇ ವರ್ಷದ ಮಹಾಶಿವರಾತ್ರಿ ಸಪ್ತಾಹ ಹಾಗೂ ಓಂ ನಮಃ ಶಿವಾಯ ಮಂತ್ರ ಶತಮಾನೋತ್ಸವ ಕಾರ್ಯಕ್ರಮದಲ್ಲಿ ‘ಧರ್ಮಾತ್ ಅರ್ಥ ಪ್ರಭವತೆ’ ಎಂಬ ಸುಭಾಷಿತ ಕುರಿತು ಮಾತನಾಡಿದರು.
ಋಷಿಕೇಶ ಮಹಾಮಂಡಲೇಶ್ವರ ಅಭಿಷೇಕ ಚೈತನ್ಯಗಿರಿ ಮಹಾರಾಜ ಮಾತನಾಡಿ, ಪ್ರತಿಯೊಬ್ಬರೂ ಧರ್ಮದ ಹಾದಿಯಲ್ಲಿ ನಡೆದು ಮೋಕ್ಷ ಹೊಂದಬೇಕು ಎಂದರು.
ಪರಮಾನಂದವಾಡಿಯ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಆಶೀರ್ವಚನ ನೀಡಿದರು. ಶ್ರೀಮಠದಲ್ಲಿ ನಿರ್ಮಿಸಿರುವ ಮಹಾದ್ವಾರ ಉದ್ಘಾಟಿಸಲಾಯಿತು. ಶತಮಾನೋತ್ಸವ ಅಂಗವಾಗಿ ತಮ್ಮಾಣಿ ಕುರಿ ನೂರಕ್ಕೂ ಹೆಚ್ಚು ಸಸಿ ನೆಟ್ಟು ಪರಿಸರ ಜಾಗೃತಿ ಮೂಡಿಸಿದರು.
ಸಾಧನಾ ಸದನ ಹರಿದ್ವಾರ ಮುಂಬೈನ ಮಹಾಮಂಡಲೇಶ್ವರ ದಿವ್ಯಾನಂದಪುರಿ ಮಹಾರಾಜ, ಹೇಮಕೂಟ ಹಂಪಿಯ ವಿದ್ಯಾನಂದ ಭಾರತಿ ಸ್ವಾಮೀಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಗದಗದ ನೀಲಮ್ಮ ತಾಯಿ, ಅನಗವಾಡಿಯ ಅನಸೂಯಾ ತಾಯಿ ಆಶೀರ್ವಚನ ನೀಡಿದರು.
ಪಿ.ರಾಜೀವ, ಸದಾಶಿವ ದೇಶಿಂಗೆ, ಶಿವಗೊಂಡ ಧರ್ಮಟ್ಟಿ, ಲಾಲಸಾಬ್ ಜಮಾದಾರ, ವಿಠ್ಠಲ ಬಂತಿ, ರಾಜು ಕರ್ಣವಾಡಿ, ಶ್ರೀಶೈಲ ಉಮರಾಣಿ, ಬಾಬು ಪರಮಗೌಡರ, ಸುರೇಶ ಐಹೊಳೆ, ಡಿ.ಸಿ.ಸದಲಗಿ, ಡಿ.ಎಸ್.ನಾಯಿಕ, ರಾಘವೇಂದ್ರ ದೇಶಪಾಂಡೆ, ವಿಜಯ ಬಂತಿ, ಮಹೇಶ ಮುಂಗುರವಾಡಿ ಇತರರಿದ್ದರು. ಕಾರ್ಯದರ್ಶಿ ಅಪ್ಪಾಸಾಬ ಕುಲಕರ್ಣಿ ನಿರೂಪಿಸಿದರು.