ಸವದತ್ತಿ ಜೈಂಟ್ಸ್ ಗ್ರ್ರೂಪ್ ಆ್ ಸಹೇಲಿ ಅಧ್ಯಕ್ಷೆ ಪಾರ್ವತಿ ಕಾಂತಿಮಠ ಗ್ರೇಡ್-2 ತಹಸೀಲ್ದಾರ್ ಎಂ.ಎನ್.ಮಠದ ಅವರಿಗೆ ಮನವಿ ಸಲ್ಲಿಸಿದರು. ಸೀಮಾ ವನಕಿ, ಪಲ್ಲವಿ ಪದಕಿ, ನಾಗವೇಣಿ ಕುಲಕರ್ಣಿ ಇತರರಿದ್ದರು. 
ಬೆಳಗಾವಿ

ಸವದತ್ತಿ ಕೋಟೆ ಅಭಿವೃದ್ಧಿಯಾಗಲಿ

ಸವದತ್ತಿ: ನಗರದಲ್ಲಿರುವ ಐತಿಹಾಸಿಕ ಕೋಟೆ ಅಭಿವೃದ್ಧಿಪಡಿಸಿ, ಸುಂದರ ಪ್ರವಾಸಿತಾಣವನ್ನಾಗಿ ಪರಿವರ್ತಿಸಲು ಆಗ್ರಹಿಸಿ ಜೈಂಟ್ಸ್ ಗ್ರೂಪ್ ಆ್ ಸಹೇಲಿ ಸಂಘಟನೆಯಿಂದ ಗ್ರೇಡ್-2 ತಹಸೀಲ್ದಾರ್ ಎಂ.ಎನ್.ಮಠದ ಅವರಿಗೆ ಈಚೆಗೆ ಮನವಿ ಸಲ್ಲಿಸಲಾಯಿತು.
ರೇಣುಕಾ ಸಹೇಲಿ ಗ್ರ್ರೂಪ್ ಅಧ್ಯಕ್ಷೆ ಪಾರ್ವತಿ ಕಾಂತಿಮಠ ಮಾತನಾಡಿ, ಸವದತ್ತಿ ಕೋಟೆ 18ನೇ ಶತಮಾನದಲ್ಲಿ ಜಾಯಪ್ಪ ದೇಸಾಯಿ ನಿರ್ಮಿಸಿದ ಐತಿಹಾಸಿಕ ಸ್ಮಾರಕವಾಗಿದ್ದು, ನಗರದ ಇತಿಹಾಸ ಪ್ರತಿಬಿಂಬಿಸುವ ಸಂಕೇತವಾಗಿದೆ. ಆದರೆ, ಇತ್ತೀಚಿನ ದಿನಗಳಲ್ಲಿ ಕೋಟೆ ಸ್ಥಿತಿ ಹದಗೆಟ್ಟಿದ್ದು, ಬಹುತೇಕ ಗೋಡೆ ಕುಸಿದುಹೋಗಿವೆ ಎಂದರು.
ಕಾರ್ಯದರ್ಶಿ ಸೀಮಾ ವನಕಿ ಮಾತನಾಡಿ, ರೇಣುಕಾ ಯಲ್ಲಮ್ಮ ದೇವಸ್ಥಾನಕ್ಕೆ ಬರುವ ಸಾವಿರಾರು ಭಕ್ತರು ಈ ಕೋಟೆಗೆ ಭೇಟಿ ನೀಡುತ್ತಾರೆ. ಪರಸಗಡ ನಾಟಕೋತ್ಸವ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಇಲ್ಲಿ ನಡೆಯುತ್ತಿದ್ದು, ಕೋಟೆ ಮೇಲಿರುವ ಕಾಡಸಿದ್ಧೇಶ್ವರ ದೇವಸ್ಥಾನದಲ್ಲಿ ಪ್ರತಿ ಶ್ರಾವಣ ಮಾಸದ ಕೊನೆ ಸೋಮವಾರ ಜಾತ್ರೆ ಜರುಗುತ್ತದೆ. ಈ ಹಿನ್ನೆಲೆಯಲ್ಲಿ ಅಗತ್ಯ ಮೂಲ ಸೌಕರ್ಯ ಒದಗಿಸಿ, ದುರಸ್ತಿ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಗ್ರೇಡ್-2 ತಹಸೀಲ್ದಾರ್ ಎಂ.ಎನ್.ಮಠದ, ಮನವಿಯನ್ನು ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು ಎಂದರು.
ಪಲ್ಲವಿ ಪದಕಿ, ನಾಗವೇಣಿ ಕುಲಕರ್ಣಿ, ಮೀನಾಕ್ಷಿ ವಡಕನ್ನವರ, ಪ್ರಿಯಾ ಶಾಂಡಗೆ ಇತರರಿದ್ದರು.
21-3