ಕಂಕಣವಾಡಿ ಪಟ್ಟಣದ ನಾಯಿಕವಾಡಿ ತೋಟದಲ್ಲಿ ಸ್ನಾತಕೋತ್ತರ ಪದವಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಶ್ರೀರಾಜ ನಾಯಿಕವಾಡಿ ಅವರನ್ನು ಸನ್ಮಾನಿಸಲಾಯಿತು. ಪುರುಷೋತ್ತಮ ಸ್ವಾಮೀಜಿ, ಮಹಾಂತ ಸ್ವಾಮೀಜಿ ಇತರರಿದ್ದರು. 
ಬೆಳಗಾವಿ

ಯುವಕರ ಸೇವೆ ದೇಶಕ್ಕೆ ದೊರೆಯಲಿ

ರಾಯಬಾಗ: ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಿ, ತಾಯ್ನಡಿಗೆ ಮರಳಿ ಬರುವ ಯುವಕರ ಸೇವೆ ದೇಶಕ್ಕೆ ದೊರಕಬೇಕೆಂದು ಚಿತ್ರದುರ್ಗದ ಹೊಸದುರ್ಗ ಭಗೀರಥ ಮಠದ ಪುರುಷೋತ್ತಮ ಸ್ವಾಮೀಜಿ ಹೇಳಿದರು.
ಕಂಕಣವಾಡಿ ಪಟ್ಟಣದ ನಾಯಿಕವಾಡಿ ತೋಟದ ಯುವಕ ಶ್ರೀರಾಜ ಅರ್ಜುನ ನಾಯಿಕವಾಡಿ ಆಸ್ಟ್ರೇಲಿಯಾದಲ್ಲಿ ಅಗ್ರಿಕಲ್ಚರಲ್ ಬಿಸಿನೆಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದು ಸ್ವಗ್ರಾಮಕ್ಕೆ ಆಗಮಿಸಿದ ಹಿನ್ನೆಲೆ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿ, ನಾಯಿಕವಾಡಿ ಕುಟುಂಬದ ಯುವಕರು ವಿವಿಧ ಸರ್ಕಾರಿ ಹುದ್ದೆ ಅಲಂಕರಿಸಿ ಸೇವೆ ಸಲ್ಲಿಸುತ್ತಿರುವುದು ಸಂತಸದ ಸಂಗತಿ. ಇವರ ಕುಟುಂಬ ಮಾಡುತ್ತಿರುವ ಸೇವೆ ಪ್ರತಿಯೊಬ್ಬರಿಗೂ ಮಾದರಿಯಾಗಿದೆ ಎಂದರು.
ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಮಹಾಂತ ದೇವರು, ಜಂಗಟಿಹಾಳದ ಯಲ್ಲಾಲಿಂಗೇಶ್ವರ ಮಠದ ಮಾತೋಶ್ರೀ ಸಂಗಮತಾಯಿ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಮಹಾವೀರ ಮೋಹಿತೆ, ಅರ್ಜುನ ನಾಯಿಕವಾಡಿ, ಧೂಳಗೌಡ ಪಾಟೀಲ, ಶ್ರೀಶೈಲ ಮಹಾಲಿಂಗೇಶ್ವರ, ನಾಗಯ್ಯ ಸ್ವಾಮಿ, ಕರೆಪ್ಪ ಪೂಜಾರಿ, ಶ್ರೀಮಂತ ಪೂಜಾರಿ, ಬಾಳಪ್ಪ ಅರಬಾವಿ, ಶಂಕರಗೌಡ ಪಾಟೀಲ, ರಾಜು ಕೊಟಗಿ, ತಮ್ಮಣ್ಣ ನಾಯಿಕವಾಡಿ, ಬಸವರಾಜ ಮಿರ್ದೆ, ಗುರುರಾಜ ನಾಯಿಕವಾಡಿ, ಲಕ್ಷ್ಮೀಕಾಂತ ಉಪ್ಪಾರ, ಸಚಿನ ನಾಯಿಕವಾಡಿ ಇತರರಿದ್ದರು.