ಬೆಳಗಾವಿಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಮಂಗಳವಾರ ಜರುಗಿದ ಸೀಳುತುಟಿ ಶಸಚಿಕಿತ್ಸಾ ಶಿಬಿರದ ಸಮಾರೋಪದಲ್ಲಿ ಡಾ.ಶರದಿಂದು ಕೊಟ್ರಶೆಟ್ಟಿ, ಅಭಿಷೇಕ ಸೇನ್ ಗುಪ್ತಾ, ಡಾ.ಸಂಜಯ ಪಾಟೀಲ, ಭಾರತಿ ಐನಾಪುರೆ ಇತರರಿದ್ದರು
ಬೆಳಗಾವಿ: ಜಗತ್ತಿನಲ್ಲಿ ನಾಲ್ಕು ಬಿಲಿಯನ್ ರೋಗಿಗಳು ಸಮಯೋಚಿತ ಶಸಚಿಕಿತ್ಸೆಗಳ ಲಭ್ಯವಿಲ್ಲದೇ ಪರದಾಡುವಂತಾಗಿದೆ ಎಂದು ಕೆಎಲ್‌ಇ ವಿಕ ದಂತ ಮಹಾವಿದ್ಯಾಲಯದ ಓರಲ್‌ಮ್ಯಾಕ್ಸಿಲ್ಲೋಫೇಸಿಯಲ್ ಶಸಚಿಕಿತ್ಸಜ್ಞ ಡಾ.ಶರದಿಂದು ಕೊಟ್ರಶೆಟ್ಟಿ ಅಭಿಪ್ರಾಯಪಟ್ಟರು.
ಯಳ್ಳೂರ ರಸ್ತೆಯ ಕೆಎಲ್‌ಇ ಶತಮಾನೋತ್ಸವ ಚಾರಿಟಬಲ್ ಆಸ್ಪತ್ರೆಯಲ್ಲಿ ಕೆಎಲ್‌ಇ ವಿಕ ದಂತ ಮಹಾವಿದ್ಯಾಲಯ, ಇಂಗಾ ಹೆಲ್ತ್ ೌಂಡೇಷನ್, ಆಪರೇಷನ್ ಸ್ಮೆಲ್ ಆಶ್ರಯದಲ್ಲಿ ಮಂಗಳವಾರ ಏರ್ಪಡಿಸಿದ್ದ ಉಚಿತ ಸೀಳುತುಟಿ ಮತ್ತು ಬಾಯಿ ಒಳ ಅಂಗಳದ ಶಸಚಿಕಿತ್ಸಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಬಿಲಿಯನ್‌ಗಟ್ಟಲೇ ಮಕ್ಕಳು ಸೀಳುತುಟಿ, ಬಾಯಿಯ ಒಳ ಅಂಗಳದ ತೊಂದರೆಗೆ ಒಳಗಾಗಿದ್ದಾರೆ. ಇಂತಹ ರೋಗಿಗಳಿಗೆ ಇಲ್ಲಿ ಉಚಿತ ಶಸಚಿಕಿತ್ಸೆ ಮಾಡಿರುವುದು ಶ್ಲಾಘನೀಯ ಎಂದರು.
ಆಸ್ಪತ್ರೆಯ ವೈದ್ಯಕೀಯ ಅೀಕ್ಷಕ ಡಾ.ಸಂಜಯ ಕಂಬಾರ ಮಾತನಾಡಿ, ಸೀಳುತುಟಿ ಮತ್ತು ಬಾಯಿ ಒಳ ಅಂಗಳದ ಬಗ್ಗೆ ಸಮಾಜದಲ್ಲಿ ಮೂಢನಂಬಿಕೆಗಳಿವೆ. ಕೆಲವೆಡೆ ಅಂತಹ ಮಕ್ಕಳನ್ನು ಕೀಳಾಗಿ ನೋಡಿ, ಕುಟುಂಬವನ್ನು ಹೀಗಳೆಯಲಾಗುತ್ತದೆ. ಆದರೆ, ಸಣ್ಣ ಶಸಚಿಕಿತ್ಸೆಯಿಂದ ಸಮಾಜದ ದೃಷ್ಟಿಕೋನ ಬದಲಾಯಿಸಬಹುದು ಎಂದರು. ಇಂಗಾ ಹೆಲ್ತ್ ೌಂಡೇಷನ್ ಸಿಇಒ ಅಭಿಷೇಕ ಸೇನ್ ಗುಪ್ತಾ ಮಾತನಾಡಿ, ಆಪರೇಷನ್ ಸ್ಮೆಲ್ ಸಂಸ್ಥೆಗೆ 40 ವರ್ಷಗಳ ಇತಿಹಾಸವಿದೆ. ಈವರೆಗೆ 2.40 ಲಕ್ಷ ಮಕ್ಕಳು ಸೇರಿ ವಿವಿಧ ವಯೋಮಾನದವರ ನಗುವಿಗೆ ಕಾರಣವಾಗಿದೆ. 17 ವರ್ಷಗಳ ಇತಿಹಾಸದ ಇಂಗಾ ಹೆಲ್ತ್ ೌಂಡೇಷನ್ 16,500 ಶಸಚಿಕಿತೆಗಳನ್ನು ವಿವಿಧ ಕೇಂದ್ರಗಳಲ್ಲಿ ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ವಿವರಿಸಿದರು. ಏಳು ದಿನಗಳ ಶಿಬಿರದಲ್ಲಿ ಕರ್ನಾಟಕ, ಮಹಾರಾಷ್ಟ್ರ ಹಾಗೂ ಗೋವಾ ರಾಜ್ಯಗಳ ವಿವಿಧ ಭಾಗಗಗಳಿಂದ ಬಂದ 97 ರೋಗಿಗಳ ತಪಾಸಣೆ ನಡೆಸಿ, 54 ಜನರಿಗೆ ಉಚಿತವಾಗಿ ಶಸಚಿಕಿತ್ಸೆ ನಡೆಸಲಾಯಿತು.
ಶಿಬಿರ ಯಶಸ್ವಿಗೊಳಿಸಿದ ತಂಡವನ್ನು ಕೆಎಲ್‌ಇ ಸಂಸ್ಥೆಯ ಗೌರವ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಯುಎಸ್‌ಎಂ ಕೆಎಲ್‌ಇ ನಿರ್ದೇಶಕ ಡಾ.ಎಚ್.ಬಿ.ರಾಜಶೇಖರ, ಆಸ್ಪತ್ರೆ ಸಿಇಒ ನವೀನ ಎನ್. ಅಭಿನಂದಿಸಿದ್ದಾರೆ.