ಸವದತ್ತಿ ನಗರದಲ್ಲಿ ಹಮ್ಮಿಕೊಂಡಿದ್ದ ಪ್ರವಚನ ಮಂಗಲೋತ್ಸವ ಕಾರ್ಯಕ್ರಮವನ್ನು ಶ್ರೀಶೈಲ ಜಗದ್ಗುರು ಡಾ.ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರು ಉದ್ಘಾಟಿಸಿದರು. ವಿರೂಪಾಕ್ಷ ಮಾಮನಿ, ಅಶ್ವತ್ಥ ವೈದ್ಯ ಇತರರಿದ್ದರು.
ಯಡೂರು ಶ್ರೀ ವೀರಭದ್ರೇಶ್ವರ ದೇವಸ್ಥಾನದಲ್ಲಿ ಜರುಗುತ್ತಿರುವ ರಾಜಗೋಪುರಗಳ ಲೋಕಾರ್ಪಣೆ, ಮಹಾಕುಂಭಾಭಿಷೇಕ ಹಾಗೂ ಲಕ್ಷದೀಪೋತ್ಸವ ಅಂಗವಾಗಿ ನಗರದ ಮಾಮನಿ ಕಲ್ಯಾಣ ಮಂಟಪದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪ್ರವಚನ ಮಂಗಲೋತ್ಸವ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು.
ಅದ್ದೂರಿ ಮೆರವಣಿಗೆ: ವಿವಿಧ ವಾದ್ಯಗಳೊಂದಿಗೆ ನಗರದ ಪ್ರಮುಖ ಬೀದಿಗಳಲ್ಲಿ ಶ್ರೀಶೈಲ ಜಗದ್ಗುರುಗಳ ಸಾರೋಟ ಮೆರವಣಿಗೆ ಅದ್ದೂರಿಯಾಗಿ ಜರುಗಿತು. ಮೂಲಿಮಠದ ಮಲ್ಲಿಕಾರ್ಜುನ ಸ್ವಾಮೀಜಿ, ಮುನವಳ್ಳಿ ಸೋಮಶೇಖರ ಮಠದ ಮುರುೇಂದ್ರ ಸ್ವಾಮೀಜಿ ಮಾತನಾಡಿ, ಜಗದ್ಗುರುಗಳ ಜೀವನ ಲೋಕಕಲ್ಯಾಣಕ್ಕೆ ಸಮರ್ಪಿತವಾಗಿದೆ. ಶಿಕ್ಷಣ ಹಾಗೂ ಧರ್ಮ ಜಾಗೃತಿಗಾಗಿ ಅವರ ತ್ಯಾಗ ಶ್ಲಾಘನೀಯ ಎಂದು ತಿಳಿಸಿದರು.
ಜಮಖಂಡಿ ಕಲ್ಯಾಣಮಠದ ಗೌರಿಶಂಕರ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ವಿರೂಪಾಕ್ಷ ಮಾಮನಿ, ಉದ್ಯಮಿ ಅಶ್ವತ್ಥ ವೈದ್ಯ, ಸದಾಶಿವ ಕೌಜಲಗಿ, ಅಲ್ಲಮಪ್ರಭು ಪ್ರಭುನವರ, ಜಿ.ಎಸ್.ಶಿಂತ್ರಿ,