ಕಾಗವಾಡದ ಶಿವಾನಂದ ಮಹಾವಿದ್ಯಾಲಯದಲ್ಲಿ ಹರ್ ಘರ್ ತಿರಂಗಾ ಅಭಿಯಾನದ ಅಂಗವಾಗಿ ಹಮ್ಮಿಕೊಂಡಿದ್ದ ಜನಜಾಗೃತಿ ರ‌್ಯಾಲಿಯಲ್ಲಿ ಡಾ.ಎಸ್.ಪಿ.ತಳವಾರ, ಅಶೋಕ ಅಳಗೊಂಡಿ ಹಾಗೂ ಎನ್‌ಸಿಸಿ ಕೆಡೆಟ್‌ಗಳು ಇದ್ದರು. 
ಬೆಳಗಾವಿ

ಎಲ್ಲರಲ್ಲಿ ದೇಶಾಭಿಮಾನ ಬಲಗೊಳ್ಳಲಿ

ಅಖಂಡತೆ, ಸಾರ್ವಭೌಮತ್ವ ಹಾಗೂ ದೇಶಭಕ್ತಿಯ ಪ್ರತೀಕ ಎಂದು ಶಿವಾನಂದ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಪಿ.ತಳವಾರ ಹೇಳಿದರು.

ರಾಷ್ಟ್ರಧ್ವಜಕ್ಕೆ ಗೌರವ ನೀಡುವುದು ಭಾರತೀಯರ ಕರ್ತವ್ಯ. ಹರ್ ಘರ್ ತಿರಂಗಾ ಅಭಿಯಾನ ಪ್ರತಿಯೊಬ್ಬರ ಮನದಲ್ಲಿ ದೇಶಭಕ್ತಿಯ ಭಾವನೆಯನ್ನು ಮತ್ತಷ್ಟು ಬಲಪಡಿಸುತ್ತದೆ ಎಂದರು.

ಮಹಾವಿದ್ಯಾಲಯದಿಂದ ಆರಂಭವಾದ ಪ್ರಭಾತೇರಿ ಬಸ್ ನಿಲ್ದಾಣ, ಮುಖ್ಯ ರಸ್ತೆಯ ಮೂಲಕ ಗ್ರಾಮದ ಪ್ರವೇಶ ದ್ವಾರದವರೆಗೆ ಸಾಗಿತು. ನಂತರ ರ‌್ಯಾಲಿ ರಾಣಿ ಚನ್ನಮ್ಮ ವೃತ್ತಕ್ಕೆ ಆಗಮಿಸಿದ ಬಳಿಕ ಎನ್‌ಸಿಸಿ ಕೆಡೆಟ್‌ಗಳು ಮಾನವ ಸರಪಳಿ ನಿರ್ಮಿಸಿ ರಾಷ್ಟ್ರೀಯ
ಏಕತೆ ಸಂದೇಶ ಸಾರಿದರು.

ಅಳಗೊಂಡಿ, ಸೂರಜ ನಾವಿ, ರಾಜಶ್ರೀ ಕಾಡಾಪುರೆ, ಅನಿಕೇತ ಕಾಂಬಳೆ ಇತರರಿದ್ದರು.