ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಅವರ ಕೃತಿ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅರವಿಂದ ದೇಶಪಾಂಡೆ, ಡಾ.ವೆಂಕಟಗಿರಿ ದಳವಾಯಿ, ವೀರೇಶ ಬಡಿಗೇರ, ಬಿ.ಎನ್. ಪುರುಷೊತ್ತಮ ಇತರರಿದ್ದರು. 
ಬೆಳಗಾವಿ

ಸಾಹಿತ್ಯ ಸಮಾಜ ಬದಲಿಸುವಂತಿರಲಿ

ಅಥಣಿ: ಸಮಾಜದಲ್ಲಿನ ಸಮಸ್ಯೆ ತೋರಿಸುವುದಲ್ಲದೆ, ಸಾಮಾಜಿಕ ಬದಲಾವಣೆಯ ಆಲೋಚನೆ ಓದುಗರಿಗೆ ಮನಮುಟ್ಟುವಂತೆ ರಚಿಸುವ ಕಥೆ ಮತ್ತು ಕಾದಂಬರಿ ಕನ್ನಡ ಸಾಹಿತ್ಯ ಲೋಕದ ವಿಶೇಷ ಕೊಡುಗೆ ಎಂದು ಆರ್‌ಎಸ್‌ಎಸ್ ಉತ್ತರ ಪ್ರಾಂತ್ಯ ಕಾರ್ಯನಿರ್ವಾಹಕ ಅರವಿಂದರಾವ ದೇಶಪಾಂಡೆ ಹೇಳಿದರು.
ಪಟ್ಟಣದ ಪ್ರಾರ್ಥನಾ ಕಾಲೇಜಿನ ಸಭಾಂಗಣದಲ್ಲಿ ಸಾಹಿತ್ಯ, ಸಾಂಸ್ಕೃತಿಕ ಸಂಘ, ಕಾರ್ಕಳದ ಕ್ರಿಯೆಟಿವ್ ಪುಸ್ತಕ ಮನೆ ಹಾಗೂ ಪ್ರಾರ್ಥನಾ ವಿಜ್ಞಾನ ಕಾಲೇಜ್ ಸಹಯೋಗದಲ್ಲಿ ಭಾನುವಾರ ಸಾಹಿತಿ ಡಾ.ಬಾಳಾಸಾಹೇಬ ಲೋಕಾಪುರ ಅವರ ದೇಹಿ ಮತ್ತು ಕೃಷ್ಣೆ ಹರಿದಳು ಎಂಬ ಕೃತಿಗಳ ಲೋಕಾರ್ಪಣೆಗೊಳಿಸಿ ಮಾತನಾಡಿ, ಹಿರಿಯ ಸಾಹಿತಿ ಮತ್ತು ಕಾದಂಬರಿಕಾರ ಡಾ.ಬಾಳಾಸಾಹೇಬ ಲೋಕಾಪುರ ಅವರ ಕಾದಂಬರಿಗಳಲ್ಲಿ ಗ್ರಾಮೀಣ ಜನತೆಯ ಜ್ವಲಂತ ಸಮಸ್ಯೆ ಮತ್ತು ಮೌಲ್ಯ ಬಿಂಬಿಸುವ ಪಾತ್ರಗಳು ಓದುಗರ ಗಮನ ಸೆಳೆಯುತ್ತವೆ ಎಂದರು.
ಹಂಪಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ.ವೆಂಕಟಗಿರಿ ದಳವಾಯಿ, ಲೇಖಕ ಡಾ.ಬಾಳಾಸಾಹೇಬ ಲೋಕಾಪುರ ಮಾತನಾಡಿದರು. ಸಾಹಿತಿ ಡಾ.ವೀರೇಶ ಬಡಿಗೇರ, ಪ್ರಾಚಾರ್ಯ ಬಿ.ಎನ್. ಪುರುಷೋತ್ತಮ ಮತ್ತು ಸಾಂಸ್ಕೃತಿಕ ಸಂಘದ ಅಧ್ಯಕ್ಷ ಎನ್.ಬಿ.ಝೇರೆ, ಹಿರಿಯರಾದ ಕೆ.ಎಲ್‌.ಕುಂದರಗಿ, ಡಾ.ಜೆ.ಪಿ.ದೊಡಮನಿ, ಡಿ.ಡಿ.ಮೆಕನಮರಡಿ, ಅಪ್ಪಾಸಾಹೇಬ ಅಲಿಬಾದಿ, ದೇವೇಂದ್ರ ಬಿಸ್ವಾಗರ, ಸದಾಶಿವ ಹರಪಾಳೆ, ಮಹಾವೀರ ಕಾಳೆ, ಜಿ.ಎಂ.ಕುಲಕರ್ಣಿ, ಪಿ.ಎಲ್.ಪೂಜಾರಿ, ಆರ್.ಎ.ಜೋಶಿ, ಪ್ರಕಾಶ ಬಿರಾದಾರ ಇತರರಿದ್ದರು.