ಗೋಕಾಕ ನಗರದಲ್ಲಿ ಸಚಿವ ಸತೀಶ ಜಾರಕಿಹೊಳಿ ಅಂಗವಿಕಲರಿಗೆ ತ್ರಿಚಕ್ರ ವಾಹನ ವಿತರಿಸಿದರು. ಪಾಂಡು ಮನ್ನಿಕೇರಿ, ವಿಠ್ಠಲ ಪರಸನ್ನವರ, ವಿನೋದ ಡೊಂಗರೆ, ಪಾಂಡು ರಂಗಸುಭೆ ಇತರರಿದ್ದರು. 
ಬೆಳಗಾವಿ

ಎಲ್ಲರಿಗೂ ಸಮಾನ ಅವಕಾಶ ಸಿಗಲಿ

ರಾಘವೇಂದ್ರಗೌಡ ಭೀ ಪಾಟೀಲ್

ಪ್ರತಿಯೊಬ್ಬರಿಗೂ ಸಮಾನ ಅವಕಾಶ, ಗೌರವ ಹಾಗೂ ಸ್ವಾವಲಂಬನೆ ಬದುಕು ದೊರೆಯಬೇಕೆಂಬ ಆಶಯದೊಂದಿಗೆ ಜನಪರ ಕಾರ್ಯಗಳು ನಿರಂತರವಾಗಿ ಸಾಗಲಿವೆ ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದರು.

ನಗರದಲ್ಲಿ ಭಾನುವಾರ ಶಾಸಕರ ಅನುದಾನದಡಿ ಮಂಜೂರಾದ 33 ಅಂಗವಿಕಲರಿಗೆ ತ್ರಿಚಕ್ರ ವಾಹನವನ್ನು ವಿತರಿಸಿ ಮಾತನಾಡಿ, ಅಂಗವಿಕಲರು ಸಮಾಜಕ್ಕೆ ಹೊರೆಯಲ್ಲ. ಅವರೂ ಇತರರಂತೆ ಸಮಾಜದಲ್ಲಿ ಎಲ್ಲ ಅವಕಾಶ ಪಡೆದು ಶಿಕ್ಷಣ, ಉದ್ಯೋಗ ಹಾಗೂ ಬದುಕಿನ ಹಕ್ಕು ಹೊಂದಿದ್ದಾರೆ. ಅವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಸಮಾನ ಅವಕಾಶ ಕಲ್ಪಿಸುವುದು ಸರ್ಕಾರದ ಕರ್ತವ್ಯವಾಗಿದೆ ಎಂದರು.
ಪಾಂಡು ಮನ್ನಿಕೇರಿ, ವಿಠ್ಠಲ ಪರಸನ್ನವರ, ವಿನೋದ ಡೊಂಗರೆ, ಪಾಂಡು ರಂಗಸುಭೆ, ಸಂಜು ನಾಯಕ, ಶಿವು ಪಾಟೀಲ, ಪ್ರವೀಣ ಗುಡ್ಡಾಕಾಯಿ, ವಿವೇಕ ಜತ್ತಿ, ಮಹೇಶ ಉಣ್ಣಿ, ಸಾಯನ್ನವರ, ಮಂಜು ಸನದಿ ಇತರರಿದ್ದರು.