ಕಾಗವಾಡ ಪಟ್ಟಣದ ಆಚಾರ್ಯ ಶ್ರೀ 108 ವಿದ್ಯಾಸಾಗರ ಟ್ರಸ್ಟ್‌ನ ರಜತ ಮಹೋತ್ಸವದ 2ನೇ ದಿನ ಕಾರ್ಯಕ್ರಮದಲ್ಲಿ ಬಸವರಾಜೇಂದ್ರ ಶರಣರು ಮಾತನಾಡಿದರು. ನಾಗರತ್ನಾ ಹೆಗಡೆ, ಡಾ.ಎಂ.ಡಿ.ಅಲಾಸೆ, ವಿಜಯಕುಮಾರ ಅಕಿವಾಟೆ, ಜ್ಯೋತಿಕುಮಾರ ಪಾಟೀಲ ಇತರರಿದ್ದರು. 
ಬೆಳಗಾವಿ

ಮಕ್ಕಳಿಗೆ ಗುಣಮಟ್ಟದ ಶಿಕ್ಷಣ, ಸಂಸ್ಕಾರ ಸಿಗಲಿ

ಕಾಗವಾಡ: ವಿದ್ಯಾಸಾಗರ ಮುನಿಗಳ ಹೆಸರಿನಲ್ಲಿ 44 ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡ ಆಚಾರ್ಯ ಶ್ರೀ 108 ವಿದ್ಯಾಸಾಗರ ಟ್ರಸ್ಟ್ ವಿದ್ಯಾಸಂಸ್ಥೆ ಇಂದು 412 ವಿದ್ಯಾರ್ಥಿಗಳಿಗೆ ಶಿಕ್ಷಣ, ಸಂಸ್ಕಾರ ನೀಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಝುಂಜರವಾಡದ ಬಸವರಾಜೇಂದ್ರ ಶರಣರು ಹೇಳಿದರು.
ಪಟ್ಟಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಆಚಾರ್ಯ ಶ್ರೀ 108 ವಿದ್ಯಾಸಾಗರ ಟ್ರಸ್ಟ್‌ನ ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ರಜತ ಮಹೋತ್ಸವ ಮತ್ತು ವಾರ್ಷಿಕ ಸ್ನೇಹಸಮ್ಮೇಳನದ 2ನೇ ದಿನದ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಪಾಲಕರು ಮಕ್ಕಳಿಗೆ ಸಂಸ್ಕಾರ ನೀಡಬೇಕು ಎಂದರು.
ಧರ್ಮಸ್ಥಳ ಯೋಜನೆ ಜಿಲ್ಲಾ ನಿರ್ದೇಶಕಿ ನಾಗರತ್ನಾ ಹೆಗಡೆ ಮಾತನಾಡಿ, ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುತ್ತಿರುವ ಡಾ.ವೀರೇಂದ್ರ ಹೆಗ್ಗಡೆ ಶಿಕ್ಷಕರ ಕೊರೆತೆ ಇರುವ ಸರ್ಕಾರಿ ಶಾಲೆಗಳಲ್ಲಿ ಸುಮಾರು 1,000 ಭೋದಕ ಸಿಬ್ಬಂದಿ ನೇಮಕ ಮಾಡಿದ್ದಾರೆ. ಬಡಮಕ್ಕಳ ಉನ್ನತ ಶಿಕ್ಷಣಕ್ಕೆ ಶಿಷ್ಯವೇತನ ನೀಡಲಾಗುತ್ತಿದೆ. ವಿದ್ಯಾಸಾಗರ ಶಾಲೆಗೂ ಸಹಕಾರ ನೀಡಲಾಗಿದೆ ಎಂದರು.
ನಿವೃತ್ತ ಗ್ರಂಥಪಾಲಕ ಡಾ.ಎಂ.ಡಿ.ಅಲಾಸೆ, ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ವಿಜಯಕುಮಾರ ಅಕಿವಾಟೆ, ಮುಖಂಡರಾದ ಜ್ಯೋತಿಕುಮಾರ ಪಾಟೀಲ, ರಮೇಶ ಚೌಗುಲೆ, ಸೌರಭ ಪಾಟೀಲ, ಸಂಸ್ಥೆ ಉಪಾಧ್ಯಕ್ಷ ರಾಜು ಗೋಬಾಜೆ, ಕಾರ್ಯದರ್ಶಿ ಪದ್ಮಾಕರ ಕರವ, ಖಜಾಂಚಿ ಎ.ಎಸ್.ಮಗದುಮ್ಮ, ಸದಸ್ಯರಾದ ವಿ.ಎಸ್.ಕರೋಲೆ, ವಿ.ಡಿ.ಮಾನಗಾಂವೆ, ಎಸ್.ಬಿ.ಗೋಬಾಜೆ, ಕೆ.ಆರ್.ಕುನ್ನೆ, ಡಿ.ವಿ.ಶೆಟ್ಟಿ, ಎ.ಎಸ್.ಪಿರುಜೈನ, ಜಿ.ಎಸ್.ಮಗದುಮ್ಮ, ಎಸ್.ಎಸ್.ಕದ್ದು, ವಿ.ಡಿ.ಚೌಗಲೆ, ಎಸ್.ಎಸ್.ಕಠಾರೆ, ಎ.ಎ.ಪಾಟೀಲ ಇತರರಿದ್ದರು.