ಹಿರೇಬಾಗೇವಾಡಿಯಲ್ಲಿ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹಸಮ್ಮೇಳನದಲ್ಲಿ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಅವರನ್ನು ಸನ್ಮಾನಿಸಲಾಯಿತು. ಎಸ್.ಇಟಗಿ, ಬಿ.ಐ.ಅರಳಿಕಟ್ಟಿ, ವೈ.ಎಲ್.ಪಾಟೀಲ, ಆಂಜನೇಯ ಆರ್.ಕೆ. ಇತರರಿದ್ದರು.
ಹಿರೇಬಾಗೇವಾಡಿ: ಪಾಲಕರಿಗೆ ಮಕ್ಕಳೇ ಸರ್ವಸ್ವ, ಅವರಿಗಾಗಿ ಎಲ್ಲವನ್ನೂ ತ್ಯಾಗ ಮಾಡುತ್ತಾರೆ. ಮಕ್ಕಳು ಅಂತಹ ಪಾಲಕರ ಕನಸು ನನಸು ಮಾಡುವ ಸಂಕಲ್ಪ ಮಾಡಬೇಕೆಂದು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
ಹಿರೇಬಾಗೇವಾಡಿಯ ಗ್ರೂಪ್ ವಿದ್ಯಾವರ್ಧಕ ಸಂಘ, ಕರ್ನಾಟಕ ಸಂಯುಕ್ತ ಪದವಿಪೂರ್ವ ಕಾಲೇಜು, ಕರ್ನಾಟಕ ಬಾಲನಿಕೇತನ ಕನ್ನಡ ಪ್ರಾಥಮಿಕ ಶಾಲೆ, ಬಿ.ಕೆ.ಇಟಗಿ ಇಂಗ್ಲಿಷ್ ಮಿಡಿಯಂ ಸ್ಕೂಲ್ ಆಶ್ರಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ವಿದ್ಯಾರ್ಥಿ ಜೀವನ ಮತ್ತೆ ಮರಳಿ ಬರುವುದಿಲ್ಲ. ಆದರ್ಶ ವ್ಯಕ್ತಿಗಳನ್ನು ಅನುಸರಿಸಿ ಗುರಿ ಸಾಧಿಸಬೇಕು ಎಂದರು.
ವೈ.ಎಲ್.ಪಾಟೀಲ, ಎಸ್.ಇಟಗಿ, ಐ.ಬಿ.ಅರಳಿಕಟ್ಟಿ, ಬಿ.ಜಿ.ವಾಲಿಇಟಗಿ, ಎಸ್.ಬಿ.ಇಟಗಿ, ಎಸ್.ಸಿ.ಓಂಕಾರಿ, ಶಿಕ್ಷಣಾಧಿಕಾರಿ ಆಂಜನೇಯ ಆರ್.ಕೆ., ಎಂ.ಕೆ.ಕರಿದಾವಲ್, ಬಿ.ಜಿ.ವಾಲಿಇಟಗಿ, ಉಳವಪ್ಪ ನಂದಿ, ರಘು ಪಾಟೀಲ, ರಾಮನಗೌಡ ಪಾಟೀಲ, ಎಂ.ಐ.ಪೂಜಾರ, ಬಿ.ಡಿ.ಗಣಾಚಾರಿ, ನಿರ್ಮಲಾ ಇಟಗಿ, ಅಡಿವೇಶ ಇಟಗಿ, ಗೌಸ್ ಜಾಲಿಕೊಪ್ಪ, ಸಯ್ಯದ್ ಸನದಿ, ಸಲೀಂ ಸತ್ತಿಗೇರಿ ಇತರರಿದ್ದರು.