ಜಿಲ್ಲೆಯಲ್ಲಿ ಮತ್ಸೃ ಸಂಜೀವಿನಿ ಯೋಜನೆ ಅಡಿ ಮೀನು ಸಾಕಾಣಿಕೆ  
ಬೆಳಗಾವಿ

ಮಹಿಳೆಯರ ಕೈಹಿಡಿದ ಮತ್ಸೃ ಸಂಜೀವಿನಿ!

ಬೆಳಗಾವಿ :ಗ್ರಾಮೀಣ ಮಹಿಳೆಯರ ಬದುಕಿನಲ್ಲಿ ಹೊಸ ಆತ್ಮವಿಶ್ವಾಸ ಮತ್ಸ್ಯ ಸಂಜೀವಿನಿ’ ಯೋಜನೆಯಡಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಹತ್ತು ತಿಂಗಳಿನಲ್ಲಿ 3 ಲಕ್ಷ ಕೆಜಿ ಮೀನು ಉತ್ಪಾದನೆ ಮಾಡಿ ಹೊಸ ದಾಖಲೆ ನಿರ್ಮಿಸಿದ್ದಾರೆ.
ಹೌದು. ಸರ್ಕಾರವು ಗ್ರಾಮೀಣ ಭಾಗದ ಮಹಿಳೆಯರನ್ನು ಆರ್ಥಿಕವಾಗಿ ಸ್ವಾವಲಂಬನೆಗೊಳಿಸುವ ನಿಟ್ಟಿನಲ್ಲಿ 2020ರಲ್ಲಿಯೇ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಮೂಲಕ ಅನುಷ್ಠಾನಗೊಳಿಸಿರುವ ಮತ್ಸೃ ಸಂಜೀವಿನಿ ಯೋಜನೆ ಅಡಿಯಲ್ಲಿ ವಾರ್ಷಿಕ 25 ರಿಂದ 30ಲಕ್ಷ ರೂ. ವರೆಗೆ ಆರ್ಥಿಕ ವಹಿವಾಟು ನಡೆಯುತ್ತಿದೆ. ಅಲ್ಲದೆ, ಒಂದೇ ವರ್ಷದಲ್ಲಿ 50ಕ್ಕೂ ಅಧಿಕ ಮಹಿಳಾ ಸ್ವಸಹಾಯ ಗುಂಪುಗಳಲ್ಲಿನ 200ಕ್ಕೂ ಅಧಿಕ ಸದಸ್ಯರು ಮೀನು ಉತ್ಪಾದನೆ ಮಾಡಿ 9ಲಕ್ಷ ರೂ. ಆದಾಯಗಳಿಸಿದ್ದಾರೆ.
ಕಳೆದ ನಾಲ್ಕೈದು ವರ್ಷ ಅವಧಿಯಲ್ಲಿ ಜಿಲ್ಲೆಯಾದ್ಯಂತ ಗ್ರಾಮೀಣ ಭಾಗದಲ್ಲಿ ಮತ್ಸ್ಯ ಸಂಜೀವಿನಿ ಕಾರ್ಯಕ್ರಮದ ಅಡಿಯಲ್ಲಿ 12ಲಕ್ಷಕ್ಕೂ ಅಧಿಕ ಮೀನು ಉತ್ಪಾದನೆಯಾಗಿದ್ದು, 50ಲಕ್ಷ ರೂ. ಅಧಿಕ ವಹಿವಾಟು ನಡೆದಿದೆ. ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಿರುವ ಮೀನು ಕೃಷಿಯಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿ ತೊಡಗಿಸಿಕೊಳ್ಳುತ್ತಿರುವುದಕ್ಕೆ ಮತ್ಸೃ ಸಂಜೀವಿನಿ ಯೋಜನೆಯು ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರಿಗೆ ಸಹಕಾರಿಯಾಗಿದೆ.
ಈಗಾಗಲೇ ಕೇಂದ್ರ ಮತ್ತು ರಾಜ್ಯ ಸರ್ಕಾರವು ರಾಜ್ಯದ ಕಾಫಿ ಉತ್ಪಾದನೆ ಮತ್ತು ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ರಾಷ್ಟ್ರೀಯ ಜೀವನೋಪಾಯ ಅಭಿಯಾನ (ಘ್ಕೆಔ) ಅಡಿಯಲ್ಲಿ 5000ಕ್ಕೂ ಮಹಿಳೆಯರಿಗೆ ತರಬೇತಿ ಪಡೆದುಕೊಂಡರು ಆಹಾರ ಉತ್ಪಾದನೆ ಕ್ಷೇತ್ರದಲ್ಲಿ ಸ್ವ ಉದ್ಯಮದಲ್ಲಿ ತೊಡಗಿಸಿಕೊಂಡಿದ್ದಾರೆ. ಗೋಕಾಕ, ಬೆಳಗಾವಿ, ಹುಕ್ಕೇರಿ,ಖಾನಾಪುರ, ಚಿಕ್ಕೋಡಿ, ಸವದತ್ತಿ, ರಾಮದುರ್ಗ,ಬೈಲಹೊಂಗಲ, ಕಿತ್ತೂರು ಸೇರಿ ವಿವಿಧ ತಾಲೂಕಿನಲ್ಲಿ 2000ಕ್ಕೂ ಅಧಿಕ ಮಹಿಳೆಯರು ಮೀನು ಕೃಷಿ ತರಬೇತಿ ಪಡೆದುಕೊಳ್ಳುತ್ತಿರುವುದು ವಿಶೇಷ ಎನ್ನಲಾಗಿದೆ.
...............
ಬಾಕ್ಸ್
ಮಾರುಕಟ್ಟೆ ಸೌಲಭ್ಯ ಕೊರತೆ
ಈಗಾಗಲೇ ಮತ್ಸೃ ಸಂಜೀವಿನ ಯೋಜನೆಯಡಿ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದ 5ಹೆಕ್ಟೇರ್ ವಿಸ್ತೀರ್ಣ ಕೆರೆ, ಹುಕ್ಕೇರಿ ತಾಲೂಕಿನ ನಾಗನೂರು ಕೆ.ಡಿ., ಮತ್ತಿವಾಡೆ, ಹುಳ್ಳೋಳಿ ಗ್ರಾಪಂ ವ್ಯಾಪ್ತಿಯ ಐದು ಕೆರೆ ಹಾಗೂ ಖಾನಾಪುರ ತಾಲೂಕಿನ ದೇವಲಟ್ಟಿ ಗ್ರಾಪಂ ವ್ಯಾಪ್ತಿಯ ಎರಡು ಕೆರೆ ಸೇರಿ ಒಟ್ಟು 8 ಕೆರೆಗಳಲ್ಲಿ 2025-26ನೇ ಸಾಲಿನಲ್ಲಿ 1.15 ಲಕ್ಷ ಕಾಟ್ಲ, ರೋಹು, ಮೃಗಾಲ್, ಸಾಮಾನ್ಯಗೆಂಡೆ ಜಾತಿಯ ಮೀನುಗಳ ಮೀನು ಮರಿ ಬಿತ್ತನೆ ಮಾಡಲಾಗಿತ್ತು. ಇದೀಗ ಆ ಮೀನುಗಳು ದೊಡ್ಡದಾಗಿದ್ದು, 2ರಿಂದ 6 ಕೆಜಿಯಷ್ಟು ಬೆಳದಿದ್ದು ಒಂದೊಂದು ಮೀನು 500 ರಿಂದ 800 ರೂ. ವರೆಗೆ ಮಾರಾಟವಾಗುತ್ತವೆ.ಆದರೆ, ಮಾರುಕಟ್ಟೆ ಸೌಲಭ್ಯ ಕೊರತೆಯಿಂದಾಗಿ ನಿರೀಕ್ಷಿತ ಪ್ರಮಾಣದಲ್ಲಿ ಆದಾಯ ಬರುತ್ತಿಲ್ಲ ಎಂದು ಜಿಪಂ ಅಧಿಕಾರಿಗಳು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
....................
ಬಾಕ್ಸ್
ಜಿಲ್ಲೆಯಲ್ಲಿ ಮತ್ಸೃ ಸಂಜೀವಿನ ಯೋಜನೆ ವಿವರ
ತಾಲೂಕು ಅಂಕಿ ಸಂಖ್ಯೆ
ಕೆರೆ ಮೀನಿನ ಮರಿ ಉತ್ಪಾದನೆ (ಕೆಜಿ) ಆದಾಯ (ಲಕ್ಷ ರೂ.)
ಗೋಕಾಕ 01 40,000 50,000 2
ಖಾನಾಪುರ 02 40,000 1,00,000 4
ಹುಕ್ಕೇರಿ 05 35,000 1,50,000 5
.......................
ಕೋಟ್ಸ್
ಮಹಿಳಾ ಸ್ವಸಹಾಯ ಸಂಘಗಳ ಸದಸ್ಯರು ಕೆರೆಗಳಲ್ಲಿ ಮೀನು ಮರಿಗಳನ್ನು ಬಿಟ್ಟು ಅವುಗಳ ಪಾಲನೆ ಮತ್ತು ಮಾರಾಟ ಮಾಡಿ ಲಾಭ ಪಡೆದುಕೊಳ್ಳಬಹುದು. ಇದಕ್ಕಾಗಿ ಮಹಿಳೆಯರಿಗೆ ತರಬೇತಿ, ಕಾರ್ಯಾಗಾರ ನಡೆಸಲಾಗಿದೆ. ಗ್ರಾಮೀಣ ಭಾಗಗಳಲ್ಲಿ ಮಹಿಳಾ ಸಬಲೀಕರಣದ ಹೊಸ ಅಧ್ಯಾಯ ಬರೆಯುತ್ತಿರುವ ಮತ್ಸ್ಯ ಸಂಜೀವಿನಿಯೋಜನೆ.
- ರವಿ ಬಂಗಾರಪ್ಪನವರ, ಜಿಪಂ ಯೋಜನಾಧಿಕಾರಿ
........