ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ಶ್ರೀ ಗದ್ದುಗೇಶ್ವರ ಗದ್ದುಗೆ ಮರು ಪ್ರತಿಷ್ಠಾಪನೆ ಜರುಗಿತು. ಶಿವ ಸಿದ್ದರಾಮೇಶ್ವರ ಸ್ವಾಮೀಜಿ, ಜಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾಂತ ರೇಣುಕಾಚಾರ್ಯ ಸ್ವಾಮೀಜಿ ಇತರರಿದ್ದರು.
- ಶಿವ ಸಿದ್ದರಾಮೇಶ್ವರ ಶ್ರೀ ಆಶೀರ್ವಚನ
- ಗದ್ದುಗೇಶ್ವರ ಗದ್ದುಗೆ ಮರು ಪ್ರತಿಷ್ಠಾಪನೆ
ಮಲ್ಲಮ್ಮನ ಬೆಳವಡಿ: ನಾವು ಧರ್ಮವನ್ನು ರಕ್ಷಿಸಿದರೆ, ಧರ್ಮ ನಮ್ಮನ್ನು ರಕ್ಷಿಸುತ್ತದೆ. ಹೀಗಾಗಿ, ಪ್ರತಿಯೊಬ್ಬರೂ ನಿತ್ಯ ಬದುಕಿನ ಒತ್ತಡದ ಮಧ್ಯೆಯೂ ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳಬೇಕು ಎಂದು ಸುಳ್ಳದ ಪಂಚಗ್ರಹ ಹಿರೇಮಠದ ಶಿವ ಸಿದ್ದರಾಮೇಶ್ವರ ಸ್ವಾಮೀಜಿ ಹೇಳಿದರು.
ಶ್ರೀ ವೀರಭದ್ರೇಶ್ವರ ದೇವಸ್ಥಾನ ಬಳಿ ಬುಧವಾರ ಹಮ್ಮಿಕೊಂಡಿದ್ದ ಶ್ರೀ ಗದ್ದುಗೇಶ್ವರ ಗದ್ದುಗೆ ಮರು ಪ್ರತಿಷ್ಠಾಪನೆ ಹಾಗೂ ಧರ್ಮಸಭೆಯಲ್ಲಿ ಆಶೀರ್ವಚನ ನೀಡಿದರು. ಧರ್ಮದಿಂದ ಸುಖ, ಶಾಂತಿ ಹಾಗೂ ನೆಮ್ಮದಿ ಪ್ರಾಪ್ತಿಯಾಗುತ್ತದೆ. ಸಮಾಜದಲ್ಲಿ ಧರ್ಮ ಜಾಗೃತಿ ಮೂಡಿಸುವ ಮೂಲಕ ಎಲ್ಲರ ಒಳತಿಗಾಗಿ ಶ್ರಮಿಸುತ್ತಿರುವ ಮಠ-ಮಂದಿರಗಳ ಪಾತ್ರ ಪ್ರಮುಖವಾದುದು ಎಂದು ತಿಳಿಸಿದರು.
ಜೀವಿ ಕಲಾ ಬಳಗದ ಅಧ್ಯಕ್ಷ ಗದಗಯ್ಯ ಹಿರೇಮಠ ಮಾತನಾಡಿ, ಐತಿಹಾಸಿಕ ಹಿನ್ನೆಲೆ ಹಾಗೂ ದಶಕಗಳ ಪರಂಪರೆ ಹೊಂದಿರುವ ಗದ್ದುಗೇಶ್ವರ ಗದ್ದುಗೆ ಮರು ಪ್ರತಿಷ್ಠಾಪನೆ ಮಾಡಿರುವ ಕಾರ್ಯ ಸಮಾಜದ ಶ್ರೇಯೋಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಬೆಳಗ್ಗೆ ಮಾಸನಕಟ್ಟಿಯ ಹಾಲಯ್ಯಶಾಸ್ತ್ರೀ ಹಿರೇಮಠ ಹೋಮ-ಹವನ ಸೇರಿದಂತೆ ವಿವಿಧ ಪೂಜಾ ಕೈಂಕರ್ಯ ನೆರವೇರಿಸಿದರು. ಬಳಿಕ ಅನ್ನಪ್ರಸಾದ ಜರುಗಿತು.
ದೊಡವಾಡದ ಜಡಿ ಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ, ಮಹಾಂತ ರೇಣುಕಾಚಾರ್ಯ ಸ್ವಾಮೀಜಿ, ಅಭಿನವ ರೇವಣಸಿದ್ಧ ಶಿವಯೋಗಿ ಸ್ವಾಮೀಜಿ, ಜಿಪಂ ಮಾಜಿ ಸದಸ್ಯ ಈರಣ್ಣ ಕರಿಕಟ್ಟಿ, ದುಂಡಪ್ಪ ಗೋದಳ್ಳಿ. ಶಂಕರ ಕರಿಕಟ್ಟಿ, ಪ್ರಾಚಾರ್ಯ ಮಹಾಂತೇಶ ಉಪ್ಪಿನ, ಮಲ್ಲಸರ್ಜ ಕರಿಕಟ್ಟಿ, ಪ್ರಕಾಶ ಹುಂಬಿ, ಮಹಾಲಿಂಗಯ್ಯ ಕೆಂಜೆಡಿಮಠ, ಶಶಿಧರ ಪತ್ತಾರ, ರಾಚಯ್ಯ ರೊಟ್ಟಯ್ಯನವರಮಠ, ಶಂಕರಯ್ಯ ಕೆಂಜೆಡಿಮಠ, ಮುಖ್ಯಶಿಕ್ಷಕ ಸದ್ಯಪ್ಪ ಗುಗ್ಗರಿ, ಚಂಬಕ್ಕ ತೆಂಗಿನಮಠ, ಸರೋಜಾ ಹಿರೇಮಠ, ಶಿವಶಂಕರ ಹಿರೇಮಠ ಇತರರಿದ್ದರು.