ಗಂದಿಗವಾಡದಲ್ಲಿ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಶಾಸಕ ವಿಠ್ಠಲ ಹಲಗೇಕರ ಮಾತನಾಡಿದರು. ಚನ್ನಬಸವದೇವರು, ಮೃತ್ಯುಂಜಯಸ್ವಾಮಿ ಹಿರೇಮಠ, ಬಸವರಾಜ ಸಾಣಿಕೊಪ್ಪ, ಮಲ್ಲಪ್ಪ ಮಾರಿಹಾಳ ಇತರರಿದ್ದರು.
ಸಮೀಪದ ಗಂದಿಗವಾಡ ಗ್ರಾಮದ ಗಜಾನನ ದೇವಸ್ಥಾನದ ಲೋಕಾರ್ಪಣೆಯ ವಾರ್ಷಿಕೋತ್ಸವ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮಾತನಾಡಿ, ಆಡಂಬರದ ಜೀವನಕ್ಕೆ ಬೆರಗಾಗದೆ ಸರಳ ಜೀವನ ಸೂತ್ರ ಅಳವಡಿಸಿಕೊಳ್ಳುವ ಮೂಲಕ ನೆಮ್ಮದಿಯ ಬದುಕು ಸಾಗಿಸಬೇಕು ಎಂದರು.
ಬಿಳಕಿ-ಅವರೊಳ್ಳಿ ರುದ್ರಸ್ವಾಮಿ ಮಠದ ಚನ್ನಬಸವದೇವರು ಮಾತನಾಡಿದರು. ಮೃತ್ಯುಂಜಯಸ್ವಾಮಿ ಹಿರೇಮಠ, ಬಿಜೆಪಿ ಮುಖಂಡರಾದ ಬಸವರಾಜ ಸಾಣಿಕೊಪ್ಪ, ಮಲ್ಲಪ್ಪ ಮಾರಿಹಾಳ, ಸುನೀಲ ಮಡ್ಡಿಮನಿ, ಶ್ರೀಕಾಂತ ಇಟಗಿ, ಜ್ಯೋತಿಬಾ ರೆಹಮಾನೆ, ಮಹಾಂತೇಶ ಕಮತಗಿ, ಬಸು ಕಮ್ಮಾರ, ಮಾರುತಿ ಕಮತಗಿ, ಮಹಾಂತೇಶ ಚಿಕ್ಕಮಠ, ವೀರಭದ್ರಯ್ಯ ಚಿಕ್ಕಮಠ, ಉಮೇಶ ಕಮ್ಮಾರ, ವಿಶ್ವನಾಥ ಚಿಕ್ಕಮಠ, ಬಸವರಾಜ ಯಡಾಲ, ಬಾಬು ನೇಗಿನಹಾಳ, ಅಣ್ಣಪ್ಪ ಮಿರಜಕರ ಇತರರಿದ್ದರು.