ಅರಟಾಳ ಗ್ರಾಮದ ಶ್ರೀ ಮಾಳಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಕರಪತ್ರ ಬಿಡುಗಡೆ ಕಾರ್ಯಕ್ರಮದಲ್ಲಿ ಶಿವಪ್ಪ ಹಟ್ಟಿ, ಮಲ್ಲಪ್ಪ ಪೂಜಾರಿ ಇತರರಿದ್ದರು. 
ಬೆಳಗಾವಿ

೧೭ರಿಂದ ಮಾಳಿಂಗೇಶ್ವರ ಜಾತ್ರೆ

ವಿದ್ಯಾ ಶೆಟ್ಟನಗೌಡ್ರ
ಅರಟಾಳ: ಜಾತ್ರಾ ಮಹೋತ್ಸವ ತಯಾರಿ ಭರದಿಂದ ಸಾಗಿದ್ದು, ಎಲ್ಲರೂ ತನು, ಮನ, ಧನದಿಂದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಶ್ರೀ ಮಾಳಿಂಗೇಶ್ವರ ಕೃಪೆಗೆ ಪಾತ್ರರಾಗೋಣ ಎಂದು ಮಾಳಿಂಗೇಶ್ವರ ಕಮಿಟಿ ಅಧ್ಯಕ್ಷ ಶಿವಪ್ಪ ಹಟ್ಟಿ ಹೇಳಿದರು.
ಗ್ರಾಮದಲ್ಲಿ ಬುಧವಾರ ಕರಪತ್ರ ಬಿಡುಗಡೆಗೊಳಿಸಿ ಮಾತನಾಡಿ, ಜ.೧೭ರಿಂದ ೨೦ರವರೆಗೆ ಜರುಗುವ ಜಾತ್ರೆಯಲ್ಲಿ ಭಕ್ತರಿಗೆ ಬಸ್ ಸೌಲಭ್ಯ, ಶುದ್ಧ ಕುಡಿಯುವ ನೀರು, ದೀಪದ ವ್ಯವಸ್ಥೆ ಪ್ರತಿದಿನ ಅನ್ನ ಸಂತರ್ಪಣೆ ಇರುತ್ತದೆ. ಹನ್ನೊಂದು ಗ್ರಾಮಗಳ ದೇವರ ಪಲ್ಲಕ್ಕಿ ಭಾಗವಹಿಸಲಿವೆ. ಬೈಲಾಟ, ನಾಟಕ, ಡೊಳ್ಳಿನ ಪದ, ಭಜನಾ ಪದ, ಸಂಗ್ರಾಮ ಕಲ್ಲು ಮತ್ತು ಗುಂಡು ಕಲ್ಲು ಎತ್ತುವ, ರಂಗೋಲಿ, ಓಟದ ಸ್ಪರ್ಧೆ ಆಯೋಜಿಸಲಾಗಿದೆ ಎಂದರು.
ಪಿಕೆಪಿಎಸ್ ಅಧ್ಯಕ್ಷ ಮಲ್ಲಪ್ಪ ಪೂಜಾರಿ, ಗ್ರಾಪಂ ಸದಸ್ಯ ರಾಮಪ್ಪ ಪೂಜಾರಿ, ಅರ್ಚಕ ನಿಂಗಪ್ಪ ಪೂಜಾರಿ, ಉದಯಸಿಂಗ ಘಾಟಗೆ, ಸಿದರಾಯ ಅರ್ಜುಣಗಿ, ಬಾಲೇಶ ಸನದಿ, ಯಂಕಪ್ಪ ಪೂಜಾರಿ, ಗಿರಮಲ್ಲ ಹಟ್ಟಿ, ಮಲ್ಲಪ್ಪ ನಾಯಿಕ, ಕರೆಪ್ಪ ಹಟ್ಟಿ, ರಾಯಪ್ಪ ಪೂಜಾರಿ, ಭೀರಪ್ಪ ಪೂಜಾರಿ, ಸುರೇಶ ಚವ್ಹಾಣ, ಶ್ರೀಕಾಂತ ನಾಯಿಕ, ಸಿದ್ದಪ್ಪ ಮಮದಾಪುರ, ಹನುಮಂತ ತೆಲಸಂಗ, ಕುಮಾರ ಪೂಜಾರಿ, ಗುರವ್ವ ಮಾದರ ಇತರರಿದ್ದರು.