ಹಾರೂಗೇರಿಯಲ್ಲಿ ಶ್ರೀ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘ ಹಮ್ಮಿಕೊಂಡಿದ್ದ ಸಾಲ ಮೇಳಕ್ಕೆ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ, ಕಿಶೋರ ಬಾಳಿ ಚಾಲನೆ ನೀಡಿದರು. ಬಿ.ಎಚ್.ಸೌಂದಲಗಿ, ಪ್ರತಾಪ ಪಟ್ಟಣಶೆಟ್ಟಿ ಇತರರಿದ್ದರು.
ಹಾರೂಗೇರಿ: ಗ್ರಾಮೀಣ ಜನರ ಆರ್ಥಿಕ ಅಗತ್ಯ ಪೂರೈಸುವ ಉದ್ದೇಶದಿಂದ ಸ್ಥಾಪಿತವಾದ ಶ್ರೀ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಕಾರ್ಯ ಶ್ಲಾಘನೀಯ ಎಂದು ಪರಮಾನಂದವಾಡಿ ಅಭಿನವ ಬ್ರಹ್ಮಾನಂದ ಆಶ್ರಮದ ಡಾ.ಅಭಿನವ ಬ್ರಹ್ಮಾನಂದ ಸ್ವಾಮೀಜಿ ಹೇಳಿದರು.
ಪಟ್ಟಣದ ಕಾಳಿಕಾದೇವಿ ದೇವಸ್ಥಾನದ ಸಭಾಭವನದಲ್ಲಿ ಶ್ರೀ ಮಹಾತ್ಮ ಬಸವೇಶ್ವರ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ವತಿಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಸಾಲ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ಸಂಘದ ಅಧ್ಯಕ್ಷ ಕಿಶೋರ ಬಾಳಿ ಮಾತನಾಡಿ, ಗ್ರಾಮೀಣ ಜನರ ಆರ್ಥಿಕ ಸಬಲೀಕರಣದ ಆಶಯದೊಂದಿಗೆ ಆರಂಭವಾದ ಸಂಘ ಗ್ರಾಹಕರ ವಿಶ್ವಾಸ ಹಾಗೂ ಎಲ್ಲ ನೌಕರರ ಪರಿಶ್ರಮದಿಂದ ಲಾಭದತ್ತ ಮುನ್ನಡೆಯುತ್ತಿದೆ. ಅದರ ಭಾಗವಾಗಿ ಸಾಲ ಮೇಳ ಆಯೋಜಿಸಲಾಗಿದೆ. ಇಂತಹ ಕಾರ್ಯಕ್ರಮ ಜನರಲ್ಲಿ ಆತ್ಮವಿಶ್ವಾಸ ಮೂಡಿಸುವ ಜತೆಗೆ ಸ್ವಾವಲಂಬಿ ಬದುಕಿಗೆ ದಾರಿಯಾಗಿವೆ ಎಂದರು.
ಶಾಖಾ ವ್ಯವಸ್ಥಾಪಕ ಬಿ.ಎಚ್.ಸೌಂದಲಗಿ, ಪ್ರತಾಪ ಪಟ್ಟಣಶೆಟ್ಟಿ, ಸುರೇಶ ಶೆಟ್ಟಿ, ಅಶೋಕ ಲಿಗಾಡೆ, ದಿನೇಶ ಪಾಟೀಲ, ಬಸನಗೌಡ ಆಸಂಗಿ, ವಿಠ್ಠಲ ಬಂತಿ, ಬಸವರಾಜ ಅರಕೇರಿ, ವಸಂತ ಲಾಳಿ, ಸಿದ್ದಗೌಡ ಪಾಟೀಲ, ಪವನ ಕೊತ್ತಲಗಿ, ರಮೇಶ ಖೇತಗೌಡರ, ಭೀಮಗೌಡ ಮಾನೆ, ದತ್ತಾತ್ರೇಯ ಪಾಟೀಲ, ಭರತೇಶ ಶಿರಹಟ್ಟಿ, ದಸ್ತಗೀರ್ ಕಾಗವಾಡೆ, ಚೇತನ ಪಾಟೀಲ, ಬಿ.ಆರ್.ಆಜೂರ, ಸುನೀಲ ಕಬ್ಬುರ, ಎಂ.ಬಿ.ಬಡಿಗೇರ ಇತರರಿದ್ದರು.