ಚಿಕ್ಕುಂಬಿ ಗ್ರಾಮದಲ್ಲಿ ಮಹರ್ಷಿ ಭಗೀರಥ ವೃತ್ತದಲ್ಲಿ ಶಾಸಕ ವಿಶ್ವಾಸ ವೈದ್ಯ ಪೂಜೆ ಸಲ್ಲಿಸುವುದರ ಮೂಲಕ ಮೂರ್ತಿ ಪ್ರತಿಷ್ಠಾಪನೆ ಮಾಡಿದರು. ಅಭಿನವ ನಾಗಲಿಂಗ ಸ್ವಾಮೀಜಿ, ಮಾರುತಿ ಉಪ್ಪಾರ, ಪಂಚಲಿಂಗಪ್ಪ ತೊರಗಲ್ ಇತರರಿದ್ದರು.
- ಶಾಸಕ ವಿಶ್ವಾಸ ವೈದ್ಯ ಹೇಳಿಕೆ
- ಚಿಕ್ಕುಂಬಿ ಗ್ರಾಮದಲ್ಲಿ ಮೂರ್ತಿ ಪ್ರತಿಷ್ಠಾಪನೆ
ಸವದತ್ತಿ: ಭಗೀರಥ ಮಹರ್ಷಿ ಕಠಿಣ ತಪಸ್ಸಿನ ಮೂಲಕ ಗಂಗೆಯನ್ನು ಭೂಮಿಗೆ ಇಳಿಸಿ, ಭೂಲೋಕದ ಸಕಲ ಜೀವಿಗಳ ದಾಹ ತಣಿಸಿದ ಮಹಾತ್ಮರಾಗಿದ್ದಾರೆ ಎಂದು ಶಾಸಕ ವಿಶ್ವಾಸ ವೈದ್ಯ ಹೇಳಿದರು.
ತಾಲೂಕಿನ ಚಿಕ್ಕುಂಬಿ ಗ್ರಾಮದಲ್ಲಿ ಈಚೆಗೆ ಮಹರ್ಷಿ ಭಗೀರಥ ವೃತ್ತದಲ್ಲಿ ಹಮ್ಮಿಕೊಂಡಿದ್ದ ಮೂರ್ತಿ ಪ್ರತಿಷ್ಠಾಪನಾ ಕಾರ್ಯಕ್ರಮದಲ್ಲಿ ಮಾತನಾಡಿ, ಸಮುದಾಯದ ಅಭಿವೃದ್ಧಿಗೆ ಶಿಕ್ಷಣ ಮುಖ್ಯವಾಗಿದ್ದು, ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ ಶೈಕ್ಷಣಿಕ, ಆರ್ಥಿಕ ಹಾಗೂ ರಾಜಕೀಯವಾಗಿ ಸಮಾಜ ಮುನ್ನಡೆಸಬೇಕು ಎಂದು ಸಲಹೆ ನೀಡಿದರು.
ಗ್ರಾಮದ ಅಭಿನವ ನಾಗಲಿಂಗ ಸ್ವಾಮೀಜಿ ಆಶೀರ್ವಚನ ನೀಡಿ, ಭಗೀರಥರ ಆದರ್ಶ ಸಮಾಜದಲ್ಲಿ ಸೇವಾ ಮನೋಭಾವ ಮತ್ತು ಒಗ್ಗಟ್ಟನ್ನು ಬೆಳೆಸುವಂತಿವೆ ಎಂದರು. ಉಪ್ಪಾರ ಅಭಿವೃದ್ಧಿ ನಿಗಮದ ಅಧ್ಯಕ್ಷ ಭರಮಣ್ಣ ಉಪ್ಪಾರ, ಜಿಲ್ಲಾ ಮಟ್ಟದ ಜಾಗೃತಿ ಹಾಗೂ ಉಸ್ತುವಾರಿ ಸಮಿತಿ ಸದಸ್ಯ ಬಸವರಾಜ ಆಯಟ್ಟಿ ಮಾತನಾಡಿದರು.
ಗದ್ದಿಕರವಿನಕೊಪ್ಪ ಮಠದ ಗುರುಮೂರ್ತಿ ಸ್ವಾಮೀಜಿ, ಮಾರುತಿ ಉಪ್ಪಾರ, ಪಂಚಲಿಂಗಪ್ಪ ತೊರಗಲ್, ಸಿದ್ದಲಿಂಗಪ್ಪ ತೊರಗಲ್, ಶಿವಪ್ಪ ಶಿರಸಂಗಿ, ಬಸಪ್ಪ ಹಿತ್ತಲಮನಿ, ಶೇಖಪ್ಪ ಹಂಚಿನಾಳ, ಸುಭಾಷ ಹಂಚಿನಾಳ, ಹನುಮಂತ ಹಂಚಿನಾಳ, ಕಲ್ಲಪ್ಪ ಕಲ್ಲಕುಟ್ರಿ ಇತರರಿದ್ದರು.