ಕಾಗವಾಡದ ಭವಾನಿ ಜುವೆಲರ್ಸ್ ಏರ್ಪಡಿಸಿದ್ದ ಲಕ್ಕಿ ಡ್ರಾ ವಿಜೇತರಾದ ಪ್ರೀತಿ ರತ್ನಪ್ಪಗೋಳ ಅವರಿಗೆ ದ್ವಿಚಕ್ರವಾಹನ ಹಸ್ತಾಂತರಿಸಲಾಯಿತು. ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ರಮೇಶ ಚೌಗುಲಾ, ಸಂಜಯ ಶಿಂಧೆ, ಸೂರಜ ಶಿಂಧೆ ಇತರರಿದ್ದರು.
ಕಾಗವಾಡ: ಪಟ್ಟಣದ ಭವಾನಿ ಜುವೆಲರ್ಸ್ ನವರು 50 ಸಾವಿರ ರೂ. ಮೀರಿದ ಖರೀದಿ ಮೇಲೆ ಲಕ್ಕಿ ಡ್ರಾ ಯೋಜನೆ ರೂಪಿಸಿದ್ದು, ಇದರಿಂದ ಗ್ರಾಹಕರಿಗೆ ಅನುಕೂಲವಾಗಿದೆ ಎಂದು ಪ್ರೀತಿ ರತ್ನಪ್ಪಗೋಳ ಹೇಳಿದರು.
ಸೋಮವಾರ ಲಕ್ಕಿ ಡ್ರಾ ಕಾರ್ಯಕ್ರಮದಲ್ಲಿ ಮೊದಲ ಬಹುಮಾನ ವಾಗಿ ದ್ವಿಚಕ್ರ ವಾಹನ ಪಡೆದುಕೊಂಡು ಮಾತನಾಡಿ, ಭವಾನಿ ಜುವೆಲರ್ಸ್ ಮಾಲೀಕರಾದ ಸಂಜಯ ಶಿಂಧೆ ಮತ್ತು ಸೂರಜ ಶಿಂಧೆ ಮಳಿಗೆ ಪ್ರಾರಂಭಿಸಿ, ಮಧ್ಯಮ ವರ್ಗದವರ ಆಭರಣ ಖರೀದಿ ಕನಸು ನನಸಾಗಿಸುತ್ತಿದ್ದಾರೆ. ಲಾಟರಿ ಮೂಲಕ ಅನೇಕ ಜನರಿಗೆ ಬಹುಮಾನ ವಿತರಿಸಿದ್ದಾರೆ ಎಂದರು.
ಭವಾನಿ ಜುವೆಲರ್ಸ್ ಮಾಲೀಕ ಸಂಜಯ ಶಿಂಧೆ ಮಾತನಾಡಿ, 50 ಸಾವಿರ ರೂ. ಮೇಲ್ಪಟ್ಟು ಖರೀದಿ ಮಾಡಿರುವ ಪ್ರತಿಯೊಬ್ಬರಿಗೂ ಆಕರ್ಷಕ ಬಹುಮಾನ ನೀಡಲಾಗುವುದು ಎಂದರು.
ಲಕ್ಕಿ ಡ್ರಾದಲ್ಲಿ ವಿವೇಕ ಕಾಂಬಳೆ ಲ್ಯಾಪ್‌ಟ್ಯಾಪ್, ಗಂಗಪ್ಪ ಅಕಿವಾಟೆ ಪ್ರಿಡ್ಜ್, ಸ್ವರೂಪ ಪಾಟೀಲ ಮೊಬೈಲ್ ೋನ್, ವೈಭವ ಧೊತ್ರೆ ವಾಷಿಂಗ್ ಮಷಿನ್, ಅದ್ವಿಕ್ ದರೂರೆ ಮೈಕ್ರೋಓವನ್, ಅಶೋಕ ಪಾಟೀಲ ವಾಟರ್ ಫಿಲ್ಟರ್, ಸಚಿನ ಕಳೇಕರ ಮಿಕ್ಸರ್, ಪ್ರಜ್ವಲ ಮಿರ್ಜೆ ಹೊಲಿಗೆಯಂತ್ರ, ರಕ್ಷಿತಾ ಅಕಿವಾಟೆ ಕೂಲರ್‌ಳನ್ನು ಬಹುಮಾನವಾಗಿ ಪಡೆದುಕೊಂಡರು. ಇದಲ್ಲದೆ, 10 ಪೈಠಣಿ ಸೀರೆ ಮತ್ತು 5 ಬೆಳ್ಳಿ ನಾಣ್ಯಗಳನ್ನು ಬಹುಮಾನವಾಗಿ ವಿತರಿಸಲಾಯಿತು.
ಮುಖಂಡರಾದ ಜ್ಯೋತಿಕುಮಾರ ಪಾಟೀಲ, ಸೌರಭ ಪಾಟೀಲ, ರಮೇಶ ಚೌಗುಲಾ, ವಿಲಾಸ ಮಿರ್ಜೆ ಭಾಗವಹಿಸಿದ್ದರು.