ಬೋರಗಾಂವ ಪಟ್ಟಣದಲ್ಲಿ ಹಮ್ಮಿಕೊಂಡಿದ್ದ ಮಹಾವೀರ ಜಯಂತಿ ಕಾರ್ಯಕ್ರಮದಲ್ಲಿ ಯುವ ಮುಖಂಡ ಉತ್ತಮ ಪಾಟೀಲ, ಧನಶ್ರೀ ಪಾಟೀಲ, ವಿನಯಶ್ರೀ ಪಾಟೀಲ, ರಾಜಗೌಡ ಪಾಟೀಲ, ಭಾವುಸಾಹೇಬ ಪಾಟೀಲ, ಉದಯ ನಿಟವೆ ಇತರರಿದ್ದರು. 
ಬೆಳಗಾವಿ

ಭಗವಾನ ಮಹಾವೀರ ಕೊಡುಗೆ ಅಪಾರ

ಬೋರಗಾಂವ: ಜಗತ್ತಿಗೆ ಅಹಿಂಸೆ, ಸತ್ಯ ಹಾಗೂ ತಾಳ್ಮೆ ಸಂದೇಶ ಸಾರಿದ ಭಗವಾನ ಮಹಾವೀರರ ಕೊಡುಗೆ ಮಹತ್ವದ್ದಾಗಿದೆ ಎಂದು ಯುವ ಮುಖಂಡ ಉತ್ತಮ ಪಾಟೀಲ ಹೇಳಿದರು.
ಪಟ್ಟಣದಲ್ಲಿ ಜೈನ ಸಮುದಾಯದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಭಗವಾನ ಮಹಾವೀರರ ೨೬೨೫ನೇ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿ, ಸ್ಪರ್ಧಾತ್ಮಕ ಯುಗದಲ್ಲಿ ಯುವಕರು ಅವರ ಆದರ್ಶ ಸ್ವೀಕರಿಸಿ ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬೇಕು ಎಂದರು.
ವಿತರಾಗ ಮಹಿಳಾ ಮಂಡಲದ ಅಧ್ಯಕ್ಷೆ ಮೀನಾಕ್ಷಿ ಪಾಟೀಲ, ವಿನಯಶ್ರೀ ಪಾಟೀಲ, ಧನಶ್ರೀ ಪಾಟೀಲ, ಅಭಯ ಕರೋಲೆ, ರಾಜಗೌಡ ಪಾಟೀಲ, ಮಹಾವೀರ ಪಾಟೀಲ, ಭಾವುಸಾಹೇಬ ಪಾಟೀಲ, ಉದಯ ನಿಟವೆ, ಮನೋಜಕುಮಾರ ಪಾಟೀಲ, ಶೀತಲ ಅಮ್ಮಣ್ಣನವರ, ಯುವರಾಜ ಪಾಟೀಲ, ಶೀತಲ ಪಾಟೀಲ, ದರ್ಶನ ಪಾಟೀಲ, ಬಾಳಾಸಾಹೇಬ ಬಸಣ್ಣನವರ, ಶ್ರೀಮಂಧರ ಪಾಟೀಲ, ಸಂಜಯ ಹವಲೆ, ಬಾಳಾಸಾಹೇಬ ಹವಲೆ, ಅನಿಲ ಪಾಟೀಲ, ಪ್ರವೀಣ ಪಾಟೀಲ, ಮೋಹನ ಚೌಗುಲೆ, ರಾಜೇಂದ್ರ ವಾಳ್ವೇಕರ, ಪಾಯಗೊಂಡ ಪಾಟೀಲ ಇತರರಿದ್ದರು.