ಇಂದಿರಾ ಕ್ಯಾಂಟೀನ್  
ಬೆಳಗಾವಿ

ಇಂದಿರಾ ಕ್ಯಾಂಟೀನ್ ಲೆಕ್ಕಕ್ಕೆ ಲಾಕ್!

ಬೆಳಗಾವಿ :

ನಗರ ಪ್ರದೇಶಗಳಲ್ಲಿ ಬಡವರ ಹಸಿವು ನೀಗಿಸುವ ಉದ್ದೇಶದಿಂದ ಆರಂಭಗೊಂಡಿರುವ ಇಂದಿರಾ ಕ್ಯಾಂಟೀನ್‌ಗಳಲ್ಲಿ ಪಾರದರ್ಶಕತೆ, ಗುಣಮಟ್ಟ ಕಾಪಾಡುವ ನಿಟ್ಟಿನಲ್ಲಿ ‘ಗ್ರಾಹಕರ ರಿಜಿಸ್ಟ್ರಾರ್ ನಿರ್ವಹಣೆ’ಗೆ ಮುಂದಾಗಿದೆ!

ಹೌದು. ಜಿಲ್ಲೆಯಲ್ಲಿ ಬೆಳಗಾವಿ ಮಹಾನಗರ ಪಾಲಿಕೆ, ನಗರಸಭೆ, ಪುರಸಭೆ ಹಾಗೂ ಪಟ್ಟಣ ಪಂಚಾಯತಿ ಕಾರ್ಯನಿರ್ವಹಿಸುತ್ತಿರುವ 24 ಇಂದಿರಾ ಕ್ಯಾಂಟೀನ್‌ಗೆ ನಿರೀಕ್ಷಿತ ಪ್ರಮಾನದಲ್ಲಿ ಗ್ರಾಹಕರು ಬಾರದಿದ್ದರೂ ನಿತ್ಯ 800 ರಿಂದ 1 ಸಾವಿರ ಮಂದಿ ಆಹಾರ ಸೇವಿಸಿದ್ದಾರೆ ಎಂಬ ಲೆಕ್ಕ ತೋರಿಸಲಾಗುತ್ತಿದೆ. ಆದರೆ, ವಾಸ್ತವದಲ್ಲಿ ಕೆಲ ಕ್ಯಾಂಟೀನ್‌ಗಳಲ್ಲಿ ಬೆರಳೆಣಿಕೆಯಷ್ಟು ಜನ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರತಿ ನಿತ್ಯ ಕ್ಯಾಂಟೀನ್‌ಗೆ ಬರುವ ಗ್ರಾಹಕರ ಹೆಸರು ಮತ್ತು ಮೊಬೈಲ್ ಸಂಖ್ಯೆ ದಾಖಲಿಸುವ ವ್ಯವಸ್ಥೆ ಜಾರಿಗೆ ತರಲು ಸರ್ಕಾರ ನಿರ್ಧರಿಸಿದೆ.
ಇಂದಿರಾ ಕ್ಯಾಂಟೀನ್‌ಗಳಲ್ಲಿ ನಿಗದಿತ ಸಂಖ್ಯೆಯಷ್ಟು ಆಹಾರ ವಿತರಿಸಲಾಗಿದೆ ಎಂದು ಪ್ರತಿದಿನ ವರದಿ ಸಲ್ಲಿಕೆಯಾಗುತ್ತಿದೆ. ಆದರೆ, ಜನರಿಲ್ಲದಿದ್ದರೂ 500 ಮಂದಿ ಆಹಾರ ಸೇವಿಸಿದ್ದಾರೆ ಎಂಬಂತೆ ಲೆಕ್ಕ ತೋರಿಸಲಾಗುತ್ತಿದೆ. ಕೆಲವು ಕಡೆ ವಾಸ್ತವ ಗ್ರಾಹಕರ ಸಂಖ್ಯೆ ಹಾಗೂ ದಾಖಲೆಗಳಲ್ಲಿ ತೋರಿಸಿರುವ ಗ್ರಾಹಕರ ಸಂಖ್ಯೆಗೆ ತುಂಬಾ ವ್ಯತ್ಯಾಸ ಕಂಡು ಬರುತ್ತಿದೆ. ಇದರಿಂದಾ ಮೇಲ್ನೋಟಕ್ಕೆ ಸರ್ಕಾರ ಅನುದಾನ ದುರ್ಬಳಕೆ ಆಗುತ್ತಿರುವ ಕುರಿತು ದೂರುಗಳು ಬರುತ್ತಿರುವ ಕಾರಣ ಸರ್ಕಾರವು ಕ್ಯಾಂಟೀನ್‌ಗ ಮೇಲೆ ನಿಗಾ ವಹಿಸಲು ಜಿಪಿಎಸ್ ಕ್ಯಾಮೆರಾ, ರಿಜಿಸ್ಟ್ರಾರ್ ಅಳವಡಿಸುವುದರಿಂದ ಕಾಗದದ ಮೇಲಿನ ಲೆಕ್ಕಕ್ಕಿಂತ ಕ್ಯಾಂಟೀನ್‌ನಲ್ಲಿ ಊಟ ಮಾಡಿದವರ ನೈಜ ಸಂಖ್ಯೆಯೇ ಮುಖ್ಯವಾಗಲಿದೆ.
ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕ್ಯಾಂಟೀನ್‌ಗಳಿಗೆ ಮೂರು ಹೊತ್ತು ಸೇರಿ ಪ್ರತಿದಿನ 1,500 ಪ್ಲೇಟ್ ಆಹಾರ ಪೂರೈಸುತ್ತಿವೆ. ಐ ಕ್ಯಾಂಟೀನ್‌ಗಳಲ್ಲಿ ಕ್ಯಾಂಟೀನ್‌ಗಳಲ್ಲಿ ಪ್ರತಿದಿನ ಒಬ್ಬ ವ್ಯಕ್ತಿಯ ಉಪಹಾರ, ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಭೋಜನಕ್ಕೆ ಸೇರಿ ಒಟ್ಟು 61 ರೂ. ದರ ನಿಗದಿಪಡಿದೆ. ಇದರಲ್ಲಿ ಗ್ರಾಹಕರು ಬೆಳಗಿನ ಉಪಹಾರಕ್ಕೆ 5 ರೂ.ಮಧ್ಯಾಹ್ನ, ರಾತ್ರಿ ಊಟಕ್ಕೆ ತಲಾ 10 ರೂ. ದರ ನಿಗದಿ ಪಡಿಸಿದೆ. ಬಾಕಿ ಉಳಿದ 36 ರೂ. ನಗರ ಸ್ಥಳೀಯ ಸಂಸ್ಥೆಗಳು ಪಾವತಿಸುತ್ತಿವೆ. ಆದರೆ, ಗುರಿ ತಲುಪಿಸುವ ಹೆಸರಿನಲ್ಲಿ ನೈಜ ಗ್ರಾಹಕರಿಗಿಂತ ಹೆಚ್ಚಿನ ಸಂಖ್ಯೆಯನ್ನು ಲೆಕ್ಕದಲ್ಲಿ ತೋರಿಸಲಾಗುತ್ತಿದೆಯೇ ಎಂಬ ಅನುಮಾನಕ್ಕೆ ಇದೀಗ ಹೊಸ ನೋಂದಣಿ ವ್ಯವಸ್ಥೆ ಜಾರಿಗೆ ಬರಲಿದೆ ಎನ್ನುತ್ತಾರೆ ಅಧಿಕಾರಿಗಳು.
.....................
ಬಾಕ್ಸ್
ಕ್ಯಾಂಟೀನ್ ಮೇಲೆ ನಿಗಾ ಹೇಗೆ?
* ಪ್ರತಿಯೊಬ್ಬರ ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ ನೋಂದಣಿ ಕಡ್ಡಾಯ
*ಪ್ರತಿದಿನ ಕ್ಯಾಂಟೀನ್‌ಗಳಲ್ಲಿ ಸಂಬಂಧಿಸಿದ ಅಧಿಕಾರಿ, ಸಿಬ್ಬಂದಿ ಆಹಾರ ಸೇವಿಸಬೇಕು
* ಆಹಾರ ಗುಟ್ಟಮಟ್ಟ ಪರಿಶೀಲನೆ ಬಳಿಕ ವಿತರಿಸಬೇಕು
* ಅಡುಗೆ ಎಣ್ಣೆ, ಅಕ್ಕಿ ಸೇರಿ ತರಕಾರಿ ಖರೀದಿ ವರದಿ ಸಲ್ಲಿಕೆ
* ಅಡುಗೆ ಕೋಣೆಯಲ್ಲಿ ತಯಾರಿಸುವ ಆಹಾರ ಗುಣಮಟ್ಟ ಪರಿಶೀಲನೆ
*ಜಿಪಿಎಸ್ ಆಧಾರಿತ ಕ್ಯಾಮೆರಾ ಅಳವಡಿಕೆ ಕಡ್ಡಾಯ
* ಪ್ರತಿ ಕ್ಯಾಂಟೀನ್‌ನಲ್ಲಿ ಗ್ರಾಹಕರ ಅಭಿಪ್ರಾಯ ಸಂಗ್ರಹ ಬಾಕ್ಸ್ ಅಳವಡಿಕೆ
......................
ಕೋಟ್ಸ್
ಮಹಾನಗರ ಪಾಲಿಕೆ ಸೇರಿ ಜಿಲ್ಲೆಯ ನಗರ ಸ್ಥಳೀಯ ಸಂಸ್ಥೆಯ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಇಂದಿರಾ ಕ್ಯಾಂಟೀನ್‌ಗಳ ಮೇಲೆ ನಿಗಾ ವಹಿಸಲಾಗಿದೆ. ಕ್ಯಾಂಟೀನ್‌ಗೆ ಬರುವ ಗ್ರಾಹಕರ ಹೆಸರು, ಮೊಬೈಲ್ ಸಂಖ್ಯೆ, ಅಧಿಕಾರಿಗಳ ಭೇಟಿ ಕುರಿತು ರಿಜಿಸ್ಟ್ರರ್ ನಿರ್ವಹಣೆ ಮಾಡಲಾಗುವುದು. ಬಡವರಿಗಾಗಿ ಅನುಷ್ಠಾನ ಗೊಂಡಿರುವ ಯೋಜನೆ ಸದ್ಬಳಕೆಯಾಗಬೇಕು ಎಂಬುದು ಮುಖ್ಯ ಉದ್ದೇಶವಾಗಿದೆ.
-ಮೊಹಮ್ಮದ ರೋಷನ್, ಜಿಲ್ಲಾಧಿಕಾರಿ
..............