ಯಾದಗೂಡದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಶಾಸಕ ನಿಖಿಲ ಕತ್ತಿ ಭೂಮಿಪೂಜೆ ನೆರವೇರಿಸಿದರು. ಶಿವನಗೌಡ ಪಾಟೀಲ, ಅಲಗೌಡ ಪಾಟೀಲ ಇತರರಿದ್ದರು. 
ಬೆಳಗಾವಿ

ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸದೃಢ ಜೀವನ ಸಾಗಿಸಬೇಕು

ಹುಕ್ಕೇರಿ: ಕ್ಷೇತ್ರದ ಜನರಿಗೆ ಗುಣಮಟ್ಟದ ಚಿಕಿತ್ಸೆ ದೊರಕಿಸುವ ನಿಟ್ಟಿನಲ್ಲಿ ಹಲವು ಯೋಜನೆ ಅನುಷ್ಠಾನಗೊಳಿಸಲಾಗಿದೆ. ಜನರು ಆರೋಗ್ಯ ಸೇವೆಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸದೃಢ ಜೀವನ ಸಾಗಿಸಬೇಕು ಎಂದು ಶಾಸಕ ನಿಖಿಲ ಕತ್ತಿ ಹೇಳಿದರು.
ತಾಲೂಕಿನ ಯಾದಗೂಡ, ಎಲಿಮುನ್ನೋಳಿ, ಶಿಪ್ಪೂರು ಗ್ರಾಮಗಳಲ್ಲಿ ತಲಾ 65 ಲಕ್ಷ ರೂ. ನಂತೆ ಒಟ್ಟು 1.95 ಕೋಟಿ ರೂ. ವೆಚ್ಚದಲ್ಲಿ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ನಿರ್ಮಾಣ ಕಾಮಗಾರಿಗೆ ಈಚೆಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.
ಆಯುಷ್ಮಾನ್ ಆರೋಗ್ಯ ಕೇಂದ್ರ ಗ್ರಾಮೀಣ ಆರೋಗ್ಯ ಸೇವೆ ಬಲಪಡಿಸಲು ಸಹಾಯಕವಾಗಿವೆ. ಗ್ರಾಮೀಣ ಜನರ ಮನೆ ಬಾಗಿಲಿಗೆ ಆರೋಗ್ಯ ಸೇವೆ ಒದಗಿಸುವ ದಿಸೆಯಲ್ಲಿ ನೂತನ ಕೇಂದ್ರಗಳನ್ನು ಆರಂಭಿಸಲಾಗುತ್ತಿದೆ. ತುರ್ತು ಸಂದರ್ಭದಲ್ಲಿ ಸ್ಥಳೀಯವಾಗಿ ಆರೋಗ್ಯ ಸೇವೆ ದೊರೆಯಲಿದೆ ಎಂದರು. ಆರೋಗ್ಯ ಇಲಾಖೆ ಅಭಿಯಂತ, ಉಪವಿಭಾಗ ಎಇಇ ಚಿದಾನಂದ ಯಾದಗೂಡ, ಸಹಾಯಕ ಅಭಿಯಂತ ವಿನಾಯಕ ಅಮವಾಸೆ, ಪಿಡಿಒ ಉಮೇಶ ಹುಕ್ಕೇರಿ, ಮುಖಂಡರಾದ ಸತ್ಯಪ್ಪ ನಾಯಿಕ, ಗುರುರಾಜ ಕುಲಕರ್ಣಿ, ರಾಮಣ್ಣ ಜನ್ಮಟ್ಟಿ, ಶಿವನಗೌಡ ಪಾಟೀಲ, ಕಲಗೌಡ ಪಾಟೀಲ, ರಾಜು ಗಿಡ್ಡಾಳಿ, ಮಹಾದೇವ ಜನಮಟ್ಟಿ, ಅಲಗೌಡ ಪಾಟೀಲ, ಸಂತೋಷ ರೊಡ್ಡ, ದುಂಡಪ್ಪ ಮಾಳಗಿ, ಕೆಂಪಣ್ಣ ಹತ್ತರವಾಟ, ರಾಮಣ್ಣ ಪಾಟೀಲ, ಎಸ್.ಎನ್.ಜನ್ಮಟ್ಟಿ, ಅಶೋಕ ಗಿಡ್ಡಾಳಿ, ಬಸು ಕಲ್ಲೋಳಿ, ಉಮೇಶ ಜನ್ಮಟ್ಟಿ, ಬಸವರಾಜ ಗಂಗಣ್ಣವರ ಇತರರಿದ್ದರು.

ಹುಕ್ಕೇರಿಯಲ್ಲಿ 50 ಲಕ್ಷ ರೂ. ವೆಚ್ಚದ ಪ್ರಯೋಗಾಲಯ (ಬಿಪಿಎಚ್‌ಯು), ಮತ್ತಿವಾಡದಲ್ಲಿ 65 ಲಕ್ಷ ರೂ. ಹಾಗೂ ಸುಲ್ತಾನಪುರ ಗ್ರಾಮದಲ್ಲಿ 60 ಲಕ್ಷ ರೂ. ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರ ಕಟ್ಟಡ ಕಾಮಗಾರಿ ಪ್ರಗತಿ ಹಂತದಲ್ಲಿದೆ. ನೇರಲಿ, ಬೆಲ್ಲದ ಬಾಗೇವಾಡಿ, ಬಾಡ ಗ್ರಾಮಗಳಲ್ಲಿ ತಲಾ 65 ಲಕ್ಷ ರೂ. ವೆಚ್ಚದ ಆಯುಷ್ಮಾನ್ ಆರೋಗ್ಯ ಕೇಂದ್ರ ಮಂಜೂರಾಗಿದ್ದು, ಶೀಘ್ರ ಕಟ್ಟಡ ಕಾಮಗಾರಿ ಆರಂಭಿಸಲಾಗುವುದು.

— ನಿಖಿಲ ಕತ್ತಿ ಶಾಸಕ