ರಾಮದುರ್ಗದಲ್ಲಿ ಹಮ್ಮಿಕೊಂಡಿದ್ದ ೨೮ನೇ ಲಿಂಗಾನಂದ ಮಹೋತ್ಸವ ಕಾರ್ಯಕ್ರಮದಲ್ಲಿ ಡಾ.ರಾಜೇಂದ್ರ ಅಣ್ಣಾನವರ ಮುತ್ಯಾರು ಮಾತನಾಡಿದರು. ಪ್ರಭುಸ್ವಾಮಿ ಸರಗಣಾಚಾರಿ, ನೀಲಕಂಠ ಸ್ವಾಮೀಜಿ, ಮೃತ್ಯುಂಜಯ ಅಣ್ಣಾನವರ, ಪ್ರೇಮಾ ಯಾಕೊಳ್ಳಿ, ಮಾನಸಾ ಇತರರಿದ್ದರು.
- ಡಾ.ರಾಜೇಂದ್ರ ಅಣ್ಣಾನವರ ಮುತ್ಯಾರ ಆಶೀರ್ವಚನ
- ಬೆಳ್ಳಿ ಮಹೋತ್ಸವ
ಆಧ್ಯಾತ್ಮಿಕ, ಧಾರ್ಮಿಕ ಆಚರಣೆ ಸಮಾಜದಲ್ಲಿ ಸೌಹಾರ್ದ, ಸಹೋದರತೆ ಮತ್ತು ಮಾನವೀಯ ಮೌಲ್ಯ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಡಾ.ರಾಜೇಂದ್ರ ಮುತ್ಯಾರು ಪುಣ್ಯಾಶ್ರಮದ ಡಾ.ರಾಜೇಂದ್ರ ಅಣ್ಣಾನವರ ಮುತ್ಯಾರು ಹೇಳಿದರು.
ಮಹಾಂತೇಶ ನಗರದ ಡಾ.ರಾಜೇಂದ್ರ ಮುತ್ಯಾರು ಪುಣ್ಯಾಶ್ರಮ ಸೇವಾ ಟ್ರಸ್ಟ್ ಆಶ್ರಯದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ೨೮ನೇ ಲಿಂಗಾನಂದ ಮಹೋತ್ಸವ, ಸಾಧಕರಿಗೆ ಪ್ರಶಸ್ತಿ ಪ್ರದಾನ, ಬೆಳ್ಳಿ ಮಹೋತ್ಸವ ಹಾಗೂ ವಿದ್ಯಾರ್ಥಿಗಳಿಗೆ ವಸ್ತು ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಲಿಂಗಾಗುಂದರ ಆದರ್ಶ ಪ್ರತಿಯೊಬ್ಬರೂ ಅಳವಡಿಸಿಕೊಳ್ಳಬೇಕು ಎಂದರು.
ಬಾಗಲಕೋಟೆ ಮುಚಖಂಡಿಯ ಪ್ರಭುಸ್ವಾಮಿ ಸರಗಣಾಚಾರಿ ಮಾತನಾಡಿ, ಡಾ.ರಾಜೇಂದ್ರ ಅಣ್ಣಾನವರ ಮುತ್ಯಾರು ಗುರುಗಳು ಹಲವು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ವಸ್ತು, ಪುಸ್ತಕದಾನ ಮಾಡುವ ಜತೆಗೆ ಸಾಧಕರಿಗೆ ಪ್ರಶಸ್ತಿ ನೀಡುತ್ತಿರುವುದು ಮಾದರಿಯಾಗಿದೆ ಎಂದರು.
ಡಾ.ವೈ.ಎಂ.ಯಾಕೊಳ್ಳಿಗೆ `ರಾಜೇಂದ್ರ' ಹಾಗೂ ರೋಣ ತಾಲೂಕಿನ ಸುಮಂಗಲಾ ಪಾಟೀಲಗೆ ರಾಜ್ಯಮಟ್ಟದ `ಅಕ್ಕಮಹಾದೇವಿ' ಪ್ರಶಸ್ತಿ ಪ್ರದಾನ ಮಾಡಲಾಯಿತು.
ಆಂಧ್ರಪ್ರದೇಶದ ಮಾನಸಾ ಮತ್ತು ಮಲ್ಲಿಕಾರ್ಜುನ ದಂಪತಿ, ಪ್ರೇಮಾ ಯಾಕೊಳ್ಳಿ, ಮೃತ್ಯುಂಜಯ ಅಣ್ಣಾನವರ, ರಾಜು ಯಾದವಾಡ, ಟ್ರಸ್ಟ್ ಕಾರ್ಯದರ್ಶಿ ಶಿವಯೋಗಿ ಅಣ್ಣಾನವರ ಇತರರಿದ್ದರು. ಸಿದ್ದುಮೋಟೆ ಸ್ವಾಗತಿಸಿದರು. ಅರುಣ ಚೌಡಕಿ ನಿರೂಪಿಸಿದರು.