ಚಿಕ್ಕೋಡಿ ಪಟ್ಟಣದಲ್ಲಿ ದಾರಿಯರ ದಿನದ ಅಂಗವಾಗಿ ್ಲಾರೆನ್ಸ್ ನೈಟಿಂಗೇಲ್ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಡಾ.ಸುನೀಲ ಎಂ.ಬಿ., ಡಾ.ಉಮಾ ಕೋಳಿ, ಡಾ.ಶ್ವೇತಾ ಅಂಗಡಿ, ರುಕ್ಮಿಣಿ ಕಾಕತಿಕಾರ ಇತರರಿದ್ದರು.
ಚಿಕ್ಕೋಡಿ: ಶುಶ್ರೂಷಾಧಿಕಾರಿಗಳು ಜೀವ ಉಳಿಸುತ್ತಾರೆ. ಅವರಿಗೆ ಸಬಲೀಕರಣದ ಅಗತ್ಯವಿದೆ ಎಂದು ಸಂಸ್ಥೆ ಪ್ರಾಂಶುಪಾಲ ಡಾ.ಸುನೀಲ ಎಂ.ಬಿ. ಹೇಳಿದರು.
ಪಟ್ಟಣದ ಕೆಎಲ್‌ಇ ಸೊಸೈಟಿ ಇನ್‌ಸ್ಟಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನಮ್ಮ ಶುಶ್ರೂಷಾಧಿಕಾರಿಗಳು, ನಮ್ಮ ಭವಿಷ್ಯ: ಸಬಲೀಕೃತ ಶುಶ್ರೂಷಾಧಿಕಾರಿಗಳು ಜೀವ ಉಳಿಸುತ್ತಾರೆ ಎಂಬ ವಿಷಯದಡಿ ಹಾಗೂ ಅಂತಾರಾಷ್ಟ್ರೀಯ ದಾರಿಯರ ದಿನ ಮತ್ತು ಒಂದು ಮಿಲಿಯನ್, ಹೆಚ್ಚು ಮಿಡ್‌ವ್ೈಸ ಎಂಬ ವಿಷಯದಡಿ ಅಂತಾರಾಷ್ಟ್ರೀಯ ಮಿಡ್‌ವ್ೈ ದಿನ ಆಚರಣೆಯಲ್ಲಿ ಮಾತನಾಡಿದರು.
ಕಾಹೆರ್ ಇನ್‌ಸ್ಟಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್ ಸಹ ಪ್ರಾಧ್ಯಾಪಕಿ ಡಾ.ಉಮಾ ಕೋಳಿ ಶುಶ್ರೂಷಾಧಿಕಾರಿಗಳು ಸಾಮರ್ಥ್ಯ ಹಾಗೂ ವೈದ್ಯಕೀಯ ವೃತ್ತಿಯಲ್ಲಿ ಶುಶ್ರೂಷಾಧಿಕಾರಿಗಳ ಪಾತ್ರದ ಕುರಿತು, ಸಹ ಪ್ರಾಧ್ಯಾಪಕಿ ಡಾ.ಶ್ವೇತಾ ಅಂಗಡಿ ಅಂತಾರಾಷ್ಟ್ರೀಯ ಶುಶ್ರೂಷಾಧಿಕಾರಿಗಳು ಹಾಗೂ ಮಿಡ್‌ವ್ೈ ದಿನದ ಮಹತ್ವದ ಕುರಿತು ಹಾಗೂ ಕಾಹೆರ ಇನ್‌ಸ್ಟಿಟ್ಯೂಟ್ ಆ್ ನರ್ಸಿಂಗ್ ಸೈನ್ಸ್‌ನ ಸಹ ಪ್ರಾಧ್ಯಾಪಕಿ ರುಕ್ಮಿಣಿ ಕಾಕತಿಕಾರ ಮಾತನಾಡಿದರು. ಸಂಸ್ಥೆಯ ಬೋಧಕ ಸಿಬ್ಬಂದಿ ಹಾಗೂ 7ನೇ ಸೆಮಿಸ್ಟರ್ ಬಿ.ಎಸ್ಸಿ ಶುಶ್ರೂಷಕ ವಿದ್ಯಾರ್ಥಿಗಳು ಇದ್ದರು.