ಸದಲಗಾ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಕ್ತದಾನ ಶಿಬಿರ ಜರುಗಿತು. ಸುಜಾತಾ ಮಗದುಮ್ಮ, ಡಾ.ಎಸ್.ಎನ್. ಪಾಟೀಲ, ಡಾ.ಸೀಮಾ, ಡಾ.ಸಂಜೀವಿನಿ ಇತರರಿದ್ದರು. 
ಬೆಳಗಾವಿ

ಜೀವ ಉಳಿಸುವ ರಕ್ತದಾನ

ರಾಘವೇಂದ್ರಗೌಡ ಭೀ ಪಾಟೀಲ್

ದಾನದಲ್ಲಿ ರಕ್ತದಾನ ಶ್ರೇಷ್ಠವಾದುದು. ಅಗತ್ಯ ಇರುವವರಿಗೆ ರಕ್ತದಾನ ಮಾಡುವ ಮೂಲಕ ಅಮೂಲ್ಯ ಜೀವ ಉಳಿಸಬಹುದು ಎಂದು ಪ್ರಾಂಶುಪಾಲೆ ಡಾ.ಸುಜಾತಾ ಮಗದುಮ್ಮ ಹೇಳಿದರು.

ಸದಲಗಾ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಈಚೆಗೆ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು. ಪ್ರೊ.ಚಿದಾನಂದ ಶಿಂಗೆ ಮಾತನಾಡಿದರು. ಡಾ.ಎಸ್.ಎನ್.ಪಾಟೀಲ, ಡಾ.ಸೀಮಾ, ಡಾ.ಸಂಜೀವಿನಿ ಇತರರಿದ್ದರು.
ಎನ್‌ಎಸ್‌ಎಸ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಂಚಾಲಕ ಅರುಣ ಕುರಬೇಟ ಸ್ವಾಗತಿಸಿದರು. ಅಭಿಲಾಷಾ ನಿರೂಪಿಸಿದರು.