ನಾಗನೂರ ಪಿ.ಕೆ. ಗ್ರಾಮದ ಸರ್ಕಾರಿ ಕನ್ನಡ ಗಂಡುಮಕ್ಕಳ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಡಿಜಿಟಲ್ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿ ಚಾಲನೆ ಕಾರ್ಯಕ್ರಮದಲ್ಲಿ ಲಕ್ಷ್ಮಣ ಸವದಿ ಅವರನ್ನು ಸನ್ಮಾನಿಸಲಾಯಿತು. ಕಾಶೀನಾಥ ಸವದಿ, ಈರಣ್ಣ ವಾಲಿ, ಗಂಗಪ್ಪ ಬಿಳ್ಳೂರ, ಬಸಪ್ಪ ಚೌಗಲಾ ಇತರರಿದ್ದರು.
ಅಥಣಿ ಗ್ರಾಮೀಣ: ಗ್ರಾಮೀಣ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರಾಗಲು ಮತ್ತು ಸಾರ್ವಜನಿಕರಿಗೆ ಜ್ಞಾನ ವೃದ್ಧಿಗೆ ಡಿಜಿಟಲ್ ಗ್ರಂಥಾಲಯ ಸಹಕಾರಿಯಾಗಿದೆ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅಥಣಿ ತಾಲೂಕಿನ ನಾಗನೂರ ಪಿ.ಕೆ. ಗ್ರಾಮದ ಸರ್ಕಾರಿ ಕನ್ನಡ ಗಂಡು ಮಕ್ಕಳ ಶಾಲೆಯಲ್ಲಿ ಪಂಚಾಯತ್ ರಾಜ್ ಇಲಾಖೆ ವತಿಯಿಂದ ಡಿಎಂಎ್ ಯೋಜನೆಯಡಿ 50 ಲಕ್ಷ ರೂ. ಮೊತ್ತದಲ್ಲಿ ಡಿಜಿಟಲ್ ಗ್ರಂಥಾಲಯ ಕಟ್ಟಡ ನಿರ್ಮಾಣ ಕಾಮಗಾರಿಗೆ ಶನಿವಾರ ಚಾಲನೆ ನೀಡಿ ಮಾತನಾಡಿ, ಓದುಗರು ಹಾಗೂ ವಿದ್ಯಾರ್ಥಿಗಳು ಡಿಜಿಟಲ್ ಗ್ರಂಥಾಲಯದಲ್ಲಿ ತಮ್ಮ ಹೆಸರು ನೋಂದಣಿ ಮಾಡಿಕೊಳ್ಳಬೇಕು. ವಿದ್ಯಾರ್ಥಿಗಳು ಮೊಬೈಲ್ ಬಳಕೆ ಕಡಿಮೆ ಮಾಡಿ ಓದಿನತ್ತ ಗಮನ ಹರಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ಯುವಕರಿಗೆ ಓದಲು ದಿನಪತ್ರಿಕೆ ಹಾಗೂ ವಿವಿಧ ಮಾಹಿತಿ ಒದಗಿಸಲು ಡಿಜಿಟಲ್ ಗ್ರಂಥಾಲಯ ಸಹಕಾರಿಯಾಗಲಿದೆ. ಅಂತರ್ಜಾಲವನ್ನು ದುರುಪಯೋಗಪಡಿಸಿಕೊಳ್ಳದೇ ಜಗತ್ತಿನ
ವಿಜ್ಞಾನ, ತಂತ್ರಜ್ಞಾನ ತಿಳಿದುಕೊಳ್ಳಲು ಬಳಸಿಕೊಳ್ಳಬೇಕು ಎಂದರು.
ಮುಖಂಡ ಕಾಶಿನಾಥ ಸವದಿ ಮಾತನಾಡಿ, ಗ್ರಾಮದಲ್ಲಿ ಸುಸಜ್ಜಿತ ಗ್ರಂಥಾಲಯ ಕಟ್ಟಡ ನಿರ್ಮಾಣವಾಗುತ್ತಿರುವುದು ಸಂತಸ ತಂದಿದೆ. ಯುವಕರು ಓದಿನತ್ತ ಗಮನಹರಿಸಿ ಕೃಷಿ, ತಂತ್ರಜ್ಞಾನದ ಲಾಭ ಪಡೆದು ಹೆಚ್ಚಿನ ಇಳುವರಿ ಪಡೆಯಬೇಕು ಎಂದರು.
ಜಿಪಂ ಎಇಇ ಈರಣ್ಣ ವಾಲಿ, ಪಿಕೆಪಿಎಸ್ ಮುಖ್ಯಕಾರ್ಯನಿರ್ವಾಹಕ ಬಸವರಾಜ ತೇಲಿ, ಗಂಗಪ್ಪ ಬಿಳ್ಳೂರ, ಬಸಪ್ಪ ಚೌಗಲಾ, ಶಿವಶಂಕರಯ್ಯ ಮಠದ, ಅಪ್ಪಾಸಾಬ ಸಾವಡಕರ, ರಮೇಶ ಸವದಿ, ಗಂಗಯ್ಯ ಮಠಪತಿ, ಕುಲಗೌಡ ಪಾಟೀಲ, ಉದಯಕುಮಾರ ಸಾವಡಕರ, ಮಲ್ಲಪ್ಪ ಸವದಿ, ಗುರುಪಾದ ಗುಗವಾಡ, ಶ್ರೀಶೈಲ ಸವದಿ, ಚನ್ನಪ್ಪ ಸಾವಡಕರ, ಬಸಪ್ಪ ಗಲಗಲಿ ಇತರರಿದ್ದರು.