ಇಂಚಲ ಗ್ರಾಮದ ಶ್ರೀ ಶಿವಯೋಗೀಶ್ವರ ಸಾಧು ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಾಮೀಜಿ 86ನೇ ಜಯಂತ್ಯುತ್ಸವ, ವೇದಾಂತ ಪರಿಷತ್ ಕಾರ್ಯಕ್ರಮದಲ್ಲಿ ಡಾ.ಶಿವಾನಂದ ಭಾರತಿ ಸ್ವಾಮೀಜಿ ಮಾತನಾಡಿದರು. ವಿದ್ಯಾನಂದ ಭಾರತಿ ಸ್ವಾಮೀಜಿ, ಶಿವಾನಂದ ಸ್ವಾಮೀಜಿ, ನೀಲಕಂಠ ಸ್ವಾಮೀಜಿ, ನಿಜಗುಣ ಸ್ವಾಮೀಜಿ ಇತರರಿದ್ದರು.
ಮಂಗಳವಾರ ಸಮೀಪದ ಸುಕ್ಷೇತ್ರ ಇಂಚಲ ಗ್ರಾಮದ ಶಿವಯೋಗೀಶ್ವರ ಸಾಧು-ಸಂಸ್ಥಾನ ಮಠದ ಡಾ.ಶಿವಾನಂದ ಭಾರತಿ ಸ್ವಮೀಜಿ 86ನೇ ಜಯಂತ್ಯುತ್ಸವ, ಅಖಿಲ ಭಾರತ ವೇದಾಂತ ಪರಿಷತ್, ಮಹೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
ಸದ್ಗುರುಗಳ ಸಂಘದಿಂದ ನಾವು ಶಾಶ್ವತ ಸುಖ ನಮಗೆ ಪ್ರಾಪ್ತಿಯಾಗುತ್ತದೆ. ಜಪ, ತಪ ಯಜ್ಞ ಮಾಡುವುದರಿಂದ ಸ್ವರ್ಗ ಪ್ರಾಪ್ತಿಯಾಗುತ್ತದೆ. ಸತ್ಸಂಗದಿಂದ ಅತ್ಮ ಸಾಕ್ಷಾತ್ಕಾರವಾಗುತ್ತದೆ ಎಂದರು.
ಮುರಗೋಡ ದುರದುಂಡೇಶ್ವರ ಮಠದ ನೀಲಕಂಠ ಸ್ವಾಮೀಜಿ ಮಾತನಾಡಿ, ಪರಮಾತ್ಮನ ದರ್ಶನ ನಮಗೆ ಆಗಬೇಕೆಂದರೆ ಅಂತಃಕರಣ ಶುದ್ಧವಾಗಿರಬೇಕು. ನಮ್ಮ ನಡೆ, ನುಡಿ, ಆಚಾರ, ವಿಚಾರ ಯಾರಿಗೂ ನೋವುಂಟು ಮಾಡುವಂತಿರಬಾರದು. ಗೀತೆ ಮನುಷ್ಯನನ್ನು ಶುದ್ಧ ಮಾಡುತ್ತದೆ. ತ್ಯಾಗ ಇದ್ದಲ್ಲಿ ಆತ್ಮ ಕಲ್ಯಾಣವಾಗುತ್ತದೆ. ನಮಗೆ ಮುಕ್ತಿ ಸೀಗಬೇಕೆಂದರೆ ಯಜ್ಞ, ತಪಸ್ಸು, ದಾನ ಮಾಡಬೇಕೆಂದರು.
ಹರಳಕಟ್ಟಿ ಶಿವಾನಂದ ಬ್ರಹ್ಮವಿದ್ಯಾಶ್ರಮದ ನಿಜಗುಣ ಸ್ವಾಮೀಜಿ ಮಾತನಾಡಿ, ಮನುಷ್ಯ ದಾನ, ಧರ್ಮದ ಮೂಲಕ ಇನ್ನೊಬ್ಬರಿಗೆ ಸಹಾಯಮಾಡಬೇಕು. ದುಶ್ಚಟಗಳನ್ನು ಬಿಟ್ಟು, ಸಾಧು ಸಂತರ ಸಂಘ ಮಾಡಿದರೆ ನಮ್ಮ ಆತ್ಮಶುದ್ಧಿ ಮಾಡಿಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಹಂಪಿ ಹೇಮಕೊಟದ ವಿದ್ಯಾನಂದ ಭಾರತಿ ಸ್ವಾಮೀಜಿ, ದಾವಣಗೇರಿ ಶಿವಾನಂದ ಸ್ವಾಮೀಜಿ, ಇಂಚಲದ ಪೂರ್ಣಾನಂದ ಭಾರತಿ ಸ್ವಾಮೀಜಿ, ಹುಬ್ಬಳ್ಳಿಯ ಸಿದ್ಧಾರೂಢ ಮಠದ ಸಚ್ಚಿದಾನಂದ ಸ್ವಾಮೀಜಿ, ಮಲ್ಲಾಪುರದ ಚಿದಾನಂದ ಸ್ವಾಮೀಜಿ, ನೇಗಿನಾಳದ ಅದ್ವೆತಾನಂದ ಸ್ವಾಮಿಜಿ, ಸವಟಗಿ ನಿಂಗಯ್ಯ ಸ್ವಾಮೀಜಿ ಇತರರಿದ್ದರು.
ಭಕ್ತರಿಂದ ಶ್ರೀಗಳ ತುಲಾಭಾರ ಕಾರ್ಯಕ್ರಮ ಜರುಗಿತು.
ಶ್ರೀ ಶಿವಾನಂದ ಭಾರತಿ ಶಿಕ್ಷಣ ಸಂಸ್ಥೆ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮದ ನಡೆದವು. ನಿರಂತರ ಅನ್ನದಾಸೋಹ ಜರುಗುತ್ತಿದ್ದು, ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.