ಬೆಳಗಾವಿ ನಗರದ ನಾಗನೂರು ರುದ್ರಾ ಮಠದ ಎಸ್ಜಿಬಿಐಟಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಕಲಾ ಸಂತೆ ಜನಪದ ಜಾತ್ರೆ ಕಾರ್ಯಕ್ರಮವನ್ನು ಡಾ. ಅಲ್ಲಮಪ್ರಭು ಸ್ವಾಮೀಜಿ ಉದ್ಘಾಟಿಸಿದರು. ಆಸೀಫ್ ಸೇಠ್, ಮಧುಮತಿ ಹಿರೇಮಠ ಇತರರಿದ್ದರು.
ಬೆಳಗಾವಿ: ಪ್ರಸಕ್ತ ದಿನಗಳಲ್ಲಿ ಸ್ಥಳಿಯ ಕಲೆ, ಸಂಸತಿ ಮತ್ತು ಗ್ರಾಮೀಣ ಉದ್ಯಮಿತ್ವ ಉತ್ತೇಜಿಸುವ ಪ್ರಮುಖ ಕೆಲಸ ಆಗಬೇಕಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.
ನಗರದ ನಾಗನೂರು ರುದ್ರಾ ಮಠದ ಎಸ್ಜಿಬಿಐಟಿ ಕಾಲೇಜು ಸಭಾಂಗಣದಲ್ಲಿ ಸೋಮವಾರ ಲಿಂಗಾಯುತ ಮಹಿಳಾ ಸಮಾಜ ಅಂತಾರಾಷ್ಟ್ರೀಯ ಮಹಿಳಾ ದಿನ ಅಂಗವಾಗಿ ಆಯೋಜಿಸಿದ್ದ ಕಲಾ ಸಂತೆ& 2026 ಜನಪದ ಜಾತ್ರೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ನಾಡಿನ ಕಲಾವಿದರು ತಯಾರಿಸಿದ ಹಸ್ತಕಲಾ ವಸ್ತುಗಳು, ಆಹಾರ ಪದಾರ್ಥಗಳು ಹಾಗೂ ಜನಪದ ಪರಂಪರೆಯ ಉತ್ಪನ್ನಗಳನ್ನು ಪ್ರದರ್ಶಿಸಿ ಮಾರಾಟ ಮಾಡಲು ಅವಕಾಶ ನೀಡುವ ಕಲಾ ಸಂತೆ ವಿಭಿನ್ನ ಜನಪದ ಜಾತ್ರೆಗೆ ವೇದಿಕೆಯಾಗಿದೆ ಎಂದರು.
ಶಾಸಕ ಆಸೀಫ್ ಸೇಠ್, ಲಿಂಗಾಯುತ ಮಹಿಳಾ ಸಮಾಜದ ಅಧ್ಯಕ್ಷೆ ಮಧುಮತಿ ಹಿರೇಮಠ, ನಯನಾ ಗಿರಿಗೌಡರ, ರಕ್ಷಾ ದೇಗಿನಹಾಳ, ಲತಾ ಬಿಜಾಪುರೆ, ಶಾರದಾ ಭೋಜ ಇತರರಿದ್ದರು.