ಅಥಣಿ ಪಟ್ಟಣದಲ್ಲಿ ಮಹಾವೀರ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಜೈನ ಸಮುದಾಯದ ಶೋಭಾಯಾತ್ರೆಯಲ್ಲಿ ಲಕ್ಷ್ಮಣ ಸವದಿ, ಅರುಣ ಯಲಗುದ್ರಿ, ಕಲ್ಲಪ್ಪ ವನಜೋಳ, ಸಂತೋಷ ಬೊಮ್ಮನವರ, ಅಮರ ದುರ್ಗಣವರ, ನಿತಿನ ಘೋಂಗಡಿ ಇತರರಿದ್ದರು.
ಅಥಣಿ: ಮಹಾವೀರರ ತತ್ತ್ವ, ಆದರ್ಶ ಮೈಗೂಡಿಸಿಕೊಂಡರೆ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಪಟ್ಟಣದಲ್ಲಿ ಭಗವಾನ ಮಹಾವೀರ ಜನ್ಮ ಕಲ್ಯಾಣಕ ಮಹೋತ್ಸವ ಅಂಗವಾಗಿ ಸೋಮವಾರ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಬಳಿಕ ಜೈನ ಸಮುದಾಯದಿಂದ ಹಮ್ಮಿಕೊಂಡಿದ್ದ ಶೋಭಾಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿ, ಮಾನವೀಯ ಮೌಲ್ಯವನ್ನು ಮಹಾವೀರರು ತಿಳಿಸಿಕೊಟ್ಟಿದ್ದಾರೆ. ಅವರ ಆದರ್ಶದ ಸಂದೇಶ ಪಾಲಿಸಿಕೊಂಡು ಉತ್ತಮ ಸಮಾಜ ಕಟ್ಟಲು ಶ್ರಮಿಸೋಣ ಎಂದರು.
ಹಿರಿಯ ಸಾಹಿತಿ ಬಾಳಾಸಾಹೇಬ ಲೋಕಾಪುರ ಮಾತನಾಡಿ, ಆರೋಗ್ಯವಂತ ಸಮಾಜ ನಿರ್ಮಾಣದಲ್ಲಿ ಮಹಾವೀರರ ಬೋಧನೆ ಅನುಸರಿಸುವುದು ಒಳಿತು. ಅಹಿಂಸಾ ಪರಮೋಧರ್ಮದ ಪ್ರತಿಪಾದಕರಾದ ಅವರು ಸಕಲ ಪ್ರಾಣಿ, ಪಕ್ಷಿಗಳಲ್ಲಿ ಜೀವವಿದೆ. ಪಾಪ
ನರಕವಾದರೆ, ಪುಣ್ಯ ಸ್ವರ್ಗವಾಗುವುದು ಎನ್ನುವ ಸತ್ಯ ಸಂದೇಶ ಸಾರಿದ್ದಾರೆ ಎಂದರು.
ಪುರಸಭೆ ಅಧ್ಯಕ್ಷೆ ಶಿವಲೀಲಾ ಬುಟಾಳೆ ಚಾಲನೆ ನೀಡಿದರು. ಮಹಾವೀರರ ಪಲ್ಲಕ್ಕಿ ಉತ್ಸವ ಮತ್ತು ಶೋಭಾಯಾತ್ರೆ ವಿಜೃಂಭಣೆಯಿAದ ಜರುಗಿತು.
ಸ್ಥಳೀಯ ಮಿನಿವಿಧಾನ ಸೌಧದಲ್ಲಿ ಮಹಾವೀರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ತಾಲೂಕಾಡಳಿತದಿಂದ ಗೌರವ ಸಲ್ಲಿಸಲಾಯಿತು. ತಹಸೀಲ್ದಾರ್ ಸಿದರಾಯ ಭೋಸಗಿ, ಮುಖಂಡರಾದ ಗಜಾನನ ಮಂಗಸೂಳಿ, ಎಸ್.ಕೆ.ಬುಟಾಳೆ, ಎಸ್.ಬಿ.ಲಠ್ಠೆ, ಅರುಣಕುಮಾರ ಯಲಗುದ್ರಿ, ಕಲ್ಲಪ್ಪ ವನಜೋಳ, ಅಮರ ದುರ್ಗಣ್ಣವರ, ರಾಜು ಕರ್ಪೂರಶೆಟ್ಟಿ, ಸಂತೋಷ ಬೊಮ್ಮನವರ, ಧನಪಾಲ ಮೆಕನಮರಡಿ, ಪ್ರಪುಲ ಪಡನಾಡ, ಸಂತೋಷ ಲಠ್ಠೆ, ಪ್ರಶಾಂತ ಇಜಾರೆ, ಶ್ರೀಕಾಂತ ಮಾಕಾಣಿ, ನಿತಿನ ಘೋಂಗಡಿ ಇತರರು ಇದ್ದರು.