ಮುಗಳಖೋಡ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕನ್ನಡ ಜಾಗೃತಿ ಕಾರ್ಯಕ್ರಮವನ್ನು ಗಣ್ಯರು ಉದ್ಘಾಟಿಸಿದರು. ಟಿ.ಎಸ್.ವಂಟಗೂಡಿ, ಡಿ.ವಿ.ನಡಟ್ಟಿ, ಎ.ಎಲ್.ನಿಲಾಯಿಜ್ಯೋತಿ ಇತರರಿದ್ದರು.
ಮುಗಳಖೋಡ: ಕನ್ನಡ ಶ್ರೀಮಂತ ಭಾಷೆಯಾಗಿದ್ದು, ಪ್ರತಿಯೊಬ್ಬರೂ ಕಲಿಯಬೇಕು, ಅನ್ಯ ಭಾಷೆ ಗೌರವಿಸಬೇಕು ಎಂದು ಸಾಹಿತಿ ಟಿ.ಎಸ್.ವಂಟಗೂಡಿ ಹೇಳಿದರು.
ಜ.೧೦, ೧೧ರಂದು ಹಾರೂಗೇರಿಯಲ್ಲಿ ಜರುಗಲಿರುವ ೧೭ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕದಿಂದ ಪಟ್ಟಣದ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಕನ್ನಡ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಕುವೆಂಪು ಅವರು ಹೇಳಿದ ಹಾಗೆ `ಕನ್ನಡಕ್ಕಾಗಿ ಕೈಯೆತ್ತು ನಿನ್ನ ಕೈ ಕಲ್ಪ ವೃಕ್ಷವಾಗುತ್ತದೆ' ಎಂಬ ವಾಣಿಯಂತೆ ಪ್ರತಿಯೊಬ್ಬರು ಕನ್ನಡಕ್ಕಾಗಿ ಶ್ರಮಿಸಿ, ಪ್ರತಿಯೊಬ್ಬರೂ ಕನ್ನಡ ನಾಡಿನ ಏಳಿಗೆಗಾಗಿ ದುಡಿಯೋಣ ಎಂದರು. ಮುಖ್ಯಶಿಕ್ಷಕ ಡಿ.ವಿ.ನಡಟ್ಟಿ ಮಾತನಾಡಿದರು.
ಎ.ಎಲ್.ನಿಲಾಯಿಜ್ಯೋತಿ, ಎ.ಆರ್.ಜಮಾದಾರ, ಎಸ್.ಪಿ.ಗಡೆದ, ಬಿ.ಎಸ್.ಪಟ್ಟಣಶೆಟ್ಟಿ, ಎಸ್.ಬಿ.ಕಮ್ಮಾರ, ದೈಹಿಕ ಶಿಕ್ಷಣ ಶಿಕ್ಷಕಿ ಎಸ್.ಎಲ್.ನಾವಿ, ಎಸ್.ಎಂ.ಹಂಬರ, ಎ.ಆರ್.ಜಮಾದಾರ, ಸ್ವಾತಿ ಗೋಕಾಕ, ಶ್ರೀದೇವಿ ಹಿರೇಕೋಡಿ ಇತರರಿದ್ದರು.