ಶಿರುಗುಪ್ಪಿ ಗ್ರಾಮದಲ್ಲಿ ಜೈ ಹನುಮಾನ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಕಟ್ಟಡವನ್ನು ಶ್ರೀನಿವಾಸ ಪಾಟೀಲ ಉದ್ಘಾಟಿಸಿದರು. ಶಂಕರ ಪವಾರ, ಶ್ರೀಪತಿ ಜಾಧವ ಇತರರಿದ್ದರು. 
ಬೆಳಗಾವಿ

ಸಂಘದ ಲಾಭ ಪಡೆದುಕೊಳ್ಳಲಿ

ಕಾಗವಾಡ: ಇಂಗಳಿಯ ಜೈ ಹನುಮಾನ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಶಿರಗುಪ್ಪಿ ಶಾಖೆಯಲ್ಲಿ ಸದಸ್ಯರು, ಆಡಳಿತ ಮಂಡಳಿ, ಗ್ರಾಹಕರು ಮತ್ತು ಸಿಬ್ಬಂದಿ ಶ್ರಮದಿಂದ ಪ್ರಗತಿಹೊಂದಿ ನಾಲ್ಕೇ ವರ್ಷದಲ್ಲಿ ಸ್ವಂತ ಕಟ್ಟಡಲ್ಲಿ ಸ್ಥಳಾಂತರಗೊಂಡಿದೆ ಎಂದು ಅಥಣಿ ಶುಗರ್ಸ ವ್ಯವಸ್ಥಾಪಕ ನಿರ್ದೇಶಕ ಶ್ರೀನಿವಾಸ ಪಾಟೀಲ ಹೇಳಿದರು.
ತಾಲೂಕಿನ ಶಿರುಗುಪ್ಪಿ ಗ್ರಾಮದಲ್ಲಿ ಇಂಗಳಿಯ ಜೈ ಹನುಮಾನ ಕ್ರೆಡಿಟ್ ಸೌಹಾರ್ದ ಸಹಕಾರ ಸಂಘದ ಶಿರಗುಪ್ಪಿ ಶಾಖೆ ನೂತನ ಕಟ್ಟಡ ಶುಕ್ರವಾರ ಉದ್ಘಾಟಿಸಿ ಮಾತನಾಡಿ, ಎಲ್ಲರೂ ಸಹಕಾರ ಸಂಘದ ಲಾಭ ಪಡೆದುಕೊಳ್ಳಬೇಕು ಎಂದರು.
ಸಂಘದ ನಿರ್ದೇಶಕ ಶಂಕರ ಪವಾರ ಮತ್ತು ಹಿರಿಯ ನಿರ್ದೇಶಕ ಶ್ರೀಪತಿ ಜಾಧವ ಮಾತನಾಡಿದರು. ಸಾನ್ನಿಧ್ಯ ವಹಿಸಿದ್ದ ನಂದಿಕುರಳಿಯ ವೀರಭದ್ರ ಸ್ವಾಮೀಜಿ ಆಶೀರ್ವಚನ ನೀಡಿದರು.
ಸಂಘದ ಲಾಕರ್ ಅನ್ನು ಅಭಯಕುಮಾರ ಅಕಿವಾಟೆ, ಗಣಕ ಯಂತ್ರಗಳನ್ನು ಶಿವಾನಂದ ಪಾಟೀಲ ಉದ್ಘಾಟಿಸಿದರು. ಶಿರಗುಪ್ಪಿ ಗ್ರಾಪಂ ಉಪಾಧ್ಯಕ್ಷ ರಾಮಗೌಡ ಪಾಟೀಲ, ಡಿಕೆಎಸ್‌ಎಸ್ ಕಾರ್ಖಾನೆ ನಿರ್ದೇಶಕ ಮಹಾವೀರ ಕಾತ್ರಾಳೆ, ಲಾಲ್ ಬಹದ್ದೂರ್ ಸಹಕಾರ ಸಂಘದ ಅಧ್ಯಕ್ಷ ಭಮ್ಮಣ್ಣ ಚೌಗುಲೆ, ಸಹಕಾರ ಸಂಘದ ಅಧ್ಯಕ್ಷ ಅಪ್ಪಾಸಾಹೇಬ ಜತ್ರಾಟೆ, ಉಪಾಧ್ಯಕ್ಷ ಅರುಣ ಪಾಟೋಳೆ, ಶಿರಗುಪ್ಪಿ ಶಾಖೆ ಅಧ್ಯಕ್ಷ ಪ್ರಕಾಶ ಜಾಧವ, ಉಪಾಧ್ಯಕ್ಷ ದಾದಗೌಡ ಪಾಟೀಲ, ಸಿಇಒ ಜಿ.ಬಿ.ಪಾಟೀಲ, ಮುಖಂಡರಾದ ಅಭಯಕುಮಾರ ಅಕಿವಾಟೆ, ಶಿವಾನಂದ ಪಾಟೀಲ, ಸುರೇಶ ಚೌಗುಲೆ, ಸಾತಗೌಡ ಪಾಟೀಲ, ಸುಭಾಷ ಪಾಟೀಲ, ಭೀಮು ಅಕಿವಾಟೆ, ಬಾಹುಸಾಬ್ ಕಾಗವಾಡೆ, ವೈಭವ ಪಾಟೀಲ, ಶಿವಾಜಿ ಶಿಂಧೆ ಇತರರಿದ್ದರು.