ತೆಲಸಂಗ ಗ್ರಾಮದ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಿಮಿತ್ತ ಹಮ್ಮಿಕೊಂಡಿದ್ದ ಎತ್ತಿನಗಾಡಿ ಶರ್ಯತ್ತಿಗೆ ಅಮೋಘಸಿದ್ಧ ಖೊಬ್ರಿ ಚಾಲನೆ ನೀಡಿದರು. ಶ್ರೀಶೈಲ ಶೆಲ್ಲೆಪ್ಪಗೋಳ, ಸಂಗಮೇಶ ಉಂಡೋಡಿ, ಪ್ರಕಾಶ ಮೋರೆ ಇತರರಿದ್ದರು. 
ಬೆಳಗಾವಿ

ಧಾರ್ಮಿಕ ಸಂಸ್ಕೃತಿ, ಪರಂಪರೆ ಉಳಿಸಲು ಶ್ರಮಿಸಲಿ

ತೆಲಸಂಗ: ಗ್ರಾಮೀಣ ಕಲೆ, ಕ್ರೀಡೆ ಮತ್ತು ಹಬ್ಬಗಳು ಪರಸ್ಪರ ಪ್ರೀತಿ ಹಾಗೂ ಸೌಹಾರ್ದ ಬಿತ್ತುತ್ತವೆ. ಯುವ ಪೀಳಿಗೆ ಹಬ್ಬಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಮೂಲಕ ಪರಂಪರೆ ಉಳಿವಿಗೆ ಶ್ರಮಿಸಬೇಕು ಎಂದು ವಕೀಲ ಅಮೋಘಸಿದ್ಧ ಖೊಬ್ರಿ ಹೇಳಿದರು.
ಗ್ರಾಮದಲ್ಲಿ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವ ನಿಮಿತ್ತ ಈಚೆಗೆ ಹಮ್ಮಿಕೊಂಡಿದ್ದ ಎತ್ತಿನಗಾಡಿ ಶರ್ಯತ್ತಿಗೆ ಚಾಲನೆ ನೀಡಿ ಮಾತನಾಡಿದ ಅವರು, ಗ್ರಾಮೀಣ ಜಾತ್ರೆ ಸಂಸ್ಕೃತಿಯ ಪ್ರತೀಕ. ಶರ್ಯತ್ತು ಹಾಗೂ ಸಾಹಸ ಕ್ರೀಡೆಗಳು ಗ್ರಾಮೀಣ ಭಾಗದ ಒಗ್ಗಟ್ಟನ್ನು ಪ್ರದರ್ಶಿಸುತ್ತವೆ ಎಂದರು.
ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಶ್ರೀಶೈಲ ಶೆಲ್ಲೆಪ್ಪಗೋಳ, ಸಂಗಮೇಶ ಉಂಡೋಡಿ, ಪ್ರಕಾಶ ಮೋರೆ, ಆನಂದ ಥೈಕಾರ, ರಾಜು ಕಟವಾಣಿ, ರಾಜು ಉಂಡೋಡಿ, ರಾಘು ಉಂಡೋಡಿ, ಅಶೋಕ ಮೋರೆ ಇತರರಿದ್ದರು.