ಮಲ್ಲಮ್ಮನ ಬೆಳವಡಿ ಗ್ರಾಮದಲ್ಲಿ ತಳದಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಹೊನ್ನಾಟ ಜರುಗಿತು. 
ಬೆಳಗಾವಿ

ಸಂಸ್ಕೃತಿ ಉಳಿವಿಗೆ ಶ್ರಮಿಸೋಣ

ಮಲ್ಲಮ್ಮನ ಬೆಳವಡಿ: ಪುರಾತನ ಕಾಲದ ಸಂಸ್ಕೃತಿ, ಪರಂಪರೆ ಹಾಗೂ ಸಂಪ್ರದಾಯಗಳು ಗ್ರಾಮೀಣ ಭಾಗದಲ್ಲಿ ಇಂದಿಗೂ ಜೀವಂತಿಕೆ ಪಡೆದಿವೆ. ಗ್ರಾಮದ ಭಕ್ತರೆಲ್ಲ ಒಗ್ಗೂಡಿ ಜಾತ್ರೆ ಆಚರಿಸುತ್ತಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದು ಬಸಯ್ಯ ವಿರಕ್ತಮಠ ಹೇಳಿದರು.
ಗ್ರಾಮದಲ್ಲಿ ತಳದಮ್ಮದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಕುಂಭೋತ್ಸವ, ಹೊನ್ನಾಟ ಹಾಗೂ ವೃಕ್ಷ ವಿವಾಹ ಸಮಾರಂಭದಲ್ಲಿ ಮಾತನಾಡಿದರು. ಬೆಳಗ್ಗೆ ತಳದಮ್ಮದೇವಿಗೆ ಅಭಿಷೇಕ, ಪುಷ್ಪಾರ್ಚನೆ, ವಿಶೇಷ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನೆರವೇರಿಸಲಾಯಿತು. ಬಳಿಕ ದೇವಸ್ಥಾನ ಆವರಣದಲ್ಲಿ ಆಲದಮರ ಮತ್ತು ಬೇವಿನಮರಗಳಿಗೆ ಶಾಸ್ತ್ರೋಕ್ತವಾಗಿ ವೃಕ್ಷವಿವಾಹ ಕಾರ್ಯಕ್ರಮ ನೆರವೇರಿತು. ವಿವಿಧ ವಾದ್ಯಮೇಳ ಹಾಗೂ ಕುಂಭದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಭ್ರಮದ ಹೊನ್ನಾಟ ಜರುಗಿತು.
ಸುನೀಲ ವರ್ಣೇಕರ, ವಿಶ್ವನಾಥ ನೆಲ್ಲಿಗಣಿ, ಅರ್ಚಕ ತಳದಪ್ಪ ಮಾರಪ್ಪನವರ, ವಿಜಯ ಬಿಸರೊಳ್ಳಿ, ಈರಪ್ಪ ಸಾವಂತ್ರಿ, ಈರಪ್ಪ ಮಾರಪ್ಪನವರ, ಬಿ.ಟಿ.ಸಾವಂತ್ರಿ, ಶಿವನಿಂಗ ಕರಜನವರ, ಈರಪ್ಪ ಬಿಸರೊಳ್ಳಿ, ಮಡಿವಾಳಪ್ಪ ಸಾವಂತ್ರಿ, ಈರಪ್ಪ ಕಪರಿ, ಕೀರಪ್ಪ ಮದವಾಲ, ಮಹಾಂತೇಶ ಮದವಾಲ, ಈರಪ್ಪ ಮಾರಪ್ಪನವರ, ಯಮನಪ್ಪ ಮದವಾಲ, ಈರಪ್ಪ ಬಿಸರೊಳ್ಳಿ ಹಾಗೂ ವಿವಿಧೆಡೆ ಭಕ್ತರು ಪಾಲ್ಗೊಂಡಿದ್ದರು.