ಕೈತನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ವನಮಹೋತ್ಸವಕ್ಕೆ ಗಣ್ಯರು ಚಾಲನೆ ನೀಡಿದರು. ಡಾ.ಮೋಹನ ಭಸ್ಮೆ, ಪರಶುರಾಮ ಘಸ್ತೆ, ಜಿ.ಬಿ.ಬಳಗಾರ ಇತರರಿದ್ದರು. 
ಬೆಳಗಾವಿ

ಆರೋಗ್ಯಯುತ ಸಮಾಜಕ್ಕೆ ಶ್ರಮಿಸೋಣ

ಮಮದಾಪುರ: ಮುಂದಿನ ಪೀಳಿಗೆಯ ಭವಿಷ್ಯದ ಹಿತದೃಷ್ಟಿಯಿಂದ ಪರಿಸರ ಸಂರಕ್ಷಣೆ ಬಹುಮುಖ್ಯವಾಗಿದೆ. ಒಂದು ಸಸಿ ನೆಟ್ಟರೆ ಸಾಲದು, ಅದರ ಪೋಷಣೆಗೆ ಶ್ರಮಿಸಿ ಆರೋಗ್ಯಯುತ ಪರಿಸರ ನಿರ್ಮಾಣಕ್ಕೆ ಮುಂದಾಗೋಣ ಎಂದು ತಹಸೀಲ್ದಾರ್ ಡಾ.ಮೋಹನ ಭಸ್ಮೆ ಹೇಳಿದರು.
ಗೋಕಾಕ ತಾಲೂಕಿನ ಕೈತನಾಳ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಜಿಪಂ, ತಾಪಂ, ಸಾಮಾಜಿಕ ಅರಣ್ಯ ವಿಭಾಗ, ಸಾಮಾಜಿಕ ಅರಣ್ಯವಲಯ ಹಾಗೂ ತವಗ ಗ್ರಾಮ ಪಂಚಾಯಿತಿ ಸಂಯುಕ್ತಾಶ್ರಯದಲ್ಲಿ ವಿಶ್ವ ಪರಿಸರ ದಿನದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಪ್ರತಿ ವಿದ್ಯಾರ್ಥಿಯ ತಾಯಂದಿರು ಒಂದೊAದು ಸಸಿ ನೆಡಬೇಕು. ಮಕ್ಕಳು ಸಸಿ ದತ್ತು ಪಡೆದು ಪೋಷಣೆ ಮಾಡಬೇಕೆಂದು ಸಲಹೆ ನೀಡಿದರು.
ತಾಪಂ ಇಒ ಪರಶುರಾಮ ಘಸ್ತೆ ಮಾತನಾಡಿ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಕೃತಿ ಮಾತಾ ಬಚಾವೋ ಆಂದೋಲನ ಕಾರ್ಯಕ್ರಮ ರೂಪಿಸಿವೆ. ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲೂ ಸಮಿತಿ ರಚಿಸಿ ಪರಿಸರ ಉಳಿವಿಗಾಗಿ ಶ್ರಮಿಸೋಣ ಎಂದು ತಿಳಿಸಿದರು.
ಸಿಡಿಪಿಒ ಡಿ.ಎಸ್.ಕುಡವಕ್ಕಲಿಗ ವಿದ್ಯಾರ್ಥಿಗಳಿಗೆ ಸಸಿ ಪೋಷಣಾ ಪ್ರತಿಜ್ಞಾವಿಧಿ ಬೋಧಿಸಿದರು. ಬಿಇಒ ಜಿ.ಬಿ.ಬಳಗಾರ, ವಲಯ ಅರಣ್ಯಾಽಕಾರಿ ಇಮ್ರಾನ್ ಬೇಗ್ ಮುಲ್ಲಾ, ರಮೇಶ ಪೂಜೇರಿ, ಪಿಡಿಒ ಸುನೀಲ ನಾಯಕ, ಎಸ್‌ಡಿಎಂಸಿ ಅಧ್ಯಕ್ಷ ಹನುಮಂತ ಹನಮಸಾಗರ, ಮುಖ್ಯಶಿಕ್ಷಕರಾದ ಎಂ.ಎಸ್.ಅಪ್ಪಯನ್ನವರ, ಬಿ.ಎಚ್.ಭಜಂತ್ರಿ ಇತರರಿದ್ದರು. ಎಸ್.ಎಂ.ಕೋಣಿ ನಿರೂಪಿಸಿದರು. ಬಸವರಾಜ ಸೊಗಲದ ಸ್ವಾಗತಿಸಿದರು. ಎಸ್.ಎಂ.ಸ್ವರಮಂಡಳ ವಂದಿಸಿದರು.