ಚಿಕ್ಕೋಡಿ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ಚಿಕ್ಕೋಡಿ ಘಟಕದ ಸದಸ್ಯತ್ವ ಕರಪತ್ರವನ್ನು ಶಾಸಕ ದುರ್ಯೋಧನ ಐಹೊಳೆ ಬಿಡುಗಡೆ ಮಾಡಿದರು. ಅನಂತಕುಮಾರ ಬ್ಯಾಕೂಡ ಇತರರಿದ್ದರು. 
ಬೆಳಗಾವಿ

ಮಾದರ ಸಂಘಟನೆ ಬಲಪಡಿಸಲಿ

ಚಿಕ್ಕೋಡಿ: ಮಾದರ-ಮಾದಿಗ ಸಮುದಾಯ ಮುಖ್ಯವಾಹಿನಿಗೆ ತರಲು ಸಂಘಟನೆ ಅಗತ್ಯವಾಗಿದೆ ಎಂದು ಶಾಸಕ ದುರ್ಯೋಧನ ಐಹೊಳೆ ಹೇಳಿದರು.
ಪಟ್ಟಣದ ಪ್ರವಾಸಿಮಂದಿರದಲ್ಲಿ ಕರ್ನಾಟಕ ಮಾದರ ಮಹಾಸಭಾ ಚಿಕ್ಕೋಡಿ ಘಟಕದಿಂದ ಈಚೆಗೆ ಹಮ್ಮಿಕೊಂಡಿದ್ದ ಸದಸ್ಯತ್ವ ಸಭೆಯಲ್ಲಿ ಮಾತನಾಡಿ, ಮಾದರ-ಮಾದಿಗ ಸಮುದಾಯದವರು ಆರ್ಥಿಕ, ಸಾಮಾಜಿಕ, ರಾಜಕೀಯ ಹಾಗೂ ಶೈಕ್ಷಣಿಕ ಕ್ಷೇತ್ರಗಳಲ್ಲಿ ಹಿಂದುಳಿದಿದ್ದಾರೆ. ಪಕ್ಷಾತೀತವಾಗಿ ಮಾದರ ಮಹಾಸಭಾ ಸದಸ್ಯತ್ವ ಪಡೆದು ಸಂಘಟನೆ ಬಲಪಡಿಸಬೇಕು ಎಂದರು.
ಅನಂತಕುಮಾರ ಬ್ಯಾಕೂಡ, ಮಾದರ ಸಮುದಾಯದ ಸದಸ್ಯರು ಇದ್ದರು.